Posts

Showing posts from April, 2020

ಕುಡುಕರ ಪರಿತಾಪ ಬಾರ್ ಗೆ ಬಿತ್ತು ಕನ್ನ

Image
ಕೊರೊನ ದಿಂದಾಗಿ ಇಂದು ಇಡೀ ದೇಶವೇ ಲಾಕ್ ಡೌನ್  ಆಗಿದೆ ಕಳೆದ  ಒಂದು  ತಿಂಗಳಿನಿಂದ ಮಧ್ಯ ಮಾರಾಟವನ್ನು  ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಕುಡಿತದ ಚಟಕ್ಕೆ ಬಲಿಯಾದವರ ಗೋಳು ಹೇಳತೀರದಾಗಿದೆ ದಿನ ಪೂರ್ತಿ ದುಡಿದು ಬಂದ ಹಣವನ್ನು  ಸಾರಾಯಿ ಅಂಗಡಿಗೆ ಕಟ್ಟಿ ಹೋಗುತಿದ್ದ  ಜನ ಇಂದು  ಎಣ್ಣೆ ಇಲ್ಲದೆ ಪರದಾಡುತ್ತಿದ್ದಾರೆ , ಇಷ್ಟು ದಿನ ತಮ್ಮ  ಕೈ ಯಲ್ಲಿ ಇದ್ದ ಹಣದಿಂದ ಒಂದಕ್ಕೆ ಎರಡಷ್ಟು  ಹಣನೀಡಿ ಎಣ್ಣೆ ಖರೀದಿಸಿ ಆಗಿತ್ತು ಈಗ ಅವರ ತಾಪ  ಕಡಿಮೆಯಾಗಿಲ್ಲ , ಒಂದು ಬಾಟಲಿ  ಖರೀದಿಗೆ ಯೋಚಿಸುತ್ತಿದ್ದ ಕುಡುಕರು ಈಗ ಬಾರ್ ಗೆ ಕನ್ನ ಹಾಕುವ ದಾರಿ ಕಂಡುಕೊಂಡಿದ್ದಾರೆ ,  ಇದರ ಫಲವೇ ಇಂದು ಹೆಚ್ಚುತ್ತಿರುವ ಬಾರ್ ಕಳ್ಳತನ ಪ್ರಕರಣ ,ಕಳ್ಳಬಟ್ಟಿ ಪ್ರಕರಣಗಳು,ಇಲ್ಲಿ ನೋಡಿ ಇದ್ಕಕೆ ನಿದರ್ಶನ ಎಂಬಂತೆ ಹಾಸನದ ಹೊರವಲಯದಲ್ಲಿರುವ ಬೋವನಹಳ್ಳಿಯಲ್ಲಿರುವ ಶ್ರೀಮತಿ ಸುಕನ್ಯಾ ರವರಿಗೆ ಸೇರಿರುವ ಧನಲಕ್ಷ್ಮಿ ವೈನ್ಸ್   ರೋಲಿಂಗ್ ಸೇಟರ್ ಮುರುದು ಕಳ್ಳತನ ಮಾಡಿದ್ದಾರೆ  , ಕದಿಯಲು ಬಂದ ಕುಡುಕರು ಎಣ್ಣೆ ಸಿಕ್ಕ ಖುಷಿಯಲ್ಲಿ ತಾವು ಮುರಿದ ರೋಲಿಂಗ್ ಸೇಟರ್ ಬಗ್ಗೆಯು ತಲೆಕೆಡಿಕೊಳ್ಳದೆ ಹೋಡಿಹೋಗಿದ್ದರೆ , ಘಟನೆ ನೆಡೆದ ಸ್ಥಳಕ್ಕೆ ಬಡಾವಣೆಯ ಪೋಲೀಸರು ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನೆಡೆಸಿದ್ದಾರೆ,     ...

ಹಾಸನ ಅಬಕಾರಿ ಅಧಿಕಾರಿಗಳಿಂದ ಕ್ಷಿಪ್ರ ಕಾರ್ಯಾಚರಣೆ 22 ಬಾರ್ ಗಳ ಲೆಸೆನ್ಸ್ ಸಸ್ಪೆನ್ಡ್

Image
ಕೊರೊನ ಮಹಾಮಾರಿಯ ಅಬ್ಬರದಿಂದ ದೇಶವೇ ನಡುಗಿಹೋಗಿದ್ದು ಕಳೆದ ಒಂದು ತಿಂಗಳಿನಿಂದ ಇಡೀ ದೇಶವೇ ಲಾಕ್ ಡೌನ್   ಆಗಿದೆ . ಈ ಮಧ್ಯದಲ್ಲಿ ಬಾರ್ ಗಳನ್ನೂ ಸಹ ತೆರೆಯದಂತೆ ತಾಕೀತು ಮಾಡಿದ್ದರು ಸಹ ಹಣ ಮಾಡುವ ದುರಾಸೆಯಿಂದ ಬಾರ್ ಮಾಲೀಕರು ಕದ್ದು  ಮದ್ಯ ಮಾರಾಟ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ , ಈಗಾಗಲೇ ಬೆಂಗಳೂರಿನಲ್ಲಿ ಟೀ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಘಟನೆಗಳು  ಜರುಗಿವೆ, ಇವುಗಳಿಗೆ ದಾಸ್ತಾನುಗಳು ಎಲ್ಲಿಂದ ಸಿಗುತ್ತಿವೆ ಎಂಬ ಮಾಹಿತಿ ಕಲೆಹಾಕುತ್ತ ಹೋದಾಗ ಬೆಳಕಿಗೆ ಬಂದಿದ್ದು ಈ ಬಾರ್  ಗಳು ಇವರಿಂದ ಖರೀದಿ ಮಾಡುವ ಮಧ್ಯವರ್ತಿಗಳು ಅದನ್ನು ಒಂದಕ್ಕೆ ಎರಡು ಪಟ್ಟು  ಮಾರಾಟ ಮಾಡುತ್ತಿದ್ದಾರೆ , ಇದಕ್ಕೆ ಹಾಸನ ಜಿಲ್ಲೆಯು ಸೇರಿಕೊಂಡಿದೆ ಈ ಹಿಂದೆ ನಮ್ಮ ಪತ್ರಿಕೆಯಲ್ಲಿ ಈ ಕುರಿತಾಗಿ ಕೊರೊನ ಮದ್ಯೆ ಕೌಟರ್ ದಂದೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಸುದ್ದಿ ಪ್ರಸಾರ ಮಾಡಿದ್ದೆವು , ಇದರ ಪರಿಣಾಮ ಹಾಸನ ಜಿಲ್ಲೆಯ ಅಬಕಾರಿ ಉಪಯುಕ್ತರಾದ ಶ್ರೀಯುತ ಗೋಪಾಲ ಕೃಷ್ಣ ರವರ ನೇತೃತ್ವದ ತಂಡ ಜಿಲ್ಲಾದ್ಯಂತ 22 ಬಾರ್ ಗಳ  ಮೇಲೆ ದಾಳಿ ನೆಡೆಸಿ ಅದ್ರ ಲೆಸೆನ್ಸ್ ಸಸ್ಪೆನ್ಡ್ ಮಾಡಿದ್ದಾರೆ.  ಇಂತಹ ಒಂದು ಸಮಯದಲ್ಲಿ ಸಂಕಷ್ಟದಲ್ಲಿರುವ ಸಂಸಾರಗಳು ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಈ ಕುಡಿತದ ಚಟ ಇರುವ ಜನ ಜೀವನ ಇನ್ನೋಷ್ಟು ಕಷ್ಟದಾಯಕ ವಾಗುತ್ತದೆ . ಇದನ್ನು ಆರಿತಿರುವ ಅಧಿಕಾರಿಗಳ ಕಾರ್...

ಬಾಂಬೆ ಮಾವ ಬಂದ ಕೊರೊನದ ಆತಂಕ ಹೊತ್ತು ತಂದ

Image
                               ಬಾಂಬೆ ಮಾವ ಬಂದ ಕೊರೊನದ ಆತಂಕ ಹೊತ್ತು ತಂದ  ಕೊರೊನ ಎಂಬ ಮಹಾಮರಿಯಿಂದ ಬೇಸೆತ್ತು ಹೋಗಿರುವ ಜನತೆ ಇನ್ನೇನು ಲಾಕ್ ಡೌನ್ ಮುಗಿಯಬಹುದು ಎಂಬ ಒಂದು ಆಶಾಕಿರಣ ಹೊತ್ತು ಕಾಯುತ್ತಿದ್ದಾರೆ ಈ ನಡುವೆ ಬಾಂಬೆಯಿಂದ ಅಕ್ರಮವಾಗಿ ಹಾಸನದ ಚನ್ನರಾಯಪಟ್ಟಣಕ್ಕೆ ಬಂದು ಇಲ್ಲಿಂದ ಸ್ನೇಹಿತನ ಸಹಕಾರದಿಂದ ತನ್ನೂರಾದ ಮಂಡ್ಯಕ್ಕೆ ತಲುಪಿರುವ ವ್ಯಕ್ತಿಗೆ ಕೊರೊನ ಸೋಂಕು ಮೆಟ್ಟಿರುವುದು ದೃಢವಾಗಿದೆ, ಇವನು ಮಂಡ್ಯದ ನಾಗಮಂಗಲ ತಾಲ್ಲೂಕಿನ ಡಿ . ಸಾತೇನಹಳ್ಳಿ ಗ್ರಾಮದ ವ್ಯಕ್ತಿ ಎಂದು ತಿಳಿದು ಬಂದಿದ್ದು ಇವನ್ನನ್ನು ಕೌರೆಂಟೇನ್ ನಲ್ಲಿ ಇಟ್ಟು ಪರೀಕ್ಷೆ ನೆಡೆಸಿದ್ದು ಕೊರೊನ ಪಾಸಿಟಿವ್ ಇರುವುದು ಕಂಡುಬಂದಿದ್ದು ಇವನ ಟ್ರಾವಲ್ ಹಿಸ್ಟ್ರಿಯನ್ನು ಕಲೆಯಾಕಲಾಗಿದ್ದು ಇವನು ಬಾಂಬೆಯಿಂದ ಉಡುಪಿ ಮಂಗಳೂರು ಮಾರ್ಗವಾಗಿ ಹಾಸನ ತಲುಪಿ ನಂತರ ಪ್ರಯಾಣ ಬೆಳೆಸಿರುತ್ತಾನೆ, ಚನ್ನರಾಯಪಟ್ಟಣದ ಗಡಿಭಾಗದ ಹೆಗ್ಗಡಿಹಳ್ಳಿಯ  ವ್ಯಕ್ತಿಯೊಬ್ಬ ಇವನ   ಜೊತೆಗೆ ಪ್ರಯಾಣ ಬೆಳೆಸಿರುತ್ತಾನೆ ಇದರಿಂದ ಚನ್ನರಾಯಪಟ್ಟಣದ ಗಡಿಭಾಗದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಜೊತೆಗೆ ಬಾಂಬೆಯಿಂದ ಬಂದವ ಭಾನುವಾರ ಒಂದು ಮದುವೆಯಲ್ಲೂ ಪಾಲ್ಗೊಂಡಿದ್ದ . ಆ ಮದುವೆಗೆ ಹಾಸನದ ಗಡಿಭಾಗದ ಹಲವಾರು ಜನರು ಭಾಗಿಯಾಗಿದ್ದರು  ಎಂದು ತಿಳ...

ಹೊಳೆನರಸೀಪುರ ತಾಲೂಕು ಆಡಳಿತದಿಂದ ಅನಧೀಕೃತವಾಗಿ ಖನಿಜ ಸಾಗಾಣಿಕೆ/ಗಣಿಗಾರಿಕೆ ಮಾಡುತ್ತಿದ್ದ ವಾಹನಗಳ ವಿರುದ್ಧ ಬಾರಿ ದಂಡ

Image
ಹೊಳೆನರಸೀಪುರ ತಾಲೂಕು ಆಡಳಿತದಿಂದ  ಅನಧೀಕೃತವಾಗಿ ಖನಿಜ ಸಾಗಾಣಿಕೆ/ಗಣಿಗಾರಿಕೆ ಮಾಡುತ್ತಿದ್ದ ವಾಹನಗಳ ವಿರುದ್ಧ ಬಾರಿ ದಂಡ ಹೊಳೆನರಸೀಪುರ : ಹೋಗಿದ್ದು ಹೋಯ್ತು ನಮ್ಮ ಶಾನಭೋಗನಿಗೇನು? ಎಂಬಂತೆ  ಆಯ್ತು ಇವರ ಕೆಲಸ  ಇಂದು ದೇಶವೇ  ಕೊರೊನ ಭೀತಿಯಲ್ಲಿ ನಡುಗುತ್ತಿರುವಾಗ ಜನರು ಮನೆಯಲ್ಲಿ ಇರಲು ಲಾಕ್ ಡೌನ್ ಮಾಡಿ 144 ಸೆಕ್ಷನ್ ಜಾರಿ ಮಾಡಿದ್ದು ಕಳೆದ  ತಿಂಗಳಿನಿಂದ ಜನರು ಜೀವನ ನೆಡೆಸಲು ಕಷ್ಟ ಪಡುತ್ತಿದ್ದು ಸದ್ಯ ಜೀವ ಉಳಿದರೆ ಸಾಕು ಎಂಬಂತಾಗಿದೆ, ಆದರೆ ಇಲ್ಲಿ ನೋಡಿ ಈ ಸಮಯವನ್ನೇ ಉಪಯೋಗಿಸಿಕೊಂಡ ಕೆಲವು ದಂದೆ ಕೋರರು ಹಣ ಮಾಡುವ ಆಸೆಯಿಂದ ಮಾಡಬಾರದ್ದ ಕೆಲಸ ಮಾಡುತ್ತಿದ್ದಾರೆ, ಅದರಲ್ಲಿ ಅನಧೀಕೃತವಾಗಿ ಖನಿಜ ಸಾಗಾಣಿಕೆ/ಗಣಿಗಾರಿಕೆಮಾಡುತ್ತಿದ್ದಾರೆ . ಇಂತಹ ಘಟನೆ ಕಳೆದ 20/04/2020 ರಂದು ನೆಡೆದಿದೆ , ಅಂದರೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಸಬಾ ಹೋಬಳಿ ಮೂಡಲಹಿಪ್ಪೆ ಗ್ರಾಮದ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದ 1ಜೆ ಸಿ ಬಿ ಮತ್ತು 2 ಟ್ರಾಕ್ಟರ್ ಗಳನ್ನು ಹೊಳೆನರಸೀಪುರ ತಾಲ್ಲೂಕು ತಹಸೀಲ್ದಾರ್ ಕೆ ಆರ್ ಶ್ರೀನಿವಾಸ್ ನೇತೃತ್ವದ ತಂಡ  ಸೆರೆಹಿಡಿದಿದೆ ಘಟನೆಯ ವಿವರ : ಕಳೆದ ತಾರೀಕು 20ರಂದು  ಖಚಿತವಾಗಿ ಮಾಹಿತಿ ಪಡೆದ ತಹಸೀಲ್ದಾರ್ ಕೆ. ಆರ್ ಶ್ರೀನಿವಾಸ್ ನೇತೃತ್ವದ ತಂಡ  ನದಿಯಲ್ಲಿ ಅಕ್ರಮವಾಗಿ ಮರಳುತೆಗೆಯುತ್ತಿದ್ದ 1 ಜೆ ಸಿ ಬಿ ಹಾ...

ಪ್ರಾಣ ಉಳಿಸುವವನ ಪ್ರಾಣ ಕಿತ್ತಿಕೊಂಡ ಜವರಾಯ

Image
          ಪ್ರಾಣ ಉಳಿಸುವವನ ಪ್ರಾಣ ಕಿತ್ತಿಕೊಂಡ ಜವರಾಯ  ಹಾಸನ : ಯಾವುದೇ ವ್ಯಕ್ತಿಗೆ  ಅರೋಗ್ಯ ಕೆಟ್ಟಾಗ ಅಥವಾ ತುರ್ತು ಪರಿಸ್ಥಿತಿ ಬಂದಾಗ ನಮಗೆ ನೆನೆಪಾಗುವುದು ಆಂಬುಲೆನ್ಸ್ ಅಂದರೆ ೧೦೮ ಕಾರಣ ಇವರು ಮಾಡುತ್ತಿರುವ ಸೇವೆ,ಯಾರು  ಕಷ್ಟದಲ್ಲಿ ಕರೆದ ತಕ್ಷಣವೇ ಬಂದು ಕೈ ಹಿಡಿಯುತ್ತಾರೋ  ಅವರೇ ನಮ್ಮ ಬಂದು ಎನ್ನಬಹುದು , ಇಂತಹ ಕೆಲಸವನ್ನು ಇಂದು ಆಂಬುಲೆನ್ಸ್(೧೦೮) ಸೇವೆ ಮಾಡುತ್ತಿದೆ ,  ಸಮಯ ,ಜಾಗದ ಪರಿವಿಲ್ಲದೆ ದುಡಿಯುವ ಇವರ ಜೀವನ ತೋಗುಕತ್ತಿಯ  ಮೇಲಿನ ನಡುಗೆಯಾಗಿದೆ,  ಒಬ್ಬ  ರೋಗಿಯ ಜೀವ ಉಳಿಸಬೇಕಾದರೆ ತನ್ನ ಜೀವದ ಹಂಗನ್ನು ತೊರೆದು ವಾಹನ ಚಾಲನೆ ಮಾಡಿ ನಿಗದಿತ ಸಮಯದಲ್ಲಿ ಆ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ, ಈಗಿನ  ಪರಿಸ್ಥಿತಿಯಲ್ಲಂತೊ ಈ ಕೊರೊನ ಮಹಾಮಾರಿಯನ್ನು  ತೊಲಗಿಸುವ ಕೆಲಸದಲ್ಲಿ ಇವರ   ಪಾತ್ರವು ಇದೆ,  ಅಂತಹ  ಒಂದು ಪ್ರಾಣ ಉಳಿಸುವವನ ಪ್ರಾಣ ವನ್ನು ಇಂದು  ಬೆಳಗ್ಗೆ ಜವರಾಯ ಒಂದು ಲಾರಿಯ ರೊಪದಲ್ಲಿ ಕಿತ್ತುಕೊಂಡಿದ್ದಾನೆ, ಅಂದರೆ ಇಂದು  ಹಾಸನದಲ್ಲಿ ಬೆಳಗ್ಗೆ ೯  ಗಂಟೆಗೆ ಹಾಸನದ  ಹೊಸ   ಬಸ್   ನಿಲ್ದಾಣದ ಬಳಿ ತನ್ನ ಕರ್ತವ್ಯಕ್ಕೆ ಹೋಗುತ್ತಿದ್ದ ೧೦೮ ನ ಚಾಲಕ ರಾಚೇನಹಳ್ಳಿಯ ನಿವಾಸಿ ಚಂದ್ರೇಗೌಡ ಮತ್ತು ಪುಟ್ಟಮ್ಮ ರವರ ಮಗ ...

ಆಲೂರ್ ಪೊಲೀಸರಿಂದ ಮತ್ತೊಂದು ಬೇಟೆ, ಸ್ಯಾಂಡ್ ಮಾಫಿಯಾ ಭೇದಿಸಿದ ಪೊಲೀಸರು, ಉಸುಗು ಕಳ್ಳರ ರೈಡ್ ಹ್ಯಾಂಡ್ ಅಂದರ್

Image
ಆಲೂರು  ಪೊಲೀಸರಿಂದ ಮತ್ತೊಂದು ಬೇಟೆ, ಸ್ಯಾಂಡ್ ಮಾಫಿಯಾ ಭೇದಿಸಿದ ಪೊಲೀಸರು, ಉಸುಗು ಕಳ್ಳರು ರೆಡ್ ಹ್ಯಾಂಡ್ ಅಂದರ್  ಆಲೂರು : ಹಾಸನ ಜಿಲ್ಲೆ ಆಲೂರ್ ಪೊಲೀಸರು ಮತ್ತೊಂದು ಮೆಚ್ಚುಗೆಯ ಕೆಲಸ ಮಾಡಿದ್ದಾರೆ ಅದೇನಾಪ್ಪ ಅಂದ್ರೆ ಉಸುಗು ಕಳ್ಳರನ್ನು ಅಂದರ್ ಮಾಡಿದ್ದು. ರಾಜ್ಯವೇ ಲಾಕ್ಡೌನ್ ಇದೆ ಪ್ರತಿಯೊಬ್ಬರೂ ಪ್ರಾಣಭಯದಿಂದ ತತ್ತರಿಸುತ್ತಿದ್ದಾರೆ ಆದರೂ ಕಳ್ಳರು ತಮ್ಮ ಕಳ್ಳತನವನ್ನು ಮುಂದುವರೆಸಿದ್ದಾರೆ. ಕಳ್ಳರಲ್ಲಿ ಮಹಾಕಳ್ಳರೆಂದರೆ ಉಸುಗು ಕಳ್ಳರು, ಇದರಲ್ಲಿ ಇರೋರೆಲ್ಲ ಸಣ್ಣ ಕಳ್ಳರಲ್ಲ.  ಸೇರಿಕೊಂಡಿದ್ದು ಮಹಾಕಳ್ಳರು ಈ ಕಳ್ಳರ ಸಾಲಿನಲ್ಲಿ ಸರಕಾರೀ ಕಳ್ಳರೂ ಸೇರಿಕೊಂಡಿರುವುದು ನಾಚಿಕೆಗೇಡು ಸರಕಾರಿ ಕಳ್ಳರು ರಾಜ್ಯದ ಇಂತಹ ಉಸುಗು ಕಳ್ಳತನದಲ್ಲಿ ಶಾಮೀಲಾಗಿದ್ದಾರೆ ಅನ್ನೋಕೆ ಈ ಹಿಂದೆ ಗದಗ ಭೂ  ವಿಜ್ಞಾನಿ ಉಸುಗು ಕಳ್ಳ ಸಾಗಾಣಿಕೆ ಮಾಡಿದ್ದು ಮಹಾಸುದ್ದಿ ಸಾಕ್ಷಿಸಮೇತ ಬಯಲು ಮಾಡಿತು.ಆದರೆ ಹಾಸನ ಜಿಲ್ಲೆಯ ಪೊಲೀಸರು ಇಂದು ಉಸುಗು ಕಳ್ಳರನ್ನು ಭಂದಿಸಿ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಇದು ನಿಜವಾಗಿಯೂ ಪೋಲಿಯರಿಗೆ ಮಹಾಸುದ್ದಿ ಧನ್ಯವಾದಗಳನ್ನು ಸಲ್ಲಿಸುತ್ತದೆ.ದಿನಾಂಕ ೨೩/೦೪/೨೦೨೦ ಹಾಸನ ಜಿಲ್ಲೆಯ ಆಲೂರಿನ ಪಿ. ಎಸ್. ಐ ಶ್ರೀ ಆರ್ ಸತ್ಯನಾರಾಯಣ ಹಾಗೂ ಸಿಬ್ಬಂದಿಗಳಾದ ಚಾಲಕ ಶ್ರೀ ಮಂಜುನಾಥ್, ಪಿ ಸಿ ಶ್ರೀ ಮಧು, ಶ್ರೀ ಸುರೇಶ, ಇವರೊಂದಿಗೆ ಕೋವಿಡ್ -19 ಪ್ರಯುಕ್ತ ರೌಂಡ್ಸ್ ನಲ್ಲಿರುವ...

ಆಲೂರ್ ಪೋಲೀಸರ ಕಾರ್ಯಾಚಾರಣೆ ಪಾಪಿಗಳು ಅಂಧರ್ : ಕರೋನಾ ಕಂಟಕದ ಮದ್ಯೆ ಅಂದರ್ ಬಾಹರ್

Image
ಆಲೂರು  ಫೋಲಿಸ ಕಾರ್ಯಾಚಾರಣೆ ಪಾಪಿಗಳ ಅಂಧರ್  ಕರೋನಾ ಕಂಟಕದ ಮದ್ಯೆ ಅಂದರ್ ಬಾಹರ್  ಆಲೂರು : ಹಾಸನ ಜಿಲ್ಲೆ ಆಲೂರ ತಾಲೂಕಿನಲ್ಲಿ ಪುಂಡರ ತಂಡ ಅಂದರ್ ಬಹಾರ್ ಜೂಜಾಟದಲ್ಲಿ ತೊಡಗಿದ್ದರು. ದೂರವಾಣಿಯ ಮೂಲಕ ಪೊಲೀಸರಿಗೆ ಖಚಿತ ಮಾಹಿತಿ ಬಂದ ತಕ್ಷಣ ಕಾರ್ಯಕ್ಕಿಳಿದ  ಸಬ್ ಇನಿಸ್ಪೆಕ್ಟರ್ ಸತ್ಯನಾರಾಯಣ ಮತ್ತು ತಂಡ ಇಂದು ದಿನಾಂಕ 22/04/2020 ರ ಮಧ್ಯಾಹ್ನ 12 ಘಂಟೆಗೆ ಆಲೂರ ವ್ಯಾಪ್ತಿಯ ಕುಂದೂರ ಹೋಬಳಿ ತಟ್ಟೆಕೇರಿ ಗ್ರಾಮದ ಮೋಹನ್ ಬಿನ್ ರಂಗೇಗೌಡ ಇವರ ಮನೆ ಹತ್ತಿರ ಓಣಿಯ ಸಾರ್ವಜನಿಕ ಸ್ಥಳದಲ್ಲಿ ಜೊಜಾಡುತ್ತಿದ್ದ ದಿನೇಶ ಸನ್/ಆಫ್ ನಾರಾಯಣ ಗೌಡ (32ವರ್ಷ ), ಶ್ರೀನಿವಾಸ ಸನ್ ಆಫ್ ಪುಟ್ಟಸ್ವಾಮಿ ಗೌಡ (35 ವರ್ಷ), ಪ್ರತಾಪ್ ಸನ್/ಆಫ್ ವೆಂಕಟರಾಮು (19ವರ್ಷ), ರಾಜು ಸನ್/ಆಫ್ ಯೋಗಣ್ಣ (27ವರ್ಷ), ಕಾರ್ತಿಕ್ ಸನ್/ಆಫ್ ರಾಜೇಗೌಡ (35 ವರ್ಷ), ವರುಣ ಸನ್/ಆಫ್ ಸುರೇಶ (26 ವರ್ಷ), ವಿಜಿ ಸನ್/ಆಫ್ ನಾರಾಯಣಗೌಡ (33 ವರ್ಷ), ಅರುಣಾ ಸನ್/ಆಫ್ ನಾಗರಾಜು (31ವರ್ಷ), ಚಂದ್ರ ಸನ್/ಆಫ್ ಪುಟ್ಟರಾಜು (40 ವರ್ಷ), ಕುಮಾರಸ್ವಾಮಿ ಸನ್/ಆಫ್ ಮಲ್ಲೇಶ್ (34ವರ್ಷ), ಪರಮೇಶ ಸನ್/ಆಫ್ ದ್ಯಾವಪ್ಪ (30ವರ್ಷ), ಆಕಾಶ್ ಸನ್/ಆಫ್ ರಾಮಚಂದ್ರ (25ವರ್ಷ), ರಜತ್ ಸನ್/ಆಫ್ ರಾಮಶೆಟ್ಟಿ (23ವರ್ಷ),ಸಂದೇಶ್ ಸನ್/ಆಫ್ ಮಹೇಶ್ (25ವರ್ಷ), ಮೋಹನ್ ಸನ್/ಆಫ್ ರಂಗೇಗೌಡ (26ವರ್...

ತಾಲೂಕು ಆಡಳಿತದಿಂದ ಕೊರೊನ ವಿರುದ್ಧ ಅಪರಿಮಿತ ಸೇವೆ, ಆಲೂರು ಪೊಲೀಸರಿಂದ ಸಾತ್

Image
ಆಲೂರು : ಕೊರೊನ ಎಂಬ ಮಹಾಮಾರಿ ದೇಶವನ್ನೇ ತನ್ನ ಕೈಯಲ್ಲಿ ಹಿಡಿದಿಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅದರ ವಿರುದ್ಧವಾಗಿ ನಮ್ಮ ಸರ್ಕಾರ ಪ್ರತಿ ಜಿಲ್ಲೆ ತಾಲ್ಲೂಕು , ಮತ್ತು ಪಂಚಾಯಿತಿ ಮಟ್ಟದಲ್ಲೂ ತಂಡ ರಚಿಸಿ ಕೆಲಸ ನಿರ್ವಹಿಸುತ್ತಿದೆ , ಇದರ ಮದ್ಯೆ ನಮ್ಮನ್ನು ರಕ್ಷಿಸುವ ಪೋಲೀಸ್ ಇಲಾಖೆ ತನ್ನ ದಿನ ನಿತ್ಯದ ಕೆಲಸದ ಒತ್ತಡದ ಜೊತೆಗೆ ಈ ಮಹಾಮಾರಿಯನ್ನು ತಡೆಯಲು ರಸ್ತೆ ರಸ್ತೆ ಗಳಲ್ಲೂ ಬೇರಿಕೆಟ್ ಹಾಕಿ  ಅನಾವ್ಯಶಕವಾಗಿ ಹೊರಗೆಡೆ ಬರುವವರನ್ನು ತಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಈ ಮದ್ಯೆ  ಸಂಸಾರವನ್ನು ಕೊಡ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ . ಇದಕ್ಕೆ ನಮ್ಮ ಆಲೂರಿನ ಪೋಲೀಸ್ ವರ್ಗವುಕೊಡ ಸೇರುತ್ತದೆ, ಇವರು ತಾಲ್ಲೂಕು ಆಡಳಿತದೊಂದಿಗೆ ಕೈ ಜೋಡಿಸಿ ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವ ಕೆಲಸ ಮಾಡುತ್ತಿದ್ದಾರೆ ರಾತ್ರಿ ಹಗಲೆನ್ನದೆ ಕೆಲಸ ಮಾಡುತ್ತಿರುವ ಇವರಿಗೆ ರಸ್ತೆಯೇ ಮನೆಯಾಗಿ ಹೋಗಿದೆ  ತನ್ನ ಸಂಸಾರಕ್ಕಿಂತ ತಮ್ಮ ಸುತ್ತ ಮುತ್ತಲಿರುವ ಜನರ ಆರೋಗ್ಯದ ಮೇಲಿನ ಕಾಳಜಿಯಿಂದ ಕಾರ್ಯ ನಿರ್ವಹಿಸುತ್ತಿರುವ ಆಲೂರಿನ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಯುತ ರೇವಣ್ಣರವ ತಂಡ ತಾಲೂಕು ಆಡಳಿತ ಜೊತೆ ಸೇರಿ ಪ್ರತಿ ಹಳ್ಳಿ ಹಳ್ಳಿ ಯಲ್ಲೂ ಹೋಗಿ  ಹೊರಗಿನಿಂದ ಬಂದವರಿಗೆ ಹೋಂ  ಕೋರೆಂಟೇನ್ ಬಗ್ಗೆ ತಿಳಿಸಿ ಅವರನ್ನು ಮನೆಯಲ್ಲಿಯೇ...

ಬಯೋ ಮೆಂಟೆನೆಸ್ ಗೊತ್ತಿಲ್ವಾ ವೈದ್ಯರಿಗೆ

Image
                          ಏನಿದು ರಹಸ್ಯ ಆರೋಗ್ಯ ಮಂತ್ರಿಗಳೇ ಸ್ವಲ್ಪ ವಿಚಾರಿಸಿ ಅರಕಲಗೂಡು : ಇಂದು ದೇಶ ಸಂಕಟದಲ್ಲಿ ನರಳುತ್ತಿರುವಾಗ ಕೊರೊನದಿಂದ ನರಳುತ್ತಿರುವ ರೋಗಿಗಳಿಗೆ ಔಷದೋಪಚಾರ ಮಾಡಲು ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡುತ್ತಿದೆ, ಸರ್ಕಾರಿ ಆಸ್ಪತ್ರೆಗಳಿಗೆ  ಔಷದಿಗಳನ್ನು ಸರಿಯಾದ ಸಮಯದಲ್ಲಿ ತಲುಪಿಸಲು   ಪರದಾಡುತ್ತಿದೆ , ಇಂತಹ ಸಮಯದಲ್ಲಿ ಒಂದು ಗ್ಲೋಕೋಸ್ ಬಾಟಲ್ ಕೊಡ ಒಬ್ಬ ವ್ಯಕ್ತಿಯ ಜೀವ ಉಳಿಸುವ ಸಂಜಿವೀನಿ ಆಗಿದೆ, ಆದ್ರೆ ಕೆಲವು ಆಸ್ಪತ್ರೆ ವ್ಯೆದ್ಯರ & ಸಿಬ್ಬಂದಿಗಳ ನಿರ್ಲಕ್ಷದಿಂದಾಗಿ ಇಂತಹ ವಸ್ತುಗಳು ನಾಶವಾಗಿವೆ. ಇಂತಹ ಒಂದು ಘಟನೆ  ಹಾಸನ ಜಿಲ್ಲೆಯ ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ನೆಡೆದಿದೆ.ಗ್ಲೋಕೋಸ್ ನಾಶಮಾಡಿರುವ ಫೋಟೋಗಳು ಸಾಮಾಜಿಕ  ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಕುರಿತಾಗಿ ವಿಚಾರಿಸಲು ನಮ್ಮ ತಂಡ ಆಸ್ಪತ್ರೆಗೆ ಭೇಟಿ ನೀಡಿದಾಗ  ಸಿಬ್ಬಂದಿ ಸರಿಯಾದ ಪ್ರತಿಕ್ರಿಯೆ ನೀಡಿರುವುದಿಲ್ಲ, ಗ್ಲೋಕೋಸ್ ಬಾಟಲಿಗಳನ್ನು ನಾಶಮಾಡಿರುವ ಆ ಕೊಠಡಿಯನ್ನು ತೋರಿಸುವಂತೆ ಕೇಳಿದರು ಯಾರುಕೊಡ ಕೊಠಡಿ ತೋರಿಸುವ ಕೆಲಸ ಮಾಡಿಲ್ಲ ,ಈ ಕುರಿತಾಗಿ ಅರಕಲಗೂಡು ತಾಲೂಕು ವೈದ್ಯಾಧಿಕಾರಿಗಳನ್ನು ವಿಚಾರಿಸಿದರೆ ಇದು ನನ್ನ ಮಿತಿಯಲ್ಲಿ ಬರುವುದಿಲ್ಲ ಹಾಗಾಗಿ ಆಸ್ಪತ್ರೆಯ ಆ...

ಲಾಕ್ ಡೌನನಲ್ಲೂ ಸಾರ್ವಜನಿಕರಿಗೆ ತೊಂದರೆ ಅಂಚೆ ಇಲಾಖೆಯ ಕಂಠಕ

Image
ಈ ಹಿಂದೆ ಮನುಷ್ಯನ ದುರಾಸೆ ಅತಿಯಾದಾಗ ಅದನ್ನು ಕೊನೆಗಾಣಿಸಲು ದೇವರು ಯಾವುದೊ ಒಂದು ರೀತಿಯಲ್ಲಿ ಸರಿದೊಗಿಸುತ್ತಿದ್ದರು, ಆದರೆ ಈ ಕಲಿಯುಗದಲ್ಲಿ ಮನುಷ್ಯನ ದುರಾಸೆ ಅತಿಯಾದಾಗ ಅದನ್ನು ಕೊನೆಗಾಣಿಸಲು ಪ್ರಕೃತಿಯೇ ತಕ್ಕ  ಪಾಠ ಕಲಿಸುತ್ತಿದೆ.  ಅದೇ ಈ  ಕೊರೊನ ಎಂಬ ಮಹಾಮಾರಿ . ಈ ಮಹಾಮಾರಿ ಇಡೀ ದೇಶವನ್ನೇ ತಲ್ಲಣಗೊಳಿಸುತ್ತಿದೆ. ಜನರು ಮನೆಯಿಂದ ಹೊರಬರಲು ಎದರುತ್ತಿದ್ದರೆ, ಈ ಸಮಯದಲ್ಲಿ ಹಣವಿದ್ದವನು ಹೇಗೋ ಬಚಾವಾಗುತ್ತಾನೆ , ಇಲ್ಲಿ ನಾವು ಯೋಚಿಸಬೇಕಾಗಿರುವುದು ಬಡವನ ಬಗ್ಗೆ ಅದ್ಕಕಾಗಿಯೇ ಸರ್ಕಾರಕ್ಕೆ ಬಾರವಾದರೂ ವಯಸ್ಸಾದವರಿಗೆ ಅಂಗವಿಕಲರಿಗೆ ನೆರೆವಾಗಲಿ ಎಂದು ಋದ್ದಾಪ್ಯ  ವೇತನ ಮತ್ತು ಅಂಗವಿಕಲ ವೇತನವನ್ನು ನೀಡಿದೆ . ಆದ್ರೆ ಗ್ರಾಮೀಣ  ಪ್ರದೇಶದಲ್ಲಿ ವಾಸಿಸುವ ಜನರು ಇಂದು ನಗರಗಳಿಗೆ ಅಥವಾ ಹತ್ತಿರದ ಅಂಚೆ ಕಚೇರಿಗಳಿಗೆ ಹೋಗಿ ಈ ಹಣವನ್ನು ತೆಗೆದುಕೊಳ್ಳ ಬೇಕಾಗಿದೆ, ಇಂದು ಸಾರಿಗೆ ಸಂಪರ್ಕ ಸಂಪೂರ್ಣವಾಗಿ ನಿಂತಿರುವ ಕಾರಣ ಜನರು ದೊರದ ಊರುಗಳಿಂದ ನೆಡೆದೆ ಬರಬೇಕಾಗಿದೆ ವಯಸ್ಸಾದ ಆ ಬಡ ಜೀವ ಕಷ್ಟ ಪಟ್ಟು ಬಂದರು ಕೊಡ ಸರ್ಕಾರಿ ಸಂಬಳ ತಿಂದು ಹೆಗ್ಗಣಗಳಂತೆ ಕೊಬ್ಬಿರುವ ಕೆಲ ಅಧಿಕಾರಿಗಳು ಅವರನ್ನು ಗೊಂಬೆಗಳಂತೆ ಆಡಿಸುತ್ತಿದ್ದರೆ . ಇದಕ್ಕೆ  ನಿದರ್ಶನ ವೆಂಬಂತೆ ಹಾಸನ ಜಿಲ್ಲೆಯ ಆಲೂರಿನ ಅಂಚೆ ಕಚೇರಿಯಲ್ಲಿ ಋದ್ದರು ಅಂಗವಿಕಲರು ತಮ್ಮ ಋದ್ದಾಪ್ಯ ವೇತನವನ್ನು ತೆಗೆದುಕೊಳ್ಳಲು ಹರಸಾಹಸಪಡು...

ಅನುಮತಿ ಇಲ್ಲದೆ ಬೆಂಗಳೂರಿನಿಂದ ಬಂದ ದಂಪತಿಗಳನ್ನು ಹಿಡಿದ ಆಲೂರು ಪೊಲೀಸರು

Image
ಕೊರೊನ ದ ಭೀತಿ ದಿನೇದಿನೇ ಹೆಚ್ಚಾಗುತ್ತಿದ್ದು ಕಳೆದ 14ರಂದು ಮುಗಿಯಬೇಕಿದ್ದ ಲಾಕ್ ಡೌನ್ ಮುಂದಿನ ಮೇ 3 ರ ವರೆಗೆ ವಿಸ್ತರಣೆಯಾಗಿದೆ ಕಾರಣ ಇದರ ಭೀಕರತೆ ಇದು ಯಾವ ರೂಪದಲ್ಲಿ ಬರುತ್ತಿದೆ ಯಾರಿಂದ ಯಾರಿಗೆ ಹರಡುತ್ತಿದೆ ಎಂಬುದೇ ಒಂದು ಪ್ರಶ್ನಿ ಯಾಗಿದೆ, ಕೇವಲ ಒಂದೂವರೆ ವರ್ಷದ ಮಗುವನ್ನು ಕೊಡ ಬಿಡದ ಈ ಮಾರಿ ತನ್ನ ನಾಲಿಗೆಯನ್ನು ಚಾಚುತ್ತಿದೆ, ಇದೆ ಕಾರಣಕ್ಕಾಗಿ ಪ್ರಧಾನಿಯವರು ಯಾರು ಯಾರು ಯಾವ ಯಾವ ಜಾಗದಲ್ಲಿ ಇದ್ದರೋ ಅಲ್ಲಿಯೇ ಇರುವಂತೆ ಕೈ ಮುಗಿದು ಕೇಳಿಕೊಂಡಿದ್ದಾರೆ ಒಬ್ಬ ಪ್ರಧಾನಿ  ತನ್ನ ಜನತೆಯ ಮುಂದೆ ಕೈ ಮುಗಿಯುತ್ತಾನೆ ಎಂದರೆ ಅವ್ರಿಗೆ ತನ್ನ ದೇಶ ಹಾಗೂ ದೇಶದ ಜನತೆಯ ಮೇಲಿರುವ ಕಾಳಜಿ ತಿಳಿಯುತ್ತದೆ ಹಾಗಾಗಿಯೇ ಜನರು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣ ಮಾಡುವುದನ್ನು ಸಂಪೂರ್ಣ ನಿಷೇದಿಸಿದ್ದಾರೆ , ಹಾಗೂ ಒಂದು ವೇಳೆ ಅನಿವಾರ್ಯತೆ ಇದ್ದಾರೆ ಸಂಬಂಧ ಪಟ್ಟ ಪೋಲೀಸ್  ಅಧಿಕಾರಿಗಳಿಂದ ಅನುಮತಿ ತೆಗೆದುಕೊಂಡು ಹೋಗುವಂತೆ  ತಿಳಿಸಿದ್ದಾರೆ , ಇಷ್ಟೆಲ್ಲಾ ಕಾನೂನು ಕ್ರಮ ಕೈ ಗೊಂಡರು ಕೆಲವು ಜನ ತಮ್ಮನ್ನು ತಾವೇ ಮರೆತು ಹೊರಗೆ ಬರುತ್ತಿದ್ದರೆ, ಇದಕ್ಕೆ ನಿದರ್ಶನ ವೆಂಬಂತೆ ಬೆಂಗಳೂರಿನ  ಎಲ್ಟ್ರಾನಿಕ್ ಸಿಟಿಯಲ್ಲಿ  ವಾಸವಾಗಿರುವ ಹಾಸನ ಜಿಲ್ಲೆಯ ದುಂಡನಾಯಕನ ಹಳ್ಳಿಯ ಮೂಲದ ಶಾಲಿನಿ ಮತ್ತು ಅವರ ಪತಿ ಸಂತೋಷ್ ಎಂಬುವವರು ಬೆಗಳೂರಿನಿಂದ ಯಾವುದೇ ಅನುಮತಿಯನ್ನು ಪಡೆಯದೇ ನೇರವಾಗಿ ಆಲೂರಿನ ಪಕ್...

ಎಲ್ಲೋಯ್ತು ಸಾಮಾಜಿಕ ಅಂತರ ? ಬ್ಯಾಂಕಿನಲ್ಲಿ ಹಣ ಪಡೆಯಲು ಮುಗಿಬಿದ್ದ ಜನತೆ

Image
 ಆಲೂರು : ಕೊರೊನ ಎಂಬ  ಮಹಾಮಾರಿಯನ್ನು ದೇಶದಿಂದ ಒಡೆದೋಡಿಸಲು ಇಂದು ನಮ್ಮ ಘನ ಸರ್ಕಾರ ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು ಯಾರು ಕೊಡ ಮನೆಯಿಂದ ಹೊರಗಡೆ ಬರದಂತೆ 21ದಿನಗಳ ಕಾಲ ದಿಗ್ಬಂದನ ಹಾಕಿದ್ದರು, ಆದ್ರೂ ಕೊಡ  ಮಹಾಮಾರಿ   ದಿನೇದಿನೇ  ಹೆಚ್ಚುತ್ತಲೇ ಇದೆ,  ಜನರು ಸಾಮಾಜಿಕ  ಅಂತರವನ್ನು ಕಾಪಾಡಿಕೊಳ್ಳುವಂತೆ ಸಾರಿ ಸಾರಿ ಹೇಳುತ್ತಿದ್ದರು ಮೊಂಡು ಬಿದ್ದಿರುವ ಈ ಜನರಿಗೆ ಈ ಕಾಯಿಲೆಯ ಭೀಕರತೆ ಅರ್ಥವಾಗುತ್ತಿಲ್ಲ, ಇದನ್ನು ಅರಿತ ಪ್ರಧಾನಿಯವರು ಲಾಕ್ ಡೌನ್ ನನ್ನ ಮೇ 3 ರರ ವೆರೆಗೆ ವಿಸ್ತರಿಸಿದ್ದಾರೆ . ಇಂದಿಗೆ  ನಮ್ಮ ರಾಜ್ಯದಲ್ಲಿ 13 ಮಂದಿಯನ್ನು ಬಲಿ ಪಡೆದಿರುವ ಈ ಕಾಯಿಲೆಯ  ಕ್ರೂರತೆಯನ್ನು ನೋಡಿದರೆ ಎಂತಹವರಿಗೂ ಬೆಚ್ಚಿಬೀಳಿಸುತ್ತದೆ .ಆದರೆ ಇದನ್ನು ಅರ್ಥಮಾಡಿಕೊಳ್ಳದ ಕೆಲವು ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಮರೆತೇ ಬಿಟ್ಟಿದ್ದಾರೆ ಈ ಕೊರೊನ  ಎಂಬುದು ನಮಗಲ್ಲ ಎಂಬ  ರೀತಿ ನೆಡೆದುಕೊಳ್ಳುತ್ತಿದ್ದರೆ  ಇದಕ್ಕೆ ಉದಾಹರಣೆ ಎಂಬಂತೆ ಹಾಸನ  ಜಿಲ್ಲೆಯ ಆಲೂರು  ತಾಲ್ಲೂಕಿನ ಪಾಳ್ಯದಲ್ಲಿರುವ ಅಲಹಾಬಾದ್ ಬ್ಯಾಂಕಿನಲ್ಲಿ ಜನರು ವಹಿವಾಟು ನೆಡೆಸಲು ಬ್ಯಾಂಕಿನ ಮುಂದೆ ಮುಗಿ ಬಿದ್ದಿದ್ದ ಘಟನೆ ನೆನ್ನೆ ನೆಡೆದಿದೆ ಸಾಮಾಜಿಕ ಅಂತರದ ಅರಿವೇ ಇಲ್ಲದೆ ನಾ  ಮುಂದು ತಾ ಮುಂದು ಎಂಬಂತೆ ಸಾಲುಗಟ್ಟಿ ನಿ...

ನಿರ್ಗತಿಕರಿಗಾಗಿ ಮಹಾಸುದ್ದಿಯ ಮಾತುಕತೆ , ಮಹಾಸುದ್ದಿಗೆ ಸ್ಪಂದಿಸಿದ ಸಕಲೇಶಪುರ ತಹಸೀಲ್ದಾರ್ ಮಂಜುನಾಥ್

Image
ಕೊರೊನ  ಎಂಬ  ಮಹಾಮಾರಿ  ನಮ್ಮ  ದೇಶವನ್ನೇ ತಲ್ಲಣಗೊಳಿಸುತ್ತಿದೆ ಇದರ ಮದ್ಯೆ ಸಾರ್ವಜನಿಕರು ಯಾರು ಕೊಡ ಮನೆಯಿಂದ ಹೊರಗಡೆ ಬರದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ ಹೀಗಿರುವಾಗ ಹಣವಿದ್ದವನು ಹೇಗೋ ಬಚಾವಾಗುತ್ತಾನೆ.  ಆದ್ರೆ ಇಲ್ಲಿ ನಾವು ಯೋಚಿಸಬೇಕಾಗಿರುವುದು ಮಧ್ಯಮವರ್ಗ ಮತ್ತು ಕೆಳವರ್ಗದ ಜನರ ಸ್ಥಿತಿಗತಿಗಳನ್ನ, ಆದಿನ ದುಡಿದು ತಿನ್ನಬೇಕಾದವರ ಪರಿಸ್ಥಿತಿಯನ್ನ ಒಂದು ದಿನ ಕೆಲಸಕ್ಕೆ ಹೋಗದೆ ಹೋದರೆ ಅಂದು ಜೀವನ ನೆಡೆಸಲು ಕಷ್ಟವಾಗಿರುವವರ ಬಗ್ಗೆ, ದಾನಿಗಳಾದರು ಎಷ್ಟು ದಿನ ತಾನೇ ಕೊಡಲು ಸಾಧ್ಯ , ಕೊತು ತಿನ್ನುವವನಿಗೆ ಕುಡಿಕೆ ಹಣವಿದ್ದರೂ ಸಾಲದು ಎಂಬಂತಾಗಿದೆ ಇಂತಹ ಪರಿಸ್ಥಿತಿಯಲ್ಲಿ ಇನ್ನು ಬಡವರಗತಿ ಹೇಗೆ ಎಂದು ಎಲ್ಲರು ಒಮ್ಮೆ ಯೋಚಿಸಬೇಕಾಗಿದೆ, ಅದ್ಕಕಾಗಿಯೇ ನಮ್ಮ ಘನ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡವರ ಬೆನ್ನೆಲುಬಾಗಿ ನಿಲ್ಲಲು ಪ್ರಯತ್ನಿಸುತ್ತಿದೆ , ಆದರೆ ಈ ಯೋಜನೆಗಳು ಎಷ್ಟೋ ಮಂದಿಗೆ ತಲುಪುತ್ತಿಲ್ಲ ಎಂಬುದಂತೂ ನಿಜ ಸಂಗತಿ . ಇದಕ್ಕೆ ಉದಾಹರಣೆ ಎಂಬಂತೆ ನಮ್ಮ ಪತ್ರಿಕೆ ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಿರೇಕೆರೆ ಮಳಲಿ ಗ್ರಾಮದಲ್ಲಿ ತೋಟದ ಕೆಲಸ ಮಾಡುವ ಕುಟುಂಬಗಳನ್ನು ನಮ್ಮ ತಂಡ ಭೇಟಿಮಾಡಿತು ಅವರನ್ನು ಮಾತನಾಡಿಸಿತು ಆಗ ಹೊರಬಿದ್ದ ಸತ್ಯ ಅಲ್ಲಿ ವಾಸಿಸುತ್ತಿರುವ ಸುಮಾರು ೧೧ ಕುಟುಂಬಗಳು ತೊಂದರೆಯಲ್ಲಿರುವುದು . ಈ...

ಹಾಸನ ಜಿಲ್ಲೆಯ ಕರೋನಾ ಕಳ್ಳರು ; ಬಡವರ ಹಾಲನ್ನೂ ಬಿಡುತ್ತಿಲ್ಲ

Image
ಹಾಸನ ಜಿಲ್ಲೆಯ ಕರೋನಾ ಕಳ್ಳರು ; ಬಡವರ ಹಾಲನ್ನೂ ಬಿಡುತ್ತಿಲ್ಲ   ಕೊರೊನ ಎಂಬ ಮಹಾಮಾರಿಯನ್ನು ಒಡೆದೋಡಿಸಲು ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವ ಜೊತೆಗೆ ಎರಡೆನೆ ಹಂತವಾಗಿ ದೇಶವನ್ನು ಏಪ್ರಿಲ್ ೩೦ ತನಕ ಲಾಕ್ ಡೌನ್ ವಿಸ್ತರಣೆಯನ್ನು ಮಾಡುತ್ತಿದೆ ಇದರಿಂದ ಬಡವರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಪಡಿತರವನ್ನು ನೀಡಲಾಗುತ್ತಿದೆ , ಯಾರಿಗೂ ತೊಂದರೆ ಆಗದಂತೆ ಅರೋಗ್ಯ ಸೇವೆ ಒಡಗಿಸುತ್ತಿದೆ ಆದರೆ ಉಚಿತವಾಗಿ ಕೊಡುತ್ತಿರುವ ಅಕ್ಕಿಯಲ್ಲು ಕೆಲವು  ನ್ಯಾಯಬೆಲೆ ಮಾಲೀಕರು ಹಣಪಡೆದು ಪಡಿತರ ನೀಡುತ್ತಿದ್ದಾರೆ ಬಡವರು ತಿನ್ನುವ ಅಕ್ಕಿಯನ್ನು ಕದ್ದು ತಿಂದಾಯಿತು  ಕುಡಿಯುವ ಹಾಲನ್ನು ಬಿಡುತ್ತಿಲ್ಲ ಈ ಜನರು, ಹಾಲು ಒಂದು ಕುಟುಂಬಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವುದರಿಂದ ಇದನ್ನು ಜನತೆಗೆ ಒದಗಿಸುವುದು  ಮುಖ್ಯವಾಗಿರುವುದರಿಂದ ಹಾಗೂ  ಕೈ ಯಲ್ಲಿ ಹಣವು ಕೊಡ ಇಲ್ಲದಿರುವ  ಕಾರಣ   ಹಾಲನ್ನು ಬಡವರಿಗೆ ಉಚಿತವಾಗಿ ನೀಡಬೇಕು ಎಂದು ತೀರ್ಮಾನಿಸಿ ಉಚಿತವಾಗಿ ನೀಡುತ್ತಿದೆ , ಆದ್ರೆ  ಇದು ನಿಜವಾಗಲೂ ಫಲಾನುಭವಿಗಳಿಗೆ ಸಿಗುತ್ತಿದಿಯೇ ಎಂಬುದು ಒಂದು ಪ್ರಶ್ನೆಯಾಗಿದೆ ,  ಇದಕ್ಕೆ ಉದಾಹರಣೆ ಎಂಬಂತೆ ಹಾಸನ ಜಿಲ್ಲೆಯ ಆಲೂರು ಪಟ್ಟಣ ಪಟ್ಟಣ  ವ್ಯಾಪ್ತಿಯಲ್ಲಿ ಉಚಿತವಾಗಿ ಹಾಲು ನೀಡುತ್ತಿದ್ದು ಇದನ್ನು ಆಯಾ ವಾರ್ಡಿನಲ...

ಲಾಕ್ ಡೌನಾ ? ಅಥವಾ ಲಾಕ್ ಡೌಟ ?

Image
ಕೊರೊನ ಎಂಬ ಮಹಾಮಾರಿಯಿಂದಾಗಿ ಈಗಾಗಲೇ ಇಡೀ ದೇಶವೇ ಲಾಕ್ ಡೌನ್ ಆಗಿದ್ದು ಜನರು ಯಾರೂ ಕೊಡ ಹೋರಗೆ ಬರದಂತೆ ಮತ್ತು ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿದೆ , ಮನೆಯೇ ಇದಕ್ಕೆ ಇರುವ ಮದ್ದು ಎಂದು ಸಾರಿ ಸಾರಿ ಹೇಳುತ್ತಿದ್ದಾರೆ ಆದರೂ ಕೊಡ ಈ ಮಹಾಮಾರಿ ದಿನೇದಿನೇ ಹೆಚ್ಚುತ್ತಲೇ ಇದೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ನಮ್ಮ ಜನತೆಗೆ  ಹೇಳಿದರು ,  ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ ಮೊಂಡುಬಿದ್ದು ಹೋಗಿದ್ದಾರೆ, ಪೋಲೀಸರೂ ಅನಾವಶ್ಯಕವಾಗಿ ಓಡಾಡುವವರಿಗೆ ಲಾಠಿ ಬಿಸಿಯನ್ನು ತೋರಿಸಿಯಾಯಿತು,ಕೈ ಮುಗಿದು ಕೇಳಿಕೊಂಡು ಆಗಿತ್ತು, ಮಂಗಳಾರತಿಯನ್ನು ಎತ್ತಿ ಹೊ ಕೊಟ್ಟು ಹೇಳಿ ಆಯಿತು, ಇಷ್ಟದರೂ ನಮ್ಮ ಜನರು ಹೊರಗಡೆ ಬರುವುದನ್ನು ಕೆಡಿಮೆ ಮಾಡಿಲ್ಲ ಈಗೀರುವಾಗ ಸರ್ಕಾರವು ಏನುತಾನೇ ಮಾಡಲು ಸಾಧ್ಯ , ಹಾಗಾಗಿ ಸರ್ಕಾರದ ಮುಂದೆ ಈಗಿರುವ ಪ್ರಶ್ನಿ ಒಂದೇ. ಈಗಿರುವ ಲಾಕ್ ಡೌನ್ನನ್ನ ಮುಂದುವರಿಸಬೇಕಾ? ಇಲ್ಲಾ ಇದೆ ತಿಂಗಳ ತಿಂಗಳ 14 ಕ್ಕೆ ಕೊನೆಗಳಿಸಬೇಕಾ ಎಂಬುದು ಇದಕ್ಕೆ ಕುರಿತಂತೆ ನಮ್ಮ ಪ್ರಧಾನ ಮಂತ್ರಿಯವರು ಲಾಕ್ ಡೌನ್ ಮುಂದು ವರಿಯುತ್ತದೆ ಎಂಬ ಸುಳಿವನ್ನು ನೀಡಿದ್ದಾರೆ ಹಾಗೂ ಈ ಕುರಿತಾಗಿ ನಮ್ಮ ಮಾನ್ಯ ಮುಖ್ಯಮಂತ್ರಿಯವರು ಇಂದು ಸಚಿವರ ಹಾಗೂ ಅಧಿಕಾರಿಗಳ ಸಭೆ ಕರೆದಿದ್ದು ಫಲಿತಾಂಶ ಯಾವ ರೀತಿ ಇದೆ ಎಂದು ಕಾದು ನೋಡಬೇಕಾಗಿದೆ  ಇದು ಮಹಾ ಸುದ್ದಿಯ ಸುದ್ದಿ ಜಾಲಾ  ಯೋಗ...

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

Image
ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಪತ್ರಿಕೆಯಲ್ಲಿ ವರದಿಮಾಡಿದ್ದು ಇದಕ್ಕೆ ಸಂಬಂಧ ಪಟ್ಟಂತೆ  ಹಾಸನದ ಪೋಲೀಸರು  ಪ್ರತಿ ಬೀದಿಯಲ್ಲೂ ಸಂಚಾರ ಮಾಡಿದ್ದೂ ಕದ್ದು ಮುಚ್ಚಿ  ಕೆಲಸ ಮಾಡುತ್ತಿರುವುದು ಕಂಡುಬಂದಿದ್ದು  ಸ್ವತಃ ಪೋಲೀಸರೇ  ಹೇಳಿದರು ಅವರ ಮಾತಿಗೆ ಕವಡೆ ಕಿಮ್ಮತ್ತು ಕೊಡದೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು, ಈ ಕುರಿತಂತೆ ಹಾಸನ ಜಿಲ್ಲಾ  ಪೋಲೀಸ್ ವರಿಷ್ಟಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಅಧಿಕಾರಿಗಳು ಕೊಡ ಈ ಕುರಿತಾಗಿ ಕ್ರಮ ವಹಿಸುವುದಾಗಿ ನಮಗೆ ತಿಳಿಸಿದ್ದಾರೆ, ಇದು ಇನ್ನೂ ಮುಂದುವರಿ್ದಾರೆ ನಮ್ಮ ಪತ್ರಿಕೆ ಸರ್ಕಾರದ ಗಮನಕ್ಕೆ ತರುತ್ತದೆ ಎಂದು ಸವಿತಾ ಸಮಾಜದ ಪದಾಧಿಕಾರಿಗಳ ಗಮನಕ್ಕೆ ತರುತ್ತಿದೆ   ಇದು ಮಹಾಸುದ್ದಿಯ ಸುದ್ದಿ ಜಾಲ  ಯೋಗೇಶ ಬಿ.ಜೆ  ಮುಖ್ಯ ಕಾರ್ಯನಿರ್ವಾಹಕ ಸಂಪಾದಕ  ಹಾಸನ ಜಿಲ್ಲೆ 

ಕೊರೊನ ಭೀತಿಯಲ್ಲೂ ಕಾಳಸಂತೆಯಲ್ಲಿ ಕೋಳಿ ಮಾರಾಟ ದಂದೆ

ಕೊರೊನ ಎಂಬ ಮಹಾಮಾರಿಯ ಭೀತಿಯಲ್ಲಿ ದೇಶವೇ ನರಳುತ್ತಿರುವಾಗ ಜನರು ಮನೆಯಿಂದಲ್ಲೇ ಹೊರಗಡೆ ಬರಕೊಡದು ಎಂದು ಮಾಧ್ಯಮಗಳಲ್ಲಿ ತಿಳುವಳಿಕೆ ನೀಡುತ್ತಿದ್ದು. ಈ ಮಾರಿ ಯಾವ ರೂಪದಲ್ಲಿ ಹೇಗೆ ಬರುತ್ತಿದೆ ಎಂದು ಕಂಡು ಹಿಡಿಯಲು ದೇಶವೇ ತಲೆಕೆಡೆಸಿಕೊಂಡಿರುವಾಗ, ಯಾರಿಗೆ ಏನಾದರೆ ನನಗೇನು , ಎಂಬಂತೆ ಕಾಳಸಂತೆ  ಕೋರರು ತಮ್ಮ ಕೈ ಚಳಕವನ್ನು ತೋರಿಸುತ್ತಿದ್ದಾರೆ       ಇದಕ್ಕೆ ನಾವೇನು ಕಡಿಮೆ ಇಲ್ಲವೆಂಬಂತೆ ಕೋಳಿಫಾರಂ ಗಳು ಮುಗಿಬಿದ್ದಿವೆ, ಹಾಸನ ಜಿಲ್ಲೆಯಲ್ಲಿ ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಕೋಳಿ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲದಿರುವುದನ್ನು ಮನಗೊಂಡ ಕೆಲವು ಕೋಳಿಫಾರಂ  ಮಾಲೀಕರು ಕಾಳಸಂತೆಯಲ್ಲಿ ತಮಗೆ ಇಷ್ಟ ಬಂದ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ , ಹಾಸನದ ಬೇಲೂರು ರಸ್ತೆಯಲ್ಲಿರುವ ಹೂಲಳ್ಳಿ   ಕಾವಲು  ನಲ್ಲಿರುವ ಕೋಳಿ ಫಾರಂನಲ್ಲಿ ಒಂದು ಕೋಳಿಗೆ 500 ರೂ ಗಳನ್ನು ತೆಗೆದುಕೊಂಡು ಮಾರಾಟ ಮಾಡುತ್ತಿದ್ದ ದೃಶ ನೆನ್ನೆ ಕಂಡುಬಂದಿದೆ, ಯಾವುದೇ ತೊಕ ಮಾಡದೆ ಹೀಗೆ  ಮಾರಾಟ ಮಾಡುವುದು ಜನರನ್ನು ಸುಲಿಗೆ ಮಾಡುತ್ತಿರುವುದಕ್ಕೆ ಸಾಕ್ಷಿ ಆಗಿದೆ . ಈ ಕುರಿತಾಗಿ ಹಾಸನ ಜಿಲ್ಲಾಡಳಿತ ಕೊಡಲೇ ಈ ಫಾರಂ ನ ಮಾಲೀಕರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಂಡು ಇಂಥ ಉಳಿದ ಬೇರೆ ಕೋಳಿಫಾರಂ  ಮಾಲೀಕರು ಈ   ರೀತಿ ಕಾಳಸಂತೆ ಮಾರಾಟಮಾಡುವುದನ್ನು ತಡೆಯಬ...

ಅನವಶ್ಯಕ ತಿರುಗಾಟಕ್ಕೆ ಬ್ರೇಕ್ ಹಾಕಿದ ಚನ್ನರಾಯಪಟ್ಟಣದ ಪೋಲೀಸರು

ನಿನ್ನೆ ಸಂಜೆ ಚನ್ನರಾಯಪಟ್ಟಣದಲ್ಲಿ ಪೋಲೀಸ್ ಅಧಿಕಾರಿಗಳಾದ ಶ್ರೀಯುತ ಕುಮಾರ್ ಸಿ . ಐ  ಮತ್ತು ಶ್ರೀಯುತ ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ಅನವಶ್ಯಕವಾಗಿ ಹೋಡಾಡುತ್ತಿದ್ದ ಸುಮಾರು ೨೦೦ ಕ್ಕೊ ಹೆಚ್ಚು  ದ್ವಿಚಕ್ರವಾಹನ ,ಕಾರು ಮತ್ತು ಆಟೋಗಳನ್ನು  ಸೀಜ್ ಮಾಡಿದ್ದೂ ಲಾಕ್ ಡೌನ್ ಮುಗಿಯುವವರೆಗೂ ಹಿಂಪಡೆಯದಂತೆ  ಸೂಚಿಸಲಾಗಿದೆ .  ಇದು ಮಹಾ ಸುದ್ದಿಯ ಸುದ್ದಿ ಜಾಲ  ಯೋಗೇಶ ಬಿ ಜೆ  ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು  ಹಾಸನ ಜಿಲ್ಲೆ 

ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Image
ಇಂದು ಹಾಸನ ಜಿಲ್ಲೆಯೆ ಕೊರೊನ ಭೀತಿಯಲ್ಲಿ ಮುಳುಗಿರುವಾಗ ಹಾಸನ ಜಿಲ್ಲೆಯ ಆಲೂರು ತಾಲೂಕು ಪಾಳ್ಯ ಹೋಬಳಿ ಹುಲ್ಲಳ್ಳಿಯಲ್ಲಿ ಅಪರಿಚಿತ ವುಕ್ತಿಯ ಶವವು ಕೆರೆಯಲ್ಲಿ ಸಿಕ್ಕಿದೆ , ಈ ವ್ಯಕ್ತಿಯ   ಕುರಿತಾಗಿ  ನಮ್ಮ ತಂಡ ವಿಚಾರಿಸಿದಾಗ ಇವನ ಹೆಸರು  ಶಂಕರ ಎಂದು ತಿಳಿದುಬಂದಿದೆ ಹಾಗೂ ಇವನ  ವಯಸ್ಸು ಸರಿ ಸುಮಾರು ೩೦ ರಿಂದ ೩೫ ವರ್ಷ ಇರಬಹುದು ಎಂದು ಭಾವಿಸಲಗಿದೆ , ಈ ವ್ಯಕ್ತಿಯು ಅಕ್ಷಯ್ ಎಂಬುವವರ ಮನೆಯಲ್ಲಿ ಕಳೆದ ೨೦ ದಿನಗಳಿಂದ ಕೆಲಸ ಮಾಡುತ್ತಿದನೆಂಬುದು ತಿಳಿದು ಬಂದಿದೆ. ಈ ಕುರಿತಾಗಿ ಅಕ್ಷಯ್ ಯವರನ್ನ   ವಿಚಾರಿಸಲು ಈ ವ್ಯಕ್ತಿಯು ಕಳೆದ ೨೦ ದಿನಗಳ ಹಿಂದೆ ಸಕಲೇಶಪುರ ಸಂತೆಯಲ್ಲಿ ಒಬ್ಬನೇ ನಿಂತಿದ್ದು ತನಗೆ ೩ ದಿಗಳಿಂದ ಊಟ ತಿಂಡಿ ಇಲ್ಲ ಹಾಗೂ ತನಗೆ ಏನಾದರು ಕೆಲಸ ನೀಡಬೇಕೆಂದು ನಮ್ಮನ್ನು ಕೇಳಿಕೊಂಡ ಹಾಗಾಗಿ ಅವನನ್ನು ನಮ್ಮ ಹೊಲದಲ್ಲಿ ಶುಂಠಿ ಕೆಲಸ ಮಾಡಲು ಇಟ್ಟಿಕೊಡಿದ್ದಾಗಿ ಹೇಳುತ್ತಾರೆ , ಆದ್ರೆ ಕಳೆದ ೪ ದಿನಗಳ ಹಿಂದೆ ಈ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಿದ್ದು, ಅವ್ನಿಗೆ ಬರಬೇಕಾದ ಸಂಬಳವನ್ನು ಪೂರ್ಣವಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ . ಹಾಗೂ ಈ ವ್ಯಕ್ತಿಯು ಮಧ್ಯಪಾನ ವ್ಯಸನಿಯಾಗಿದ್ದ ಎಂದು ಅಕ್ಷಯ್  ತಿಳಿಸಿದ್ದಾರೆ, ಆದ್ರೂ ಕೊಡ ನಮ್ಮನ್ನು ಕಾಡುವ ಒಂದು   ಪ್ರೆಶ್ನೆ  ಯಾರೇ ಆಗಲಿ ಒಬ್ಬ ಅಪರಿಚಿತ ಹೇಗೆ ಕೆಲಸಕ್ಕೆ ಇಟ್ಟುಕೊಂಡರು? ...