ಹಾಸನ ಜಿಲ್ಲೆಯ ಕರೋನಾ ಕಳ್ಳರು ; ಬಡವರ ಹಾಲನ್ನೂ ಬಿಡುತ್ತಿಲ್ಲ
ಹಾಸನ ಜಿಲ್ಲೆಯ ಕರೋನಾ ಕಳ್ಳರು ; ಬಡವರ ಹಾಲನ್ನೂ ಬಿಡುತ್ತಿಲ್ಲ
ಕೊರೊನ ಎಂಬ ಮಹಾಮಾರಿಯನ್ನು ಒಡೆದೋಡಿಸಲು ನಮ್ಮ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವ ಜೊತೆಗೆ ಎರಡೆನೆ ಹಂತವಾಗಿ ದೇಶವನ್ನು ಏಪ್ರಿಲ್ ೩೦ ತನಕ ಲಾಕ್ ಡೌನ್ ವಿಸ್ತರಣೆಯನ್ನು ಮಾಡುತ್ತಿದೆ ಇದರಿಂದ ಬಡವರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಪಡಿತರವನ್ನು ನೀಡಲಾಗುತ್ತಿದೆ , ಯಾರಿಗೂ ತೊಂದರೆ ಆಗದಂತೆ ಅರೋಗ್ಯ ಸೇವೆ ಒಡಗಿಸುತ್ತಿದೆ ಆದರೆ ಉಚಿತವಾಗಿ ಕೊಡುತ್ತಿರುವ ಅಕ್ಕಿಯಲ್ಲು ಕೆಲವು ನ್ಯಾಯಬೆಲೆ ಮಾಲೀಕರು ಹಣಪಡೆದು ಪಡಿತರ ನೀಡುತ್ತಿದ್ದಾರೆ ಬಡವರು ತಿನ್ನುವ ಅಕ್ಕಿಯನ್ನು ಕದ್ದು ತಿಂದಾಯಿತು ಕುಡಿಯುವ ಹಾಲನ್ನು ಬಿಡುತ್ತಿಲ್ಲ ಈ ಜನರು, ಹಾಲು ಒಂದು ಕುಟುಂಬಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವುದರಿಂದ ಇದನ್ನು ಜನತೆಗೆ ಒದಗಿಸುವುದು ಮುಖ್ಯವಾಗಿರುವುದರಿಂದ ಹಾಗೂ ಕೈ ಯಲ್ಲಿ ಹಣವು ಕೊಡ ಇಲ್ಲದಿರುವ ಕಾರಣ ಹಾಲನ್ನು ಬಡವರಿಗೆ ಉಚಿತವಾಗಿ ನೀಡಬೇಕು ಎಂದು ತೀರ್ಮಾನಿಸಿ ಉಚಿತವಾಗಿ ನೀಡುತ್ತಿದೆ , ಆದ್ರೆ ಇದು ನಿಜವಾಗಲೂ ಫಲಾನುಭವಿಗಳಿಗೆ ಸಿಗುತ್ತಿದಿಯೇ ಎಂಬುದು ಒಂದು ಪ್ರಶ್ನೆಯಾಗಿದೆ , ಇದಕ್ಕೆ ಉದಾಹರಣೆ ಎಂಬಂತೆ ಹಾಸನ ಜಿಲ್ಲೆಯ ಆಲೂರು ಪಟ್ಟಣ ಪಟ್ಟಣ ವ್ಯಾಪ್ತಿಯಲ್ಲಿ ಉಚಿತವಾಗಿ ಹಾಲು ನೀಡುತ್ತಿದ್ದು ಇದನ್ನು ಆಯಾ ವಾರ್ಡಿನಲ್ಲಿ ಗೆದ್ದಿರುವ ಪ್ರತಿನಿಧಿಗಳಿಗೆ ಹಂಚಲು ನೀಡುತ್ತಿದ್ದಾರೆ ಆದ್ರೆ ಕೆಲವು ವಾರ್ಡಿನ ಚುನಾಯಿತ ಪ್ರತಿನಿಧಿಗಳು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು ಬೇಕ ಬೇಕಾದವರಿಗೆ ಹಂಚಿಕೆ ಮಾಡುತ್ತಿದ್ದಾರೆ, ಅದನ್ನು ಕೇಳಲು ಹೋದವರನ್ನು ನಿಂದಿಸುತ್ತಾ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ ಅದಕ್ಕೂ ಹೆಚ್ಚಾಗಿ ವಿಚಾರಿಸಿದರೆ ನಮಗೆ ಕೊಟ್ಟಿರುವುದೇ ಇಷ್ಟು ಅದನ್ನು ನಾವು ಹಂಚಿದ್ದೇವೆ ಎಂದು ಹೇಳುತ್ತಾರೆ , ಹಾಗೆಯೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ವಿಚಾರಿಸಿದರೆ ಅವರೇನು ಕಡಿಮೆಯಿಲ್ಲವೆಂಬಂತೆ ಮಾತನಾಡುತ್ತಿದ್ದಾರೆ , ಈ ಕುರಿತಾಗಿ ನಮ್ಮ ಪತ್ರಿಕೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿದ್ದು ಕೊಡಲೇ ಕ್ರಮ ಕೈ ಗೊಳ್ಳುವಂತೆ ಕೇಳಿಕೊಂಡಿದೆ ಇದಕ್ಕೆ ಅಧಿಕಾರಿಗಳು ಯಾವರೀತಿ ಪ್ರತಿಕ್ರಿಯುಸುತ್ತಾರೆ ಎಂದು ಕಾದುನೋಡಬೇಕಿದೆ
ಇದು ಮಹಾ ಸುದ್ದಿಯ ಸುದ್ದಿಜಾಲ

Comments
Post a Comment