ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ
ಹೊಳೆನರಸೀಪುರ: ದೇಶಕ್ಕೆ ಪ್ರಣಾರ್ಪಣೆ ಮಾಡಿ ಹುತಾತ್ಮರಾದ ಕಾರ್ಗಿಲ್ ವೀರ ಯೋಧರ ಸವಿ ನೆನಪಿಗಾಗಿ ಆಚರಿಸಿದ ಕಾರ್ಗಿಲ್ ವಿಜಯೋತ್ಸವಕ್ಕೆ ಹೊಳೆನರಸೀಪುರದ ಸುಭಾಷ್ ಚೌಕ ಇಂದು ಸಾಕ್ಷಿಯಾಯಿತು, ಪಟ್ಟಣದ ನಿವೃತ್ತ ಯೋಧರು, ದೇಶಾಭಿಮಾನಿಗಳು, ದೇಶ ಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದ ಈ ಸರಳ ಸಮಾರಂಭದಲ್ಲಿ ವೀರ ಯೋಧರ ಭಾವ ಚಿತ್ರಕ್ಕೆ ನಿವೃತ್ತ ಯೋಧರುಗಳಾದ ಮಂಜುನಾಥ್,ಮಂಜೇ ಗೌಡ,ಈಶ್ವರ,ವಸಂತ್ ಕುಮಾರ್
ಅಶೋಕ್,ಶಿವಣ್ಣ ರವರು ಜ್ಯೋತಿಯನ್ನು ಬೆಳಗುವುದರ ಮೂಲಕ ಚಲನೆಯನ್ನು ನೀಡಿದರು. ನಂತರ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ವೀರ ಯೋಧರ ತ್ಯಾಗ ಬಲಿದಾನವನ್ನು ಮುಕ್ತ ಕಂಠದಿಂದ ಶ್ಲಾಘಿಸಲಾಯಿತು, ಇದೇ ಸಂದರ್ಭದಲ್ಲಿ ಪಟ್ಟಣದ ನಾಗಲಾಪುರ ಗ್ರಾಮದ ಜನಾಪದ ಕಲಾವಿದ ಪಟ್ಟ ರಾಜೇ ಗೌಡರು " ಭಾರತಾಂಬೆಯ ಹೆಮ್ಮೆಯ ಮಕ್ಕಳು ನಾವು ನೀವು ಅವರೆಲ್ಲರೂ " ಎಂಬ ದೇಶಭಕ್ತಿ ಗೀತೆಯನ್ನು ಹಾಡಿದರು. ಇದೇ ಸಂದರ್ಭದಲ್ಲಿ ತಮ್ಮಯ್ಯ ಮತ್ತು ವಸಂತ್ ಮಾತನಾಡಿ ಸ್ವದೇಶಿ ವಸ್ತುಗಳನ್ನು ಬಳಸಿ ಎಂದು ಕರೆನೀಡಿ, ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ನಮ್ಮ ವೀರ ಯೋಧರಿಗೆ ಬೆನ್ನೆಲುಬಾಗಿ ಸಹಾಯ ಹಸ್ತವನ್ನು ನೀಡಬೇಕು ಜವಾಬ್ದಾರಿಯುತ ಪ್ರಜೆಗಳಾಗಿ ದೇಶವು ಇಂದು ಕೊರೋನ ಮಹಾ ಮಾರಿಯ ಕಪಿ ಮುಷ್ಠಿಯಲ್ಲಿರಲು ಕೊರೋನ ವಾರಿಯರ್ಸ್ ಗಳಾಗಿ ಹೋರಾಡ ಬೇಕೆಂದು ಮನವಿ ಮಾಡಿದರು,
ತಮ್ಮಯ್ಯ,ಮಹದೇವ್,ರವಿಕುಮಾರ್,ನಾಗೇಂದ್ರ, ದಯಾನಂದ ಬ್ರಾಡ್ವೇ, ನರಸಿಂಹ ಮೂರ್ತಿ,
ಮುತ್ತು ರಾಜ್ ಇನ್ನಿತರರು ಹಾಜರಿದ್ದರು.
ಎಲ್ಲರೂ ಮಾಸ್ಕ್ ಧರಿಸಿ ಬಂದಿದ್ದರು.
ಇದು ಮಹಾಪಾಪಿಯ ಸುದ್ದಿಜಾಲ
ಯೋಗೇಶ ಬಿ ಜೆ
ರಾಜ್ಯ ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ಮಹಾಪಾಪಿ ಪತ್ರಿಕೆ
Comments
Post a Comment