Posts

Showing posts from May, 2020

ಸರ್ಕಾರಕ್ಕೆ ಕಾಣದ ಬಡವರ ಗೋಳು ! ಮನೆಯ ಮಾಲೀಕರಿಗೆ ಚೆಲ್ಲಾಟ ಬಾಡಿಗೆದಾರರಿಗೆ ಪ್ರಾಣ ಸಂಕಟ

Image
ಕೊರೊನ ಮಹಾಮಾರಿಯ ದಾಳಿಯಿಂದ ಇಂದು ಜನತೆ ತ್ತತ್ತರಿಸಿ  ಹೋಗಿದೆ , ಈ ಮಾರಿ  ಯಾವಾಗ, ಯಾರಿಂದ, ಹೇಗೆ ಬಂದು  ಹೊಕ್ಕರಿಸುತ್ತದೆ ಎಂಬುದೇ ತಿಳಿಯುತ್ತಿಲ್ಲ. ಇದನ್ನು ತಪ್ಪಿಸಲು ನಮ್ಮ ಘನ ಸರ್ಕಾರ ಈಗಾಗಲೇ ಇಡೀ ದೇಶವನ್ನೇ ಸರಿ ಸುಮಾರು 40 ದಿನಗಳ ಕಾಲ ಲಾಕ್ ಡೌನ್ ಮಾಡಿತ್ತು , ಹಾಗೂ ಎಲ್ಲರು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿತ್ತು ಇದರ ಪರಿಣಾಮ ದುಡಿಮೆಯಿಲ್ಲದ ಜನರ ಜೀವನ ವ್ಯವಸ್ಥೆ ಸಂಪೂರ್ಣವಾಗಿ ಏರುಪೇರಾಗಿ ಹೋಗಿತ್ತು. ಇಲ್ಲಿ ಹಣ ವಿದ್ದವನು ಹೇಗೂ ಈ ಸಮಸ್ಯೆಯಿಂದ ಪಾರಾಗಿದ್ದಾನೆ ಆದರೆ ಇಲ್ಲಿ ನಾವು ಯೋಚಿಸಬೇಕಾಗಿರುವುದು ಮಧ್ಯಮವರ್ಗದ ಮತ್ತು ಕೊಲಿ ಮಾಡಿ ಬದುಕಬೇಕಾಗಿರುವ ವರ್ಗದ ಬಗ್ಗೆ. ಇದರಲ್ಲಿ ಸರಿ ಸುಮಾರು 50ರಿಂದ 60 ರಷ್ಟು ಜನ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ, ತಮ್ಮ ಪುಟ್ಟ ಬದುಕನ್ನು ಕಟ್ಟಕೊಳ್ಳುವ ಕನಸು ಕಂಡಿರುವ ಇವರು ಈ ಕೊರೊನ ಮಹಾಮಾರಿಯ ದಾಳಿಯಿಂದ ಇಂದು ನಲುಗಿ ಹೋಗಿದ್ದಾರೆ ತಮ್ಮ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಇವರಿಗೆ ತಾವು ಖರೀದಿಸಿದ ಯಾವುದೊ ಒಂದು ಗೃಹ ಬಳೆಕೆಯ ವಸ್ತುವಿನ EMI ಕಟ್ಟಲು ಮನೆ ಬಾಡಿಗೆ ಕಟ್ಟಲು ಪರದಾಡುತ್ತಿದ್ದಾರೆ, ಇದನ್ನು ಅರಿತ ನಮ್ಮ ಸರ್ಕಾರ ಮೂರು ತಿಂಗಳು EMI ಕಟ್ಟಲು ಮತ್ತು ಮನೆ ಬಾಡಿಗೆ ಕಟ್ಟಲು ವಿನಾಯತಿ ಕೊಟ್ಟಿದೆ ಆದರೆ ಇದು ಯಾವುದೇ  ಲಿಖಿತ ಸುತ್ತೋಲೆ ಇಲ್ಲ. ಇದನ್ನೇ ಮುಂದಿಟ್ಟುಕೊಂಡಿರುವ ಮನೆ ಮಾಲೀಕರು ಈ ನಿಯಮ ಬೆಂಗಳೂ...

ತಪ್ಪಾಯ್ತಾ ಲಾಕ್ ಡೌನ್ ಸಡಿಲಿಕೆ ? ಮಿತಿಮೀರುತ್ತಿರುವ ಕೊರೊನ ಮಹಾಮಾರಿಯ ಅಟ್ಟಹಾಸ

Image
ತಪ್ಪಾಯ್ತಾ ಲಾಕ್ ಡೌನ್ ಸಡಿಲಿಕೆ ?  ಮಿತಿಮೀರುತ್ತಿರುವ                    ಕೊರೊನ ಮಹಾಮಾರಿಯ ಅಟ್ಟಹಾಸ  ಇಂದು ದೇಶ ಕೊರೊನ ಮಹಾಮಾರಿಯ ಕೈಯಿಂದ ತಪ್ಪಿಸಿಕೊಳಲು ಹರಸಾಹಸ ಪಡುತ್ತಿರುವಾಗ ವೈದ್ಯರು ದಾದಿಯರು ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ , ಪೋಲೀಸ್ ಇಲಾಖೆ ಬೀದಿಯನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡು ಜನರ ಜೀವ ಉಳಿಸಲು ಹೆಣಗಾಡುತ್ತಿದೆ ಇವೆಲ್ಲದರ ನಡುವೆ ಇಡೀ ದೇಶವನ್ನೇ  ಲಾಕ್ ಡೌನ್ ಮಾಡಿ ಕೊರೊನ ವಿರುದ್ಧ ಹೋರಾಡಿದ ನಮ್ಮ ಸರ್ಕಾರ ದಿನೇದಿನೇ ಆರ್ಥಿಕವಾಗಿ ಹಿಂದೆ ಸರಿಯುತ್ತ ಹೋಯಿತು, ಹಿಂದೆಂದೂ ಕಾಣದ ಮಟ್ಟಿಗೆ ಆರ್ಥಿಕ ಮುಗ್ಗಟ್ಟು ದೇಶದಲ್ಲಿ  ಪ್ರಾರಂಭ ವಾಗುವ ಮುನ್ಸೂಚನೆಗಳು ಕಾಣತೊಡಗಿದವು ಇದರಿಂದ ಚೇತರಿಸಿಕೊಳ್ಳುವ  ಉದ್ದೇಶದಿಂದ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವಾಗ ಕೊರೊನದ  ಕರಾಳತೆ ಕಡಿಮೆಯಾಗುತ್ತ ಬರತೊಡಗಿತು , ಹಾಗೂ ದಿನೇದಿನೇ ಜನರ ಜೀವನ ಸ್ಥಿತಿಯು ಅದಗೆಡುತ್ತಾ ಬರತೊಡಗಿತು  ಇದರಿಂದ ಸರ್ಕಾರ ಕೊರೊನ ತೀವ್ರತೆಯನ್ನು ಅಳೆಯಲು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಲಾಕ್ ಡೌನ್ ನನ್ನ  ನಿದಾನವಾಗಿ ಸಡಿಲಮಾಡುತ್ತಾ ಬಂದಿತು, ಇದರಿಂದ  ಮನೆಯಲ್ಲೇ  ಇದ್ದ ಜನರು  ಕೊರೊನ ಕರಾಳೆತೆಯನ್ನು ಮರೆತು ಸಾಮಾಜಿಕ ಅಂತರವನ್ನು ಮರೆತು ಓಡಾಲು ಪ್ರಾರಂಭಿಸಿ...

ಬದಲಾದ ಆಸ್ಪತ್ರೆಯ ಆಡಳಿತಾಧಿಕಾರಿ

Image
                                        ಫಲಶ್ರುತಿ                   ಬಯೋ ಮೆಂಟೆನೆಸ್ ಗೊತ್ತಿಲ್ವಾ ವೈದ್ಯರಿಗೆ ? ಏನಿದು ರಹಸ್ಯ ಆರೋಗ್ಯ ಮಂತ್ರಿಗಳೇ ಸ್ವಲ್ಪ ವಿಚಾರಿಸಿ ಎಂಬ ಶೀರ್ಷಿಕೆಯ ಅಡಿಯಲ್ಲಿ ದಿನಾಂಕ ೧೯/೦೪/೨೦೨೦ ರಂದು ಸುದ್ದಿ ಪ್ರಕಟಿಸಲಾಗಿತ್ತು ಇದರಿಂದ ಎಚ್ಛೆತ್ತುಕೊಂಡ ಅದಿಕಾರಿಗಳು ಅರಕಲಗೂಡು ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿಪುಷ್ಪಲತಾರವರನ್ನು ಬದಲಾವಣೆ ಮಾಡಿದ್ದಾರೆ  ಹಾಗೂ ಈ ವಿಷಯದ ಕುರಿತಾಗಿ ಇವರಿಂದ ವಿವರಣೆಯನ್ನು  ಕೇಳಿರುತ್ತಾರೆ ಇದು ನಮ್ಮ ಪತ್ರಿಕೆಗೆ ಸಂದ ಫಲಶ್ರುತಿ ಆಗಿದೆ  ಇದು ಮಹಾಪಾಪಿಯ ಸುದ್ದಿಜಾಲ  ಯೋಗೇಶ ಬಿ ಜೆ  ಮುಖ್ಯ  ಕಾರ್ಯನಿರ್ವಾಹಕ ಸಂಪಾದಕರು  ಹಾಸನ ಜಿಲ್ಲೆ 

ಸಂಪಾದಕರ ವಿರುದ್ದ ಸರ್ಕಾರಿ ಕುತಂತ್ರ ,ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳ ಮಸಲತ್ತು

Image
 ಇದು ರಾ ದೇ  ಕಾರಾಭಾರಿ  ರಕ್ಷಣೆಗೆ ತಂಡದವರ ಪತ್ರ ಸಮರ , ರಾ ದೇ  ಕಾರಾಭಾರಿಯವರ ಜೀವಕ್ಕೆ ಆತಂಕ ,ಮಹಾಪಾಪಿ ಪತ್ರಿಕೆ ಕರ್ನಾಟಕದ ರಾಜ್ಯಾದ್ಯಂತ ಪತ್ರ ಚಳುವಳಿ  ರವರಿಗೆ ಮಾನ್ಯ ಜಿಲ್ಲಾಧಿಕಾರಿಗಳು , ಹಾಸನ ಜಿಲ್ಲೆ ,, ಹಾಸನ ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀ ರಾ ದೇ ಕಾರಭಾರಿ ಯವರಿಗೆ ಗದಗ ಬೆಟಗೇರಿ ನಗರಸಭೆಯ ಅಧಿಕಾರಿ ಮತ್ತು ಅವರ ಬೆಂಬಲಿತರಿಂದ ಅಪಾಯವಿದ್ದು ರಕ್ಷಣೆ ನೀಡಲು ಮತ್ತು ಕಾರಭಾರಿ ಯವರು ಸಲ್ಲಿಸಿದ ದೂರು ಅರ್ಜಿಗಳ ತನಿಖೆ ನಡೆಸಲು ರಾಜ್ಯಾದ್ಯಂತ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಮಾನ್ಯರೆ ಈ ಕೆಳಗೆ ಸಹಿ ಮಾಡಿದ ನಾನು ಯೋಗೇಶ ಬಿ ಜೆ   ರಾ ದೇ ಕಾರಭಾರಿಯವರ ಪ್ರಕಾಶನದ ಮಹಾಪಾಪಿ ಪತ್ರಿಕೆ ಮತ್ತು ಅದರ ಅಂಗಸಂಸ್ಥೆ ಮಹಾಸುದ್ದಿ ಅಂತರ್ಜಾಲ ಮಾದ್ಯಮದ ಜಿಲ್ಲಾ ಸಂಪಾದಕನಾಗಿದ್ದು ನಾವು ಪತ್ರಿಕೆಯ ಮೂಲಕ ಸತ್ಯದ ಹೋರಾಟ ಮಾಡುತ್ತೆವೆ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದೆವೆ.ಮಹಾಪಾಪಿ ಪತ್ರಿಕೆಯೂ ಇಗಾಗಲೆ ರಾಜ್ಯದ ಎಷ್ಟೋ ಜಿಲ್ಲೆಗಳಲ್ಲಿ ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಿದ್ದು ಈ ಪೈಕಿ ರಾ ದೇ ಕಾರಭಾರಿಯವರ ಹುಟ್ಟೂರು ಮತ್ತು ಮಹಾಪಾಪಿ ಪತ್ರಿಕೆಯ ಕೇಂದ್ರ ಸ್ಥಳ ಗದಗ ಜಿಲ್ಲೆಯಲ್ಲಿ ರಾ ದೇ ಕಾರಭಾರಿಯವರು ವಿವಿದ ಜನಪರ ಹೋರಾಟಗಳ ಮಃಲಕ ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಿದ್ದು ಇಗಾಗಲೇ ಅವರ ಮೇಲೆ ಸಾಕಷ್ಟು ಬಾರಿ ಹಲ್ಲೆಯಾಗಿರುತ್ತದೆ ಹ...

ಸಾಮಾಜಿಕ ಅಂತರ ಮರೆತ ಮದ್ಯ ಪ್ರಿಯರು ಬಾರ್ ಮುಂದೆ ಮುಗಿಬಿದ್ದ ಜನರು

Image
  ಸಾಮಾಜಿಕ ಅಂತರ ಮರೆತ ಮದ್ಯ ಪ್ರಿಯರು ಬಾರ್ ಮುಂದೆ ಮುಗಿಬಿದ್ದ ಜನರು  ಕೊರೊನ ಮಹಾಮಾರಿಯ ಪರಿಣಾಮ ಬರೋಬ್ಬರಿ ೪೦   ದಿನಗಳ ಕಾಲ ಇಡೀ ದೇಶವೇ ಲಾಕ್ ಡೌನ್ ಆಗಿತ್ತು ಈ ಮಹಾಮರಿಗೆ ಹೆದರಿದ ಜನರು ಮನೆಯಿಂದಲೇ ಹೊರಗೆ ಬರಲು ಹೆದರುತ್ತಿದ್ದರು ಈ ಮದ್ಯೆ ಸರ್ಕಾರ ಮಧ್ಯ ಮಾರಾಟವನ್ನು ನಿಷೇದಿಸಿತ್ತು , ಎಣ್ಣೆಗೆ ದಾಸರದಿದ್ದ ಕೆಲವು ಮಧ್ಯ ಪ್ರಿಯರು ಇದರಿಂದಾಗಿ ಪರಿತಪಿಸುತ್ತಿದ್ದರು ಕೆಲವು ಬಾರ್  ಮಾಲೀಕರು ಕೊಡ ಬಾರ್ ತೆರೆಯಲು ಅನುಮಾತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು ಇದಾವುದಕ್ಕೋ ಬಗ್ಗದ ಸರ್ಕಾರ ಜನರ ಹಿತದೃಷ್ಟಿಯಿಂದ ಮಧ್ಯ ಮಾರಾಟಕ್ಕೆ ಹಿಂದೇಟು ಹಾಕುತ್ತಿತ್ತು , ಆದರೆ ಗ್ರೀನ್ ಜೋನ್ ಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿರುವುದರ ಪರಿಣಾಮ ಮಧ್ಯ ಮಾರಾಟಕ್ಕೆ ಅನುಮತಿ ನೀಡಿದೆ , ಇದರಿಂದ ಮಧ್ಯ ಪ್ರಿಯರಿಗೆ ಮರುಭೂಮಿಯಲ್ಲಿ ಹೊಯಾಸಾಸ್ ಸಿಕ್ಕೋಷ್ಟು ಸಂತೋಷವಾಗಿದೆ, ಕೊರೊನ ಮಹಾಮಾರಿಯ ಭೀಕರತೆಯನ್ನು ಮರೆತ ಜನ ಇಂದು ಬಾರ್ ಗಳ ಮುಂದೆ ಚಪ್ಪಲಿ ಬಾಕ್ಸ್ ಗಳನ್ನು ಹಿಟ್ಟು ಎಣ್ಣೆಗಾಗಿ ಕಾಯುತ್ತಿದ್ದರು, ಇನ್ನು ಕೆಲವು ಕಡೆ ಬಾರ್ ಮುಂಭಾಗದಲ್ಲಿ ಹಬ್ಬಕ್ಕೆ ಸಿಂಗಾರ ಮಾಡುವ ರೀತಿ  ಅಲಂಕಾರ ಮಾಡಿದ್ದ ದೃಶಗಳು ಕಂಡುಬಂದಿದ್ದು ಅಲ್ಲದೆ   ಬೆಳ್ಳಂಬೆಳಗ್ಗೆ ಮಧ್ಯ ಪ್ರಿಯರು ಬಾರ್ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿತು , ಈ ಮದ್ಯೆ ಇವರು ಸರ್ಕಾರ ಕೊಟ್ಟರುವ ನಿಯಮ...

ತನ್ನ ಕರುಳಕುಡಿಯನ್ನು ಹೊಸಗಿ ಆತ್ಮಹತ್ಯೆ ಮಾಡಿಕೊಂಡ ತಾಯಿ , ಆಗಿದ್ದಾದರೂ ಏನು ?

Image
   ಕೊರೊನ ಮದ್ಯೆ ದೇಶವೇ ತಲ್ಲಣಿಸಿ ಹೋಗಿರುವಾಗ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವಾಗ  ಎಷ್ಟೋ ಜನ ಅನ್ನಕ್ಕಾಗಿ ಸರ್ಕಾರವನ್ನು ಬೇಡಿಕೊಳ್ಳುತ್ತಿದ್ದರೆ, ಅಂದರೆ ತಮ್ಮ ಬದುಕು ಮತ್ತು ತಮ್ಮ ಪ್ರಾಣದ ಬೆಲೆ ಅವರಿಗೆ ತಿಳಿದಿದೆ , ಆದರೆ ಇದರ ಯಾವ ಅರಿವೇ ಇಲ್ಲವೆಂಬಂತೆ ತನ್ನ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿ ತಾನು ಕೊಡ ನೇಣಿಗೆ ಶರಣಾಗಿರುವ ಗಟನೆ ನೆಡೆದಿದೆ , ಅದು ಎಲ್ಲಿ ಎಂದು    ಕೇಳುವಿರಾ ? ಬೇರೆಲ್ಲೊ ಅಲ್ಲ ಅದು ಹಾಸನದಲ್ಲಿ , ಹಾಸನದ ಕೆ.ಎಂ ಫ್ ನಲ್ಲಿ ಕೆಲಸ ಮಾಡುತ್ತಿರುವ ಪಡುವಲಹಿಪ್ಪೆಯ  ಗ್ರಾಮದ ಗುರು (೩೮ ವರ್ಷ ) ಎಂಬುವವರ ಪತ್ನಿ ರೂಪ (೩೬ವರ್ಷ ) ಕಳೆದ ರಾತ್ರಿ ತನ್ನ ೬ವರ್ಷದ ಮಗು ಬಿಂದುವನ್ನು ಉಸಿರುಕಟ್ಟಿ ಸಾಯಿಸಿ ತಾನು ಕೊಡ ನೇಣಿಗೆ ಶರಣಾಗಿದ್ದಾಳೆ, ಯಾವ ತಾಯಿಯೇ ಆದರೂ ತನ್ನ ಕರುಳ ಕುಡಿಯನ್ನು ಕಿತ್ತು ಜನ್ಮ ನೀಡಿ ಸಾಕಿ ಸಲಹಿದ ತನ್ನ ಮಗುವನ್ನೇ ಕೊಲ್ಲುವ ಕೃತ್ಯ ಹೆಸಗಿದ್ದಾಳೆ ಎಂದರೆ ಅವಳ ಮನಸ್ಸಿನಲ್ಲಿ ಏನೆಲ್ಲಾ ನೆಡೆದಿರಬಹುದು ಎಂದೊಮ್ಮೆ ಯೋಚಿಸಬೇಕಾಗುತ್ತದೆ, ಒಂದು ತಾಯಿಯ ಹೃದಯ ಇಷ್ಟು ಕಠೋರವಾಗಬೇಕಾದರೆ ಆ ತಾಯಿಗೆ ಆಗಿದ್ದಾದರೂ ಏನು ?    ಊಹಾ ಪೋಹ ಗಳು :  ನಮ್ಮ ತಂಡ ಈ ವಿಷಯದ ಕುರಿತಾಗಿ ವರದಿ ಸಂಗ್ರಹಿಸಲು ಹೋದಾಗ ಗುರು ಇಸ್ಪೀಟ್ ಆಟದ ದಾಸನಾಗಿದ್ದು ಅದ್ಕಕಾಗಿ ತುಂಬಾ ಸಾಲ ಮಾಡಿದ್ದೂ ಈ ವಿಷಯಕ್ಕಾಗಿ ದಂಪತಿಗಳ ನಡುವೆ ಹಾಗಾಗ...

ಹೇಮಾವತಿ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ಯುವಕರ ಸಾವು

Image
                 ಹೇಮಾವತಿ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ಯುವಕರ ಸಾವು  ಅರಕಲಗೂಡು: ಕಳೆದ ವಾರವಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯೋಧ ಅರಕಲಗೂಡು ಸಮೀಪದ ಕಟ್ಟೇಪುರ ಹೊಳೆಯಲ್ಲಿ ಮುಳುಗಿ ಸಾವು ರಕ್ಷಿಸಲು ಹೋದ ಸಂಬಂಧಿಯೂ ನೀರು ಪಾಲುಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯೋಧ ಸೇರಿದಂತೆ ಇಬ್ಬರ ಸಾವು ಲಾಕ್‌ಡೌನ್‌ ಸಮಯದಲ್ಲಿ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯೋಧ ಸೇರಿದಂತೆ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಕೊಡ್ಲಿಪೇಟೆ ಹೋಬಳಿಯ ಬೆಸೂರು ನಿಲುವಾಗಿಲಿನಲ್ಲಿ ಇಂದು ಸಂಭವಿಸಿದೆ. ಬೆಸೂರು ನಿಲುವಾಗಿಲು ಗ್ರಾಮದ ಲತೇಶ್ ಹಾಗೂ ಸೈನಿಕನಾಗಿರುವ ಲೋಕೇಶ್ (28) ಮೃತಪಟ್ಟವರು.ಲೋಕೇಶ್ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದು  ಅರಕಲಗೂಡು ಅರೆಹಳ್ಳಿಯಿಂದ ತಮ್ಮ ಸಂಬಂಧಿ ನಿಲುವಾಗಿಲುವಿನ ಲತೇಶ್  ಮನೆಗೆ ಬಂದಿದ್ದರು. ಇಂದು ಹೇಮಾವತಿ ಹಿನ್ನೀರಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ ಸಾವಿಗಿಡಾಗಿದ್ದಾರೆ. ಕಳೆದ ವಾರವಷ್ಟೆ ಲೋಕೇಶ್ ಅವರಿಎ ವಿವಾಹ ನಿಶ್ಚಿತಾರ್ಥ ಆಗಿತ್ತು.ವಿಷಯ ತಿಳಿಯುತ್ತಿದ್ದಂತೆ ಶನಿವಾರ ಸಂತೆ ಪೊಲೀಸರು ಮತ್ತು ಸೋಮವಾರ ಪೇಟೆ ಆಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರ  ಮೃತದೇಹಗಳನ್ನು  ನದಿಯಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರ...