ತಪ್ಪಾಯ್ತಾ ಲಾಕ್ ಡೌನ್ ಸಡಿಲಿಕೆ ? ಮಿತಿಮೀರುತ್ತಿರುವ ಕೊರೊನ ಮಹಾಮಾರಿಯ ಅಟ್ಟಹಾಸ

ತಪ್ಪಾಯ್ತಾ ಲಾಕ್ ಡೌನ್ ಸಡಿಲಿಕೆ ?  ಮಿತಿಮೀರುತ್ತಿರುವ  

                 ಕೊರೊನ ಮಹಾಮಾರಿಯ ಅಟ್ಟಹಾಸ 


ಇಂದು ದೇಶ ಕೊರೊನ ಮಹಾಮಾರಿಯ ಕೈಯಿಂದ ತಪ್ಪಿಸಿಕೊಳಲು ಹರಸಾಹಸ ಪಡುತ್ತಿರುವಾಗ ವೈದ್ಯರು ದಾದಿಯರು ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ , ಪೋಲೀಸ್ ಇಲಾಖೆ ಬೀದಿಯನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡು ಜನರ ಜೀವ ಉಳಿಸಲು ಹೆಣಗಾಡುತ್ತಿದೆ ಇವೆಲ್ಲದರ ನಡುವೆ ಇಡೀ ದೇಶವನ್ನೇ  ಲಾಕ್ ಡೌನ್ ಮಾಡಿ ಕೊರೊನ ವಿರುದ್ಧ ಹೋರಾಡಿದ ನಮ್ಮ ಸರ್ಕಾರ ದಿನೇದಿನೇ ಆರ್ಥಿಕವಾಗಿ ಹಿಂದೆ ಸರಿಯುತ್ತ ಹೋಯಿತು, ಹಿಂದೆಂದೂ ಕಾಣದ ಮಟ್ಟಿಗೆ ಆರ್ಥಿಕ ಮುಗ್ಗಟ್ಟು ದೇಶದಲ್ಲಿ  ಪ್ರಾರಂಭ ವಾಗುವ ಮುನ್ಸೂಚನೆಗಳು ಕಾಣತೊಡಗಿದವು ಇದರಿಂದ ಚೇತರಿಸಿಕೊಳ್ಳುವ  ಉದ್ದೇಶದಿಂದ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವಾಗ ಕೊರೊನದ  ಕರಾಳತೆ ಕಡಿಮೆಯಾಗುತ್ತ ಬರತೊಡಗಿತು , ಹಾಗೂ ದಿನೇದಿನೇ ಜನರ ಜೀವನ ಸ್ಥಿತಿಯು ಅದಗೆಡುತ್ತಾ ಬರತೊಡಗಿತು  ಇದರಿಂದ ಸರ್ಕಾರ ಕೊರೊನ ತೀವ್ರತೆಯನ್ನು ಅಳೆಯಲು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಲಾಕ್ ಡೌನ್ ನನ್ನ  ನಿದಾನವಾಗಿ ಸಡಿಲಮಾಡುತ್ತಾ ಬಂದಿತು, ಇದರಿಂದ  ಮನೆಯಲ್ಲೇ  ಇದ್ದ ಜನರು  ಕೊರೊನ ಕರಾಳೆತೆಯನ್ನು ಮರೆತು ಸಾಮಾಜಿಕ ಅಂತರವನ್ನು ಮರೆತು ಓಡಾಲು ಪ್ರಾರಂಭಿಸಿದರು ,ಹಾಗಾದರೆ ಸರ್ಕಾರ ಲಾಕ್ ಡೌನ್ ಸಡಿಲ ಮಾಡಿದ್ದು ತಪ್ಪಾಯಿತಾ ? ಜನರ ಹಿತದೃಷ್ಟಿಯಿಂದ ಸಡಿಲವಾದ ಲಾಕ್ ಡೌನ್ನಿಂದಾಗಿ ಇಂದು ಕೊರೊನ ಮಹಾಮಾರಿ ಒಂದು ಕಡೆಯಿಂದ  ಮತ್ತೊಂದು ಕಡೆಗೆ ಸುಲಭವಾಗಿ ಸಂಚರಿಸಲು ಸಹಕಾರಿಯಾಯಿತು ಎನ್ನಬಹುದು , ಕಾರಣ ಜನತೆ ಸ್ಥಳ ಬದಲಾವಣೆ ಮಾಡತೊಡಗಿದರು ಇದರ ಜೊತೆಗೆ ಈ ಮಹಾಮಾರಿಯನ್ನು ಕರೆದೊಯ್ಯತೊಡಗಿದರು ಇದರಿಂದ ಕಡಿಮೆಯಾಗುತ್ತಿದ್ದ ಕೊರೊನ ಇಂದು ಮತ್ತೆ ತಲೆ ಎತ್ತಿ ನಿಲ್ಲುತಿದೆ ಮುಂದಿನ ದಿನಗಳಲ್ಲಿ ಇದ್ರ ಕರಾಳತೆಯನ್ನು ನೆನೆಸಿಕೊಂಡರೆ ಒಮ್ಮೆ ಮೈ ಜುಮ್ ಎನ್ನಿಸುತ್ತದೆ, ಮಧ್ಯಪಾನ ಪ್ರಿಯರಿಗೆ ಮಧ್ಯವೇನೂ ಸಿಕ್ಕಿತು ಸರ್ಕಾರಕ್ಕೆ ಆದಾಯವು ಆಯಿತು ಆದರೆ ಇವರಲ್ಲಿ ಎಷ್ಟು ಜನರಿಗೆ ಕೊರೊನ ಒಕ್ಕರಿಸಿತ್ತು ಎಂಬುದು ಯಾರಿಗೂ ಗೊತ್ತಿಲ್ಲ ಸದ್ಯಕ್ಕೆ ಇವತ್ತಿನ ಮಟ್ಟಿಗೆ ಆರೋಗ್ಯದಿಂದ ಕಾಣುತ್ತಿರುವ ಮದ್ಯ ಪ್ರಿಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದಂತೂ ಖಂಡಿತವಾಗಿ ಎದ್ದು ಕಾಣುತ್ತುದೆ




ಇದು ಮಹಾಪಾಪಿಯ  ಸುದ್ದಿಜಾಲ 

Comments

Popular posts from this blog

ಸಿಂಹ ಗರ್ಜನೆ ಮಾಡುತ್ತಿರುವ ಡಿ ವೈ ಎಸ್ ಪಿ ಶ್ರೀಯುತ ಗೋಪಿಯವರ ತಂಡ ಸಕಲೇಶಪುರ ಪೋಲೀಸರಿಂದ ಭರ್ಜರಿ ಭೇಟೆ

ಸರ್ಕಾರಕ್ಕೆ ಕಾಣದ ಬಡವರ ಗೋಳು ! ಮನೆಯ ಮಾಲೀಕರಿಗೆ ಚೆಲ್ಲಾಟ ಬಾಡಿಗೆದಾರರಿಗೆ ಪ್ರಾಣ ಸಂಕಟ