Posts

Showing posts from March, 2020

ದಕ್ಷ ಪೋಲೀಸ್ ಅಧಿಕಾರಿ ಶ್ರೀ ಗೋಪಿಯವರನ್ನು ಕುರಿತು ಒಂದಿಷ್ಟು ಮಾತು

Image
ಪೋಲೀಸ್ ಎಂಬ ಪದವೆ ಒಂದು ಗಡುಸಾದ ವಾಕ್ಯ , ಆರಕ್ಷಕ ರು ನಮ್ಮೆಲ್ಲರ ನೆಮ್ಮದಿಯ ಹೊಣೆಗಾರಿಕೆ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು  ಕಾರಣ  ಇಷ್ಟೆ,  ಇಂದು ನಾವೆಲ್ಲರೂ ನಮ್ಮ ಮನೆಯಲ್ಲಿ ಯಾವುದೇ  ಇಲ್ಲದೆ  ಭಯವಿಲ್ಲದೆ ನಿದ್ರಿಸುತ್ತಿದ್ದೇವೆ ಎಂದರೆ ಕಾರಣ  ಹಗಲಿರುಳೆನ್ನದೆ ನಮ್ಮನ್ನು ಕಾಯುತ್ತಿರುವ ಆರಕ್ಷಕ ರು, ಈ   ನಮ್ಮ ಆರಕ್ಷಕ ರು ಅವರ ಸಂಸಾರದ ಜವಾಬ್ದಾರಿಗಿಂತ ನಮ್ಮಗಳ ರಕ್ಷಣೆಯ ಜವಾಬ್ದಾರಿಯನ್ನು ಅವರ ಹೆಗಲ ಮೇಲೆ ಹಾಕಿಕೊಂಡು ನಮ್ಮನ್ನು ಕಾಯುತ್ತಾರೆ ರಾತ್ರಿ ನಾವು ಮಲಗಿದರೆ ಆರಕ್ಷಕ ರು ನಮಗಾಗಿ ಎಚ್ಚರವಾಗಿರುತ್ತಾರೆ, ಇಂತಹ ಇಲಾಖೆಯಲ್ಲಿ ಕರ್ತವ್ಯ  ನಿರ್ವಹಿಸುತ್ತಿರುವ ದಕ್ಷ ಹಾಗೂ ಧೀಮಂತ ಪೋಲೀಸ್ ಅಧಿಕಾರಿಯಾದ ಸಕಲೇಶಪುರ ಉಪ ವಿಭಾಗದ ಪೋಲೀಸ್ ಉಪಾಧೀಕ್ಷಕರಾದ ಶ್ರೀಯುತ  ಗೋಪಿಯವರನ್ನು ತಮ್ಮೆಲ್ಲರಿಗೂ ಒಂದಿಷ್ಟು ಪರಿಚಯ  ಮಾಡಿಕೊಡುವ ಸಣ್ಣ ಪ್ರಯತ್ನ ನಮ್ಮದು.         ಸಕಲೇಶಪುರ ಉಪ ವಿಭಾಗದ ಪೋಲೀಸ್ ಉಪಾಧೀಕ್ಷಕರಾದ ಶ್ರೀಯುತ  ಗೋಪಿ ಹುಟ್ಟಿದ್ದು  ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದಲ್ಲಿ ಶ್ರೀಯುತ ರಾಜನಾಯ್ಕ ಮತ್ತು ಶ್ರೀಮತಿ ಲಲಿತ ಬಾಯಿಯವರ ಮೊದಲ ಮಗನಾಗಿ ಜನಿಸಿದ ಇವರು ಒಂದು ತುಂಬಾ ಬಡ ಕುಟುಂಬದಲ್ಲಿ ಬೆಳೆದು ಬಾಲ್ಯದಲ್ಲಿಯೇ ದೇಶ ಪ್ರೇಮವನ್ನು ಮೈ ಗೊಡಿಸಿಕೊಂಡು ಬೆಳೆದರು , ದೇಶ ಸೇವೆಯನ್ನು ಮಾಡಬೇಕು ಎಂಬ ಅಂಬಲವನ್ನು ಹೊಂದಿದ್ದ ಶ್ರೀಯುತರು ಭಾರತೀಯ ಸೇನೆಯನ್ನು ಸೇರಿ ೧೫ ವರ

ಎಲ್ಲರೂ ಮಾಸ್ಕ್ ಹಾಕಿಕೊಳ್ಳುವ ಅಗತ್ಯ ಇಲ್ಲ ಅರೋಗ್ಯ ಮತ್ತು ಕುಟುಂಬ ಇಲಖೆಯಿಂದ ಪ್ರಕಟಣೆ

Image
  ಹೆಚ್ಚಾದ ಮಾಸ್ಕ್ ಹಾವಳಿ ಬ್ಲಾಕ್ ನಲ್ಲಿ ಮಾಸ್ಕ್ ಗಳನ್ನು ದುಬಾರಿ ಬೆಲೆಯಲ್ಲಿ ನಕಲಿ ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್  ಸರ್ವೀಸ್ ಎಲ್ಲರು ಮಾಸ್ಕ್ ಧರಿಸುವ ಅಗತ್ಯ  ಇಲ್ಲ ಎಂದು ಎಂದು ಪ್ರಕಟಿಸಿದೆ . ಯಾರು ಸೀತ , ಕೆಮ್ಮು, ನೆಗಡಿ , ಉಸಿರಾಟದ ತೊಂದರೆ ಯಿಂದ , ಜ್ವರದಿಂದ ಅಥವಾ ಇತರೇ ಸಮಸ್ಯೆಯಿಂದ ಬಳಲುತ್ತಿರುವವರು, ಅರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರು, ಸಾರ್ವಜನಿಕರೊಂದಿಗೆ ಹೆಚ್ಚು ಇರುವವರು , (ಪೊಲೀಸರು), ಪವ್ರ ಕಾರ್ಮಿಕರು , ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ , ಅದು ಇಂತಹ ಮಾಸ್ಕ್ ಧರಿಸಬೇಕು ಎಂಬುದರ ಬಗ್ಗೆ ತಿಳಿಸಿರುವ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್  ಸರ್ವೀಸ್   N95  ಮಾಸ್ಕ್ ನೇ ಉಪಯೋಗಿಸಬೇಕು ಎಂದು ತಿಳಿಸಿದೆ. ಇದಕ್ಕೆ ಸಂಬಂದಿಸಿದ ವಿವರ ಕೆಳೆಗೆ ನೀಡಲಾಗಿದೆ .  ಇದು ಮಹಾಪಾಪಿ ಪತ್ರಿಕೆಯ  ಸುದ್ದಿ ಜಾಲ 

ಹಾಸನ ಜಿಲ್ಲೆಯಲ್ಲಿ ಕೊರೊನ ಪಾಸಿಟಿವ್ ಇಲ್ಲ, ಹಾಸನ ಜಿಲ್ಲಾಧಿಕಾರಿಗಳಿಂದ ಸ್ವಷ್ಟನೆ

Image
ಸಾರ್ವಜನಿಕರು ಸುಳ್ಳು ವದಂತಿಗಳಿಗೆ ಕಿವಿಕೊಡಬಾರದು ಎಂದು ಹಾಸನ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿಮಾಡಿಕೊಂಡಿದ್ದಾರೆ,             ಹಾಗೆಯೆ ಮೈಸೂರು ಜಿಲ್ಲೆ ನಂಜನಗೂಡಿನ ಕೊರೊನ ಸೋಂಕಿತರೊಂದಿಗಿದ್ದ ಹಾಸನ ಜಿಲ್ಲೆಯ ಮೂವರ ನಾಪತ್ತೆ ಬಗ್ಗೆ ಪತ್ರಿಕಾ ವರದಿಗಾರರೊಂದಿಗೆ  ಮಾತನಾಡಿದ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲೆಯ ನಂಜನಗೂಡಿನ ಫಾರ್ಮಸಿಟಿಕಲ್ ಕಂಪನಿಯ ಉದ್ಯೋಗಿ ಒಬ್ಬರಿಗೆ ಕರೋನ ಪಾಸಿಟಿವ್ ಬಂದಿದ್ದು ಅವರಜೊತೆ ಕಾರ್ಯನಿರ್ವಹಿಸುತ್ತಿದ್ದ ಹಾಸನ ಜಿಲ್ಲೆಯ ೧೦ ಜನರ ಪಟ್ಟಿಯನ್ನು ಮೈಸೂರಿನ ಅರೋಗ್ಯ ಇಲಾಖೆಯ ಕಚೇರಿಯಿಂದ ಹಾಸನಕ್ಕೆ ಕೆಳುಹಿಸಲಾಗಿತ್ತು . ಅದರಂತೆ ಅವರನ್ನು ದೊರವಾಣಿಯ ಮೂಲಕ ಸಂಪರ್ಕಿಸಿದ್ದು ಈ ಹತ್ತು ಜನರು ಹಾಸನ ಜಿಲ್ಲೆಗೆ ಬಂದಿಲ್ಲದಿರುವುದು ಕಂಡುಬಂದಿದೆ ಎಂತಿಳಿಸಿದರು . ಈ ವಿಷಯಕ್ಕೆ ಸಂಬಂದಿಸಿದ ವಿವರಣೆಯನ್ನು ಈ ಕೆಳಗೆ ನೀಡಲಾಗಿದೆ  ಇದು ಮಹಾಪಾಪಿ ಪತ್ರಿಕೆಯ ಸುದ್ದಿಜಾಲ

ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬೇರೆಯವರ ಪ್ರಾಣ ಕಾಪಾಡುವ ವೈದ್ಯರಿಗೋಂದು ನಮನ

Image
    ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬೇರೆಯವರ ಪ್ರಾಣ ಕಾಪಾಡುವ ವೈದ್ಯರಿಗೋಂದು ನಮನ  ಮನುಷ್ಯ ಎಷ್ಟೇ ಬುದ್ದಿವಂತನಾದರೂ ಪ್ರಕೃತಿಯ ಮುಂದೆ ಅವನು ಮಗು ,ಅದ್ಕಕೆ ವಿರುದ್ಧವಾಗಿ ಹೋರಾಡಲು ನಿಂತಾಗ ಆ ಪ್ರಕೃತಿ ಅವನ ವಿರುದ್ಧವೆ ತಿರುಗಿ ನಿಲ್ಲುತ್ತದೆ ಇದಕ್ಕೆ  ಮುನ್ಸೂಚನೆಯೇ  ಇಂದು ಇಡೀ ಪ್ರಪಂಚವೇ ಕೊರೋನಾ ಭೀತಿಯಲ್ಲಿ ಮುಳಿಗಿರುವಾಗ ಇದರ ಪರಿಣಾಮ ಯಾವ ರೀತಿ ತಿರುಗುತ್ತದೆ ಎಂದು ತಿಳಿಯದೆ ಹೋಗಿದೆ, ಎಲ್ಲರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವ ಸಲುವಾಗಿ ತಮಗೆ ತಾವೇ ಒಂದು ಲಕ್ಷ್ಮಣ ರೇಖೆಯನ್ನು ಎಳೆದುಕೊಂಡು ಮನೆಯಲ್ಲಿಯೇ ಉಳಿಯುವ ಪರಿಸ್ಥಿತಿ ಎದುರಾಗಿದೆ. ಆದ್ರೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬೇರೆಯವರ ಪ್ರಾಣ ಕಾಪಾಡುವ ವೈದ್ಯರು ಹಗಲು ರಾತ್ರಿ ಎನ್ನದೆ ರೋಗಿಗಳ ಆರೈಕೆ ಮಾಡುತ್ತಿದ್ದಾರೆ , ತಮ್ಮ ಪ್ರಾಣದ  ಅಂಗನ್ನು ತೊರೆದು ಕೊರೋನ ವೈರಸ್ ನ್ನು  ಹೋಗಲಾಡಿಸಲು ಪ್ರಯತ್ನ ಮಡುತ್ತಿದ್ದರೆ ,  ಹಲವಾರು ವೈಧ್ಯರು ತಮ್ಮ  ಸಂಸಾರವನ್ನೇ ಮರೆತು ದುಡಿಯುತ್ತಿದ್ದಾರೆ , ಹಣವನ್ನು ಯಾವ ರೀತಿ ಬೇಕಾದರೂ ದುಡಿಯಬಹುದು ಆದರೆ ಸೇವಾ ಮನೋಭಾವ ಇರುವುದು ಕೇವಲ ಕೆಲವರಿಗೆ ಮಾತ್ರ ಇದ್ರಲ್ಲಿ ವೈಧ್ಯರ ಪಾಲು ಹೆಚ್ಚು. ದಾದಿಯರು , ನರ್ಸ್ ಗಳು  ಇದೆ ಪ್ರಯತ್ನದಲ್ಲಿದ್ದಾರೆ , ಎಲ್ಲರು ಹಸಿದವರಿಗೆ ಅನ್ನಕೊಡಬಹುದು, ಬಟ್ಟೆ ಕೊಡಬಹುದು, ಒಂದಿಷ್ಟು ಕಾಸನ್ನು ಕೊಡಬಹುದು ಆದರೆ ಅವನ ಪ್ರಾಣ ಉಳಿಸಲು ಹೋರಾಡುವುದು ವೈದ್ಯರೆ  ಅದಕ್ಕಾಗಿಯೇ ವೈದ್ಯೋ ನಾರಾಯಣ

ಕೊರೊನ ಮದ್ಯೆಯೂ ಕ್ವಾಟರ್ ದಂದೆ, ಅಪ್ರಾಪ್ತರನ್ನು ಉಪಯೋಗಿಸುತ್ತಿದ್ದಾರೆ ಪಾಪಿಗಳು

Image
 ಕೊರೊನ ಮದ್ಯೆಯೂ ಕ್ವಾಟರ್ ದಂದೆ, ಅಪ್ರಾಪ್ತರನ್ನು ಉಪಯೋಗಿಸುತ್ತಿದ್ದಾರೆ ಪಾಪಿಗಳು  ಪ್ರಪಂಚವನ್ನು ನಡುಗಿಸುತ್ತಿರುವ ಕೊರೊನ ವೈರಸ್ ನಿಂದಾಗಿ  ಜನತೆ ತಮ್ಮ ಪ್ರಾಣ ಉಳಿಸಿಕೊಳ್ಳಲು   ಪರೆದಾಡುತ್ತಿದ್ದರೆ,  ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈ  ವೈರಸ್ ನ್ನು ತೆಡೆಗಟ್ಟಲು ಹಲವು ಬಗೆಯ  ಕ್ರಮಗಳನ್ನು ತೆಗೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ .ಆದರೆ ಕೆಲವು ಕಾಳಸಂತೆಕೋರರರು ಇದನ್ನೇ ದುರುಪಯೋಗ  ಪಡಿಸಿಕೊಂಡು  ಹಳ್ಳಿಗಳಲ್ಲಿ ಕದ್ದುಮುಚ್ಚಿ  ಗ್ರಾಹಕರಿಂದ ಒಂದಕ್ಕೆ ಎರಡರಷ್ಟು ಹಣಪಡೆದು ಮದ್ಯಮಾರಾಟ ಮಾಡುತ್ತಿರುವುದು ಕಂಡುಬಂದಿದೆ ,ಇದಕ್ಕೆ ಸಾಕ್ಷಿ ಎಂಬಂತೆ ಆಲೂರು ತಾಲೂಕು ಪಾಳ್ಯ ಹೋಬಳಿ ಹರೇಹಳ್ಳದ ಕೊಪ್ಪಲು (ಚಿಗಳೂರು ) ಗ್ರಾಮದಲ್ಲಿ ಈ ರೀತಿಯ ಮಧ್ಯ ಮಾರಾಟ ಮಾಡುತ್ತಿವ  ವಿಷಯ ತಿಳಿದ ನಮ್ಮ ತಂಡ ವರದಿಮಾಡಲು ಹೋದಾಗ ಕಂಡುಬಂದ ದೃಶ್ಯ.   ಇದು ಕೇವಲ ಒಂದು ಹಳ್ಳಿಯ ವಿಷಯವಲ್ಲ ಇಂತಹ ಕಾಳಸಂತೆಕೋರರು. ಪ್ರತಿ ಹಳ್ಳಿಯಲ್ಲೂ ಇದ್ದಾರೆ . ಇಂದು ಕಷ್ಟ ಪಟ್ಟು ದುಡಿಯುವ ಹಣವೇ  ಉಪಯೋಗಕ್ಕೆ ಬರದೇ ಇರುವಾಗ ಇಂತಹ ದುಡಿಮೆಯನ್ನು ಮಾಡಿ ಬದುಕುವುದು ಹಸಹ್ಯ ವಾಗಿದೆ.  ಇಷ್ಟೆಲ್ಲಾ ವಿಷಯಗಳು  ತಿಳಿದಿದ್ದರೂ  ಕೊಡ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು  ವಿಷಾಧನೀಯವಾಗಿದೆ  ಇನ್ನಾದರೂ  ಸಂಬಂಧ ಪಟ್ಟ ಅಧಿಕಾರಿಗಳು ಇಂತಹ ಕಾಳಸಂತೆಕೋರರರ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳಬೇಕಾಗಿದೆ . ಈ ಕು

ತಾಲೂಕು ವರದಿಗಾರರು ಬೇಕಾಗಿದ್ದಾರೆ

                ತಾಲೂಕು  ವರದಿಗಾರರು ಬೇಕಾಗಿದ್ದಾರೆ. ನಮ್ಮ  ಮಹಾಪಾಪಿ ಪತ್ರಿಕೆಗೆ ಹಾಸನ  ಜಿಲ್ಲೆಯ ಈ ಕೆಳಗಿನ ತಾಲೂಕುಗಳಿಗೆ ತಾಲೂಕು  ವರದಿಗಾರರು ಬೇಕಾಗಿದ್ದಾರೆ  ೧. ಸಕಲೇಶಪುರ ತಾಲೂಕು ,  ೨. ಹೊಳೆನರಸೀಪುರ ತಾಲೂಕು , ೩. ಬೇಲೂರು ತಾಲೂಕು , ೫. ಅರಸೀಕೆರೆ ತಾಲೂಕು ,  ೬. ಚನ್ನರಾಯಪಟ್ಟಣ ತಾಲೂಕು , ೭. ಹಾಸನ ತಾಲೂಕು  ಪತ್ರಿಕೋದ್ಯಮದಲ್ಲಿ ಕೆಲಸ ಮಾಡಲು ಆಸಕ್ತಿವುಳ್ಳ ,ಮತ್ತು ಕನ್ನಡ ಬರೆಯಲು ಓದಲು . ಬರುವ ಆಸಕ್ತಿವುಳ್ಳ ಅಭ್ಯರ್ಥಿ ಗಳು ಈ  ಕೆಳಗಿನ ಈ ಮೇಲ್ ವಿಳಾಸಕ್ಕೆ ತಮ್ಮ ಸಂಪೂರ್ಣ ವಿವರವನ್ನು ೭ ದಿನಗಳ ಒಳಗಾಗಿ ಕಳುಹಿಸತಕ್ಕದ್ದು .  mahasuddihasan@gmail.com ಸೂಚನೆ : ಆಯ್ಕೆ ಅದ ಅಭ್ಯರ್ಥಿ ಗಳಿಗೆ ನಮ್ಮಲ್ಲಿಯೇ ತರಬೇತಿ ನೀಡಿ ಅವರಿಗೆ ತರಬೇತಿಯ ಪ್ರಮಾಣ ಪತ್ರವನ್ನು ನೀಡಲಾಗುವುದು. ಮತ್ತು ನಮ್ಮ ಪತ್ರಿಕೆಯ ಕಡೆಯಿಂದ ಗುರುತಿನ ಚೀಟಿಯನ್ನು ಕೊಡ ನೀಡಲಾಗುವುದು. 

ಗೋ ಮಾಂಸ ಮಾರಾಟ ಜಾಲದ ಮೇಲೆ ಆಲೂರು ಪೋಲೀಸರಿಂದ ಭರ್ಜರಿ ಭೇಟೆ

Image
           ಗೋ ಮಾಂಸ ಮಾರಾಟ  ಜಾಲದ ಮೇಲೆ  ಆಲೂರು ಪೋಲೀಸರಿಂದ ಭರ್ಜರಿ ಭೇಟೆ      ವ್ಯಕ್ತಿಯ ಮತ್ತು  ಒಂದು ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಹಾಲು  ಅಂಬ್ರುತಕ್ಕೆ ಸಮಾನ , ಇಂತಹ ಶಕ್ತಿ ಇರುವುದು ತಾಯಿಯ ಹಾಲಿಗೆ ಬಿಟ್ಟರೆ ಅದು ಇರುವುದು ಗೋವಿನ ಹಾಲಿಗೆ ಆದ್ದರಿಂದಲೇ ಗೋ ವನ್ನ ತಾಯಿಗೆ ಹೋಲಿಸುತ್ತಾರೆ , ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು,  ಜನ ಕೊರೊನ  ವೈರಸ್ ಹಾವಳಿಯಿಂದ ನಡುಗುತ್ತಿದ್ದು ಮನೆಯಿಂದ ಹೋರ ಬರಲು ಹೆದರುತ್ತಿರುವಾಗ ,  ಮುನ್ನ  ಎಂಬುವ ವ್ಯಕ್ತಿ ಗೋ ವನ್ನು  ಕಡಿದು ಗೋ ಮಾಂಸ ಮಾರಾಟ ಮಾಡುತ್ತಿದ್ದ ಘಟನೆ ಆಲೂರಿನ ದೊಡ್ಡಿ  ಬೀದಿಯಲ್ಲಿ ನೆಡೆದಿದೆ,   ವಿಷಯವನ್ನು  ತಿಳಿದ ಆಲೂರಿನ ಸಬ್ ಇನ್ಸ್ ಪೆಕ್ಟರ್   ಶ್ರೀಯುತ ರೇವಣ್ಣರವರು ಮತ್ತು ಅವರ ತಂಡ  ಮಾಂಸ ಮಾರಾಟ ಮಾಡುತ್ತಿದ್ದ ಜಾಗದ ಮೇಲೆ ದಾಳಿ ನೆಡೆಸಿದ್ದು ಗೋ ಮಾಂಸ ಮತ್ತು ಅದನ್ನು  ಕೊಲ್ಲಲು  ಬಳಸಿದ್ದ  ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ, ಸ್ಥಳಕ್ಕೆ ಆಲೂರಿನ  ದಂಡಾಧಿಕಾರಿಗಳಾದ ಶ್ರೀಮತಿ ಶರೀನ್ ತಾಜ್ ರವರು, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು , ಆಲೂರಿನ ಪಶು ವೈಧ್ಯರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ ಹಾಗೂ  ಮುನ್ನರವರ ಮೇಲೆ ಕಾನೂನು ರೀತಿಯ ಕ್ರಮ ಕೈ ಗೊಳ್ಳುವಂತೆ  ತಿಳಿಸಿದ್ದಾರೆ , ಒಟ್ಟಾರೆಯಾಗಿ ಆಲೂರಿನ ಪೋಲೀಸರ  ಇಂತಹ ಕಾರ್ಯವನ್ನು ಪತ್ರಿಕೆ ಮೆಚ್ಚುತ್ತದೆ ಹಾಗೂ ಇಂತಹ ದುಷ್ಟರನ್ನು ಸದೆ  ಬಡಿಯುವ ಕೆಲಸ ಇವರ ತಂಡದಿ

ಹಾಸನ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ , ಕೊರೊನ ಮದ್ಯೆಯೂ ನೆಡೆದು ಹೋಯ್ತು ಮದುವೆ

Image
 ಮಹಾಮಾರಿ ಕೊರೊನ ಜನತಾ ಕರ್ಫ್ಯೂ ನಡುವೆಯೂ ನೆಡೆದೆ ಹೋಯಿತು ಇಲ್ಲೊಂದು ಮದುವೆ  ಪ್ರಪಂಚವನ್ನು ಬೆಚ್ಚಿಬೀಳುಸಿತ್ತಿರುವ ಮಹಾಮಾರಿ ಕೊರೊನ ಭಾರತಕ್ಕೋ ಕಾಲಿಟ್ಟಿದ್ದು  ನಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದು ಈಗ ಮುಖ್ಯವಾಗಿದೆ , ಮಾನ್ಯ ಪ್ರಧಾನಮಂತ್ರಿಗಳು ಯಾರೋ ಕೊಡ ಮನೆಯಿಂದ ಹೊರಗಡೆ  ಬರಬಾರದು ಎಂದು  ಮನೆಯಲ್ಲಿಯೇ ಇರುವ ಮೂಲಕ ಈ ವೈರಸ್ ನ್ನು   ಭಾರತದಿಂದ ಹೋಡಿಸಲು ಶ್ರಮಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ  , ಹಾಗೂ , ಕರ್ನಾಟಕ ಸರ್ಕಾರ ಎಲ್ಲಾ  ರೀತಿಯ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವ ಮೂಲಕ   ೧೪೪ ಸೆಕ್ಷನ್ ನ್ನು ಜಾರಿಗೆತಂದು ಯಾವುದೇ ಸಮಾರಂಭ , ಮದುವೆ ,ಜಾತ್ರೆ .  ಯಾವುದನ್ನೂ ಮಾಡಕೊಡದು ಎಂದು ಆದೇಶಿಸಿದ್ದರು, ಹಾಸನ ಜಿಲ್ಲೆ ಆಲೂರಿನಲ್ಲಿ ನೆಡೆದೆ  ಹೋಗಿತು  ಮದುವೆ,  ಆಲೂರು ತಾಲೂಕು ಮೆಣಸಮಕ್ಕಿ ಗ್ರಾಮದ ಮದುವೆ . ಆಲೂರಿನ ಕಬೀರ್ ಕನ್ವೆಷನ್ ಹಾಲ್ನಲ್ಲಿ ನೆಡೆದಿದೆ , ಈ ಕುರಿತು ಕಬೀರ್ ಕನ್ವೆಷನ್ ಹಾಲ್ನನ ಮಾಲೀಕರನ್ನು ವಿಚಾರಿಸಿದರೆ ನಾವು ಈಗಾಗಲೇ ಪೋಲೀಸರಿಗೊ , ಆಲೂರು ದಂಡಾಧಿಕಾರಿಗಳಿಗೂ ವಿಚಾರ ತಿಳಿಸಿ ಅವರಿಂದ ಅನುಮತಿ ಪಡೆದಿರುತ್ತೇವೆ ಎಂದು  ಹೇಳುತ್ತಾರೆ ಏನಾದರು ಲಿಖಿತ ದಾಖಲೆ ಇದಿಯಾ ಎಂದು ಕೇಳಿದರೆ ಕೇವಲ ದೊರವಾಣಿ ಕೆರೆ ಮಾಡಿ ಕೇಳಿಕೊಂಡಿರುವುದಾಗಿ ತಿಳಿಸುತ್ತಾರೆ . ಅದ್ರೊ ಎಲ್ಲರಿಗೆ ಒಂದು ಕಾನೂನು  ಆದರೆ ಇವರಿಗೆ ಒಂದು  ಕಾನೂನ, ಈ ವೈರಸ್ ಏನು ಆಲೂರಿಗೆ ಬರೋದಿಲ್ವ?  ಎಂದು ಇವರನ್ನು ಕ

ಹಾಸನ ಜಿಲ್ಲೆ ಜನತಾ ಕರ್ಫ್ಯೂ ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ ಕರ್ಫ್ಯೂ ಗೆ ಬಗ್ಗದ ಹಾಸನದ ಜನತೆ

Image
ಹಾಸನ ಜಿಲ್ಲೆ ಜನತಾ  ಕರ್ಫ್ಯೂ ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ ಕರ್ಫ್ಯೂ ಗೆ  ಬಗ್ಗದ ಹಾಸನದ  ಜನತೆ  ಹಾಸನ ಜಿಲ್ಲೆ ಜನತಾ  ಕರ್ಫ್ಯೂ ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ ಕರ್ಫ್ಯೂ ಗೆ  ಬಗ್ಗದ ಹಾಸನದ  ಜನತೆ ಮಹಾಮಾರಿ ಕರೋನ ಸೋಂಕನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಜನತಾ  ಕರ್ಫ್ಯೂ ಜಾರಿಮಾಡಿದ್ದರು ಅದಕ್ಕೋ  ನಮಗೂ   ಅದಕ್ಕೂ ಸಂಬಂಧ ಎಂಬಂತೆ ಹೊರಗಡೆ ಒಡಾಡುತ್ತಿದ್ದರೆ . ನಾಳೆ ಯುಗಾದಿ  ಹಬ್ಬದ  ಪ್ರಯುಕ್ತ ಇಂದು ಹಾಸನದ ಕಟ್ಟಿನಕೆರೆ  ಮಾರುಕಟ್ಟೆ ಜನಜಂಗುಳಿಯಿಂದ ತುಂಬಿ ಹೋಗಿತ್ತು ಪೋಲೀಸರೂ ತಿಳಿವಳಿಕೆ ನೀಡಿದ್ರು . ಅವರ ಮಾತುಗಳಿಗೆ  ಕಿವಿಕೊಡದ ಜನರು ಸಾಮಾನುಗಳನ್ನು ಖರೀದಿಸುವ ಕೆಲಸದಲ್ಲಿ ಮಗ್ನರಾಗಿದ್ದರು.  ಪೋಲೀಸರು  ವಿಧಿಯಿಲ್ಲದೆ ದಂಡಂ ದಶಗುಣಂ ಮಂತ್ರವನ್ನು ಪಾಲಿಸಬೇಕಾಗಿತು. ಇನ್ನೂ ಬೀದಿ ವ್ಯಾಪಾರಸ್ಥರು ಹಠಬಿಡದೆ ನಾವು ವ್ಯಪಾರ  ತಿರುತ್ತೇವೆ ಎಂದು ಹೇಳಿತ್ತಿದ್ದರು. ಮುಂದಿನ ಸುದ್ದಿಗಾಗಿ ನಮ್ಮ ತಂಡ ಸಕಲೇಶಪುರ ದತ್ತ ಹೋರಟಿದೆ, ಹೆಚ್ಚಿನ ಸುದ್ದಿಗಾಗಿ  ನಾವು ಮತ್ತೆ ನಿಮ್ಮ ಮುಂದೆ ಬರುತ್ತೇವೆ  ಇದು ಮಹಾಪಾಪಿ ಪತ್ರಿಕೆಯ ಸುದ್ದಿಜಾಲಾ     

ಜನತಾ ಕರ್ಫ್ಯೂ ಪರಿಣಾಮ ಹಾಸನ ಜಿಲ್ಲೆ ಸಂಪೂರ್ಣ ಸ್ತಬ್ದ

Image
                    ಜನತಾ ಕರ್ಫ್ಯೂ ಪರಿಣಾಮ ಹಾಸನ   ಜಿಲ್ಲೆ ಸಂಪೂರ್ಣ  ಸ್ತಬ್ದ  ಪ್ರತಿ ದಿನವೂ ಜನ ಜಂಗುಳಿಯಿಂದ ಕೊಡಿರುತ್ತಿದ್ದ ಹಾಸನ ಇಂದು  ಮೋದಿಯವರು  ಕೆರೆಕೊಟ್ಟಿರುವ  ಜನತಾ ಕರ್ಫ್ಯೂ ನಿಂದಾಗಾಗಿ ಇಂದು ಸಂಪೂರ್ಣ  ಬಂದ್ದಾಗಿದ್ದು ಜನರು ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ, ಹಾಸನಕ್ಕೆ ಬರುವ ರೈಲು ಇಂದು ಬಂದ್ದಾಗಿದ್ದ ಕಾರಣ ರೈಲುನಿಲ್ದಾಣ ಸಂಪೂಣ ಬಿಕೋ  ಎನ್ನುವಂತೆ ಇತ್ತು , ಇನ್ನು ಬಸ್ಸು ನಿಲ್ದಾಣದಲ್ಲಿ ಬಸ್ಸುಗಳು ಇಲ್ಲದೆ  ಬಸ್ಸು  ನಿಲ್ದಾಣ ಖಾಲಿ ಖಾಲಿ ಆಗಿತ್ತು  ಸಕಲೇಶಪುರದಲ್ಲೂ ಇದೆ ವಾತವರಣ ಕಂಡುಬಂದಿತು, ಬೆಂಗಳೂರು ಮಂಗಳೂರು ಮುಖ್ಯ ಹೆದ್ದಾರಿಯಲ್ಲಿರುವ  ಸಕಲೇಶಪುರದಲ್ಲಿ ವಾಹನಗಳ ಓಡಾಟ ಇಲ್ಲದೆ ರಸ್ತೆ ಖಾಲಿಯಾಗಿತ್ತು, ಹಾಗೆಯೆ ಬಡಾವಣೆ ರಸ್ತೆಗಳು ಕೊಡ ಖಾಲಿಯಾಗಿದ್ದವು. ಆಲೂರು ಪಟ್ಟಣದಲ್ಲಿಯೂ ಜನರು ಸ್ವಯಂಪ್ರೇರಣೆಯಿಂದ  ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ  ಜನತಾ ಕರ್ಫ್ಯೂ ಗೆ ಬೆಂಬಲ ಸೂಚಿಸಿದರು . ಆಟೋ ಸಂಚಾರ ವಾಹನಗಳ ಸಂಚಾರ  ಸಂಪೂರ್ಣ ವಾಗಿ ಸ್ತಬ್ದ ವಾಗಿತ್ತು. ಅರಸೀಕೆರೆ ಪಟ್ಟಣದಲ್ಲಿಯೂ ಜನರು ಸ್ವಯಂಪ್ರೇರಣೆಯಿಂದ  ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ  ಜನತಾ ಕರ್ಫ್ಯೂ ಗೆ ಬೆಂಬಲ ಸೂಚಿಸಿದರು . ಆಟೋ ಸಂಚಾರ ವಾಹನಗಳ ಸಂಚಾರ  ಸಂಪೂರ್ಣ ವಾಗಿ ಸ್ತಬ್ದ ವಾಗಿತ್ತು. ಇದು ಮಹಾಪಾಪಿ ಪತ್ರಿಕೆಯ ಸುದ್ದಿ ಜಾಲ  ಯೋಗೇಶ ಬಿ . ಜೆ   ಮುಖ್ಯ ಕಾರ್ಯನಿರ್ವ

ತಿಮ್ಲಾಪುರದಲ್ಲಿ ದುಷ್ಕರ್ಮಿ ಗಳಿಂದ ಹುಲ್ಲಿನ ಮೆದೆಗೆ ಬೆಂಕಿ ಕಂಗಾಲಾದ ರೈತ

Image
  ತಿಮ್ಲಾಪುರದಲ್ಲಿ  ದುಷ್ಕರ್ಮಿ ಗಳಿಂದ ಹುಲ್ಲಿನ ಮೆದೆಗೆ ಬೆಂಕಿ    ಕಂಗಾಲಾದ ರೈತ  ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ. ತಿಮ್ಲಾಪುರ ಗ್ರಾಮದಲ್ಲಿ ವಾಸವಾಗಿರುವ ಕೃಷ್ಣಮೂರ್ತಿ ಎಂಬುವವರ  ೫ ಟ್ರಾಕ್ಟರ್ ಹುಲ್ಲಿನ ಮೆದೆಗೆ ಬೆಳಗಿನ ಜಾವಾ ಸುಮಾರು3.30ರ ಸಮಯದಲ್ಲಿ ದುಷ್ಕರ್ಮಿಗಳಿಂದ ಹುಲ್ಲಿನ ಮೆದೆಗೆ ಬೆಂಕಿ ಹಚ್ಚಿದ್ದಾರೆ ಇದರಿಂದ ಮೆದೆ ಸಂಪೂರ್ಣವಾಗಿ ಅತಿಕೊಂಡಿದ್ದು  ಗ್ರಾಮಸ್ಥರು ಬೆಂಕಿಯನ್ನು ಆರಿಸಲು ಪ್ರಯತ್ನ ಮಾಡಿದ್ರು ಸಾಧ್ಯವಾಗದಿದ್ದಾಗ ಫೈರ್ ಇಂಜಿನ್ ರವರಿಗೆ ಕರೆಮಾಡಿ ಕರೆಸಿಕೊಂಡು ಬೆಂಕಿಯನ್ನು ಆರಿಸಿದ್ದಾರೆ, ಇದರಿಂದ ಕೃಷ್ಣಮೂರ್ತಿ ಸುಮಾರು ೫೦ರಿಂದ ೬೦ ಸಾವಿರಗಳಷ್ಟು ನಷ್ಟವಾಗಿದೆ ಎಂದು ತಮ್ಮ ಅಳಲು ತೂಡಿಕೊಂಡಿದ್ದಾರೆ. ವರ್ಷ ಪೂರ್ತಿ ಬೆಳೆದ ಹುಲ್ಲು ಸಂಪೂರ್ಣವಾಗಿ ನಾಶವಾಗಿರುವುದರಿಂದ ಈ ರೈತ  ಮುಂದೆ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ .ಹಾಗೂ ಈ ಕುರಿತು ಸಂಬಂಧ ಪಟ್ಟ ಪೋಲೀಸ್ ಠಾಣೆಗೂ ದೂರು  ನೀಡಲಾಗಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಆ ದುಷ್ಕರ್ಮಿಗಳನ್ನು ಹಿಡಿದು ಈ ರೈತನಿಗೆ ನ್ಯಾಯ ದೊರಕಿಸಬೇಕಾಗಿ ಪತ್ರಿಕೆ ಒತ್ತಾಯಿಸುತ್ತದೆ  ಇದು ಮಹಾಪಾಪಿ ಪತ್ರಿಕೆಯ ಸುದ್ದಿಜಾಲ    ಯೋಗೇಶ ಬಿ ಜೆ   ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು .   ಹಾಸನ ಜಿಲ್ಲೆ 

ಕೈ ಮುಗಿದು ಬೇಡುವೆನು ನನ್ನನ್ನು ಉಳಿಸಿ . ಶಾಲೆ ಮಾತನಾಡಿತು

Image
                ಕೈ ಮುಗಿದು ಬೇಡುವೆನು ನನ್ನನ್ನು ಉಳಿಸಿ . ಶಾಲೆ ಮಾತನಾಡಿತು  ನಾನು ಆಲೂರು ತಾಲೂಕು ಬೈರಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈ ಮುಗಿದು ಒಳಗೆ ಬಾ ಜ್ಞಾನದೇಗುಲವಿದು  ಎಂದು ನನ್ನ ಹೆಬ್ಬಾಗಿಲಿನ್ನಲ್ಲಿ ದೂಡ್ಡದಾಗಿ ಬರೆಯುತ್ತಾರೆ ದೇವಾಲಯವು ಸ್ವಚ್ಛವಾಗಿದ್ದರೆ ಅಷ್ಟ್ಟೇ  ಅಲ್ಲಿರುವ ದೇವರಿಗೆ ಮತ್ತು ದೇವಾಲಯಕ್ಕೆ ಒಂದು ಬೆಲೆ ಬರುತ್ತದೆ , ನೋಡಿ ನನ್ನ ಪರಿಸ್ಥಿತಿ ಇದೆ ನನ್ನ ಕೊಠಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರಳಾಗಿದ್ದೆ ಅವರ  ಜೀವನ ರೂಪಿಸಲು ನಾನು ಸಹಕಾರಿಯಾಗಿದ್ದೆ ಮನೆಯೇ ಮೊದ್ಲ ಪಾಠಶಾಲೆ ಎಂದು ಹಿರಿಯರು ಹೇಳುತ್ತಾರೆ ಮಕ್ಕಳು ಮನೆಯನ್ನು ಬಿಟ್ರೆ ದಿನದ ಮುಕ್ಕಾಲುಭಾಗ ನನ್ನಲ್ಲಿಯೇ ಕಳೆದಿದ್ದಾರೆ , ನನ್ನಲ್ಲಿ ಹಲವಾರು ಶಿಕ್ಷಕರು ಕೆಲಸ ಮಾಡಿದ್ದಾರೆ ನನ್ನ ಮುದ್ದಿನ ವಿಧ್ಯಾರ್ಥಿಗಳು ನನ್ನ ಗೋಡೆಗಳನ್ನು ಬಳಸಿಕೊಂಡು ಅಕ್ಷರಾಭ್ಯಾಸ ಮಾಡಿದ್ದಾರೆ ಅದ್ರೊ ನಾನು ಯಾವ ಬೇಜಾರನ್ನು ಮಾಡಿಕೊಂಡಿಲ್ಲ. ಈಗ ನೋಡಿ ನನ್ನ ಪರಿಸ್ಥಿತಿವಯಸ್ಸಾತು ಅಂತ ನನ್ನನ್ನು ಮೂಲೆಗೆ ತಳ್ಳಿದ್ದಾರೆ ತಂದೆ ತಾಯಿಗೆ ವಯಸ್ಸಾತು ಅಂತ ಮಕ್ಕಳು   ಆಶ್ರಮಕ್ಕೆ ಸೇರಿಸುತ್ತಾರೆ  ಆದ್ರೆ ತಂದೆ ತಾಯಿಗೆ ಮಕ್ಕಳ ಮೇಲೆ ಎಂದಿಗೂ ಪ್ರೀತಿ ಕೆಡಿಮೆಯಾಗಲ್ಲ ಹಾಗೆಯೆ ನನ್ನ ಪರಿಸ್ಥಿತಿ ಆಗಿದೆ. ನನಗೆ ಇಲ್ಲಿ ಓದಿದ ವಿದ್ಯಾರ್ಥಿಗಳ ಮೇಲಾಗಲಿ ಅಥವಾ   ಶಿಕ್ಷಕರ  ಮೇಲಾಗಲಿ ನನ್ನ ಪ್ರೀತಿ ಕೆಡಿಮೆಯಾಗಿಲ್ಲ ನನ

ಮಾರನಹಳ್ಳಿ ಗ್ರಾಮದಲ್ಲಿ ನಿರಂತರ ಜ್ಯೋತಿ ಯ ದುರ್ಬಳಕೆ ಕಣ್ಮುಚ್ಚಿ ಕುಳಿತ ಅಧಿಕಾರಿಗಳು

Image
ಮಾರನಹಳ್ಳಿ ಗ್ರಾಮದಲ್ಲಿ  ನಿರಂತರ ಜ್ಯೋತಿ ಯ ದುರ್ಬಳಕೆ  ಕಣ್ಮುಚ್ಚಿ ಕುಳಿತ  ಅಧಿಕಾರಿಗಳು  ಹಾಸನ ಜಿಲ್ಲೆಯ ಸಾಲಗಾಮೆ ಹೋಬಳಿಯ ಮಾರನಹಳ್ಳಿ ಗ್ರಾಮದಲ್ಲಿ ಆ ಊರಿನ ವಾಟರ್ ಮ್ಯಾನ್  ಕೇಶವೇಗೌಡ  ಸನ್ ಆಫ್ ಬಸವಲಿಂಗೇಗೌಡ ಎಂಬುವವರು ಈ ಗ್ರಾಮಕ್ಕೆ ಕುಡಿಯುವ ನೀರಿನ ಸ್ವಲಭ್ಯಕ್ಕಾಗಿ ನೀಡಿರುವ ನಿರಂತರ ಜ್ಯೋತಿಯ ಲೈನಿಂದ ಅವರ ಜಮೀನಿಗೆ ಸಂಪರ್ಕ ಕಲ್ಪಿಸಿಕೊಂಡು ನೀರು ಹೊಡೆದುಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು ಈ ಗ್ರಾಮದ ವಿಶ್ವನಾಥ್ ಎಂಬುವವರು ಕೇಳಲು ಹೋದಾಗ  ವಾಟರ್ ಮ್ಯಾನ್ ಉಡಾಫೆ ಉತ್ತರವನ್ನು ನೀಡಿರುತ್ತಾರೆ. ಈ ಕುರಿತಾಗಿ ಮೇಲಧಿಕಾರಿಗಳಿಗೆ ದೂರುನೀಡಲಾಗಿದ್ದು ಗೊತ್ತಿದ್ದೂ ಗೊತ್ತಿಲ್ಲ   ಎಂಬಂತೆ ಕ್ರಮ ಜರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಹಾಗಾದರೆ ಒಂದು ಊರಿನಲ್ಲಿ ಈ ತರಹದ ಘಟನೆ ಒಂದು ವರ್ಷದಿಂದ ನೆಡೆಯುತ್ತಿದ್ದರು ಅದಿಕಾರಿಗಳಿಗೆ ಗೊತ್ತಿಲ್ಲವೇ  ? ಎಂದು ಪ್ರಶ್ನಿಸುತ್ತಿದ್ದಾರೆ . ಆದ್ರೆ  ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ . ಮುಂದೆ ಈ ವಾಟರ್ ಮ್ಯಾನ್ ಗೆ ಗ್ರಾಮಪಂಚಾಯತಿಯವರು ಯಾವ ಕ್ರಮ ಕೈಗೊಳ್ಳುತ್ತಾರೆ ,  ಸರ್ಕಾರಕ್ಕೆ ಮೋಸಮಾಡುವ ಇಂತಹ  ನೌಕರರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬಾರದು ಹಾಗೂ ಈತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪತ್ರಿಕೆ ಒತ್ತಾಹಿಸುತ್ತದೆ  ಇದು ಮಹಾಪಾಪಿಯ ಸುದ್ದಿಜಾಲ  ಯೋಗೇಶ ಬಿ.  ಜೆ  ಹಾಸನ

ಇಗೋ ನೋಡಿ ಇಲ್ಲೊಬ್ಬ ಮಕ್ಕಳ ಮತ್ತು ಗರ್ಭಿಣಿಯರ ಸವಲತ್ತನ್ನು ತಿಂದು ಬದುಕುವ ಉಮಾಶ್ರೀ ಎಂಬ ಭ್ರಷ್ಟ ಮೇಲ್ವಿಚಾರಕಿ

Image
  ಸಕಲೇಶಪುರದಲ್ಲಿರುವ ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಉಮಾಶ್ರೀ ಎಂಬ ಭ್ರಷ್ಟ ಮೇಲ್ವಿಚಾರಕಿ  ಪ್ರಿಯ ಓದುಗರೇ ಈ ಸುದ್ದಿಯ ಕುರಿತಾಗಿ ನಮ್ಮ ಪತ್ರಿಕಾ ತಂಡ ವರದಿಗಾಗಿ ಕಛೇರಿಗೆ ಭೇಟಿ ನೀಡಿದಾಗ ಅಲ್ಲಿ ಕಂಡು ಬಂದ ವಾತಾವರಣವೇ ಬೇರೆಯಾಗಿತ್ತು, ಅಲ್ಲಿರುವ ಯಾವ ಸಿಬ್ಬಂದಿಯನ್ನು ಮಾತನಾಡಿಸಿದರು ಸರಿಯಾದ ಉತ್ತರ ನೀಡದೆ ತಡವರಿಸುವುದು ಕಂಡುಬಂದಿತು . ಇನ್ನು ಇಲ್ಲಿನ ಮೇಲಧಿಕಾರಿಯವರಾದ ದಿಲೀಪ್ ರವರನ್ನು ಭೇಟಿಯಾಗಲು ಪ್ರಯತ್ನಿಸಿದ್ರು ಅವ್ರು ಕರ್ತವ್ಯ ನಿಮಿತ್ತ ಹೊರಗಡೆ ಇರುವುದಾಗಿ ತಿಳಿಸಿದ್ರು . ಆಗ್ಲಿ ಅಂತ ಉಮಾಶ್ರಿಯವ್ರಿಗೆ ನೀಡಿರುವ ನೋಟಿಸ್ , ಮತ್ತು ಇದೇ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸಮಾಡುವ ಗೀತಾರವರಿಗೆ ನೀಡಿರುವ  ನೋಟಿಸ್ ಕುರಿತು ಕೇಳಿದರು ಅದೆಲ್ಲವನ್ನು ತಮ್ಮ ಮೇಲಧಿಕಾರಿಗಳಿಗೆ ನೀಡಿದ್ದೇವೆ ಇದಕ್ಕೆ ಅವ್ರೆ ಉತ್ತರಿಸಬೇಕು ಎಂದು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡಿದರು , ಇವೆಲ್ಲವನ್ನೂ ಗಮನಿಸಿದರೆ ಇಷ್ಟೆಲ್ಲಾ ಆದ್ರೂ ನನಗೆ ಏನೋ ಗೊತ್ತಿಲ್ಲ ಎಂದು ಹೇಳುವ ಇವರು ಇನ್ನೇನು ಕೆಲಸಮಾಡುತ್ತಿದ್ದಾರೆ , ಇವರು ತಮ್ಮ ಸಿಬ್ಬಂದಿಯ ಮೇಲೆ ಯಾವ ರೀತಿ ಗಮನಹರಿಸುತ್ತಿದ್ದರೆ ಎಂಬುದು ತಿಳಿಯುತ್ತದೆ, ಮೇಲ್ನೋಟಕ್ಕೆ ನೋಡುವುದಾದರೆ . ಇಲ್ಲಿ ಮೇಲಧಿಕಾರಿಗಳ  ಶಾಮೀಲು ಇರುವುದು   ಕಂಡು ಬರುತ್ತದೆ . ಈ ಕುರಿತಾಗಿ ನಮ್ಮ ತಂಡ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುವ ಪ್ರಯತ್ನದಲ್ಲಿದೆ. ಕಾಯುತ್ತೀರ

ಉದ್ಘಾಟನೆಗೂ ಮುನ್ನವೆ ಮುರಿದುಬಿದ್ದ ಹಾಸನದ ಹೊಸ ಮೇಲ್ಸೇತುವೆ

Image
ಹಾಸನದಲ್ಲಿ ಎನ್ ಆರ್  ವ್ರತ್ತದಿಂದ ಹೊಸ ಬಸ್ ನಿಲ್ದಾಣ ಕ್ಕೆ  ಸಂಪರ್ಕ  ಕಲ್ಪಿಸುವ  ಉದ್ದೇಶದಿಂದ ನಿರ್ಮಾಣ ವಾಗುತ್ತಿರುವ ಮೇಲ್ಸೇತುವೆ ಇಂದು ಕುಸಿದು ಬಿದ್ದಿದೆ ಈ  ಕುರಿತ  ಸಂಪೂರ್ಣ  ಸುದ್ದಿ ಕಾಯುತ್ತಿರಿ ನಿಮಗೆ ನಾವು ನಿಖರ ಮಾಹಿತಿ ನೀಡಲಿದ್ದೇವೆ. .ನಮ್ಮ ಮಹಾ  ಪಾಪಿ ಪತ್ರಿಕೆಯಲ್ಲಿ

ಸುದ್ದಿಯ ಆಳಕ್ಕೆ ಹೋಗಿ / ಮತ್ತೊಮ್ಮೆ ತಪ್ಪಾಗಲ್ಲ ಶ್ರೀಕಂಠೇಶ್ವರ ಟಿವಿ ಶೋ ರೂಂ ಲಿಖಿತ ಹೇಳಿಕೆ

Image
     ಸುದ್ದಿಯ ಆಳಕ್ಕೆ ಹೋಗಿ / ಮತ್ತೊಮ್ಮೆ ತಪ್ಪಾಗಲ್ಲ ಶ್ರೀಕಂಠೇಶ್ವರ  ಟಿವಿ ಶೋ ರೂಂ ಲಿಖಿತ        ಹೇಳಿಕೆ    ಗ್ರಾಹಕರೇ ಎಚ್ಚರ  ಹಾಸನದ ಕೆ. ಆರ್. ಪುರಂ ನಲ್ಲಿರುವ ಶ್ರೀ ಕಂಠೇಶ್ವರ ಎಂಬ ಟಿವಿ ಶೋ ರೂಂ ಮಾಲಿಕ ಗ್ರಾಹಕರಿಗೆ ಮಣ್ಣೆರೆಚುತ್ತಿರುವ ಕೆಲಸ ಮಾಡುತ್ತಿದ್ದಾನೆ   ಎಂಬ    ಈ ಸುದ್ದಿಗೆ ಸಂಬಂಧಿಸಿದಂತೆ ಶೋ ರೂಂ ನ ಮಾಲೀಕರು ನಮಗೆ ಸ್ವಷ್ಟಿಕರಣ ನೀಡಿದ್ದು ಕಾರ್ತಿಕ್ ಎಂಬುವವರು ಈ  ಶೋ ರೂಂ ನ ಮಾಲೀಕರಾಗಿದ್ದು ಇವರು ಗ್ರಾಹಕರಿಗೆ ಸಾಲ ನೀಡಿದ್ದು ಗ್ರಾಹಕರು ಕಟ್ಟಬೇಕಾದ  ಕಂತುಗಳನ್ನು ಕಟ್ಟದೆ  ಇದ್ದಾಗ ವುಸೂಲಿಗಾಗಿ ಅವರಿಗೆ ಹೆದರಿಸಿರುವುದು ಉಂಟು ಇದು ನಮ್ಮ ಕಣ್ತಪ್ಪಿನಿಂದ ಗ್ರಾಹಕರಿಗೆ  ಆಗಿರುವ ತೊಂದರೆ, ಇಂತಹ ತಪ್ಪು ಇನ್ನು ಮುಂದೆ ಆಗದಂತೆ ನೋಡಿಕೊಳ್ಳುವುದಾಗಿ ಸ್ವಷ್ಟಿಕರಣ ವಿಷಯದ ಆಳಕ್ಕೆ ಹೋದ ನಮ್ಮ ತಂಡ ವಿವರಣಾತ್ಮಕವಾದ ತನಿಖೆಯನ್ನು ಮಾಡಿ ಮತ್ತೊಮ್ಮೆ ಗ್ರಾಹಕರಿಗೆ ತೊಂದರೆ ಮಾಡದಂತೆ ಸಂಸ್ಥೆಗೆ ಎಚ್ಚರಿಕೆಯನ್ನು ನೀಡಿದೆ. 

ಹಾಸನದಲ್ಲಿ ಒಬ್ಬ ಖತರ್ನಾಕ್ ನಕಲಿ ವೈದ್ಯ

Image
      ಹಾಸನದಲ್ಲಿ ಒಬ್ಬ  ಖತರ್ನಾಕ್  ನಕಲಿ ವೈದ್ಯ   ಪ್ರಿಯ ಓದುಗರೇ  ಈಗಾಗಲೆ ನಾವು ತಿಳಿಸಿರುವಂತೆ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿರುವುದು ಕಂಡುಬಂದಿದೆ.   ಪುರಾಣದಲ್ಲಿ ವೈದ್ಯನನ್ನು  ನಾರಾಯಣನಿಗೆ ಹೋಲಿಸುತ್ತಾರೆ ಕಾರಣ ಒಬ್ಬ ವ್ಯಕ್ತಿಯ ಪ್ರಾಣ ಉಳಿಸುವ ಸಾಮರ್ತ್ಯ ದೇವರಿಗೆ ಬಿಟ್ಟರೆ ಆ  ಸಾಮರ್ತ್ಯ ಇರುವುದು ವೈದ್ಯನಿಗೆ ಮಾತ್ರ  ಅದಕ್ಕಾಗಿಯೆ ಜನರು ತಮ್ಮ ಅರೋಗ್ಯ ಕೆಟ್ಟಾಗ ವೈದ್ಯರ ಬಳಿ ಹೋಗುತ್ತಾರೆ ,ಇಂತಹ ಪವಿತ್ರ ವೃತ್ತಿ ಯನ್ನು ಮಾಡಬೇಕಾದ್ರೆ ಅದಕ್ಕೆ ಒಂದು ಅರ್ಹತೆ ಬೇಕಾಗುತ್ತದೆ, ಆದ್ರೆ ನಕಲಿ ವೈದ್ಯರ ಹಾವಳಿ ಇದನ್ನು ಮರೆತು ತಲೆಯೆತ್ತಿ ನಿಂತೆದೆ.  ಇದಕ್ಕೆ ನಾನೇನು ಕೆಡಿಮೆ ಇಲ್ಲ ಎಂಬಂತೆ ಹಾಸನ ಇಂದು ಸೆಡ್ಡು ಹೊಡೆದು ನಿಂತಿದೆ ಇದಕ್ಕೆ ಉದಾಹರಣೆ ಎಂಬಂತೆ ಹಾಸನದ ಕೆಸ್ತೂರಿ ಬಾ ರಸ್ತೆಯಲ್ಲಿ ಸುಪ್ರಿಯ ಬಾರ್ ಪಕ್ಕದಲ್ಲಿ ಇರುವ ಪದ್ಮಾವತಿ ಕ್ಲಿನಿಕ್ . ಇದ್ರ ನಿಜವಾದ ಮಾಲೀಕರು ಡಾಕ್ಟರ್ ಕೆ ಆನಂದ್ ಕುಮಾರ್  ಮತ್ತು  ಡಾಕ್ಟರ್  ರಾಜಾರಾಮ್ ಎಂಬುವವರು ,  ಆದ್ರೆ ಇವ್ರು ಬೆಂಗಳೂರಿಗೆ ಹೋಗಿ ತುಂಬಾ ಕಾಲಗಳೆ ಆಗಿವೆ . ಇದನ್ನು ಅರಿತ ಹಾಸನದ  ಹೇಮಾವತಿ ನಗರದ ನಿವಾಸಿ ಎಂದು ಹೇಳಿಕೊಳ್ಳುವ  ಶ್ರೀಕಾಂತ್ ಎಂಬ ವ್ಯಕ್ತಿ ತಾನೇ ವೈದ್ಯ ಎಂದು ಕ್ಲಿನಿಕ್ ಗೆ ಬಂದು ಕುಳಿತು ಬರುವ ರೋಗಿಗಳಿಗೆ  ಕುಡಿದ ಅಮಲಿನಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ . ಅವ್ರು ನೀಡುವ ಚಿಕಿತ್ಸೆ ಕುರಿತು ಅವರನ್ನು ವಿಚಾರಿಸಿದ

ಹಾಸನ ಜಿಲ್ಲೆಯ ಪಾಪಿಗಳ ಸರ್ವನಾಶಕ್ಕೆ ಬೇಗನೆ ಬರುತ್ತಿದೆ ಮಹಾಪಾಪಿಯ ಸುದ್ದಿಜಾಲ

Image