ಹಾಸನ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತಿಲ್ಲ , ಕೊರೊನ ಮದ್ಯೆಯೂ ನೆಡೆದು ಹೋಯ್ತು ಮದುವೆ

 ಮಹಾಮಾರಿ ಕೊರೊನ ಜನತಾ ಕರ್ಫ್ಯೂ ನಡುವೆಯೂ ನೆಡೆದೆ ಹೋಯಿತು ಇಲ್ಲೊಂದು ಮದುವೆ 
ಪ್ರಪಂಚವನ್ನು ಬೆಚ್ಚಿಬೀಳುಸಿತ್ತಿರುವ ಮಹಾಮಾರಿ ಕೊರೊನ ಭಾರತಕ್ಕೋ ಕಾಲಿಟ್ಟಿದ್ದು  ನಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದು ಈಗ ಮುಖ್ಯವಾಗಿದೆ , ಮಾನ್ಯ ಪ್ರಧಾನಮಂತ್ರಿಗಳು ಯಾರೋ ಕೊಡ ಮನೆಯಿಂದ ಹೊರಗಡೆ  ಬರಬಾರದು ಎಂದು  ಮನೆಯಲ್ಲಿಯೇ ಇರುವ ಮೂಲಕ ಈ ವೈರಸ್ ನ್ನು   ಭಾರತದಿಂದ ಹೋಡಿಸಲು ಶ್ರಮಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ  , ಹಾಗೂ , ಕರ್ನಾಟಕ ಸರ್ಕಾರ ಎಲ್ಲಾ  ರೀತಿಯ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವ ಮೂಲಕ   ೧೪೪ ಸೆಕ್ಷನ್ ನ್ನು ಜಾರಿಗೆತಂದು ಯಾವುದೇ ಸಮಾರಂಭ , ಮದುವೆ ,ಜಾತ್ರೆ .  ಯಾವುದನ್ನೂ ಮಾಡಕೊಡದು ಎಂದು ಆದೇಶಿಸಿದ್ದರು, ಹಾಸನ ಜಿಲ್ಲೆ ಆಲೂರಿನಲ್ಲಿ ನೆಡೆದೆ  ಹೋಗಿತು  ಮದುವೆ,  ಆಲೂರು ತಾಲೂಕು ಮೆಣಸಮಕ್ಕಿ ಗ್ರಾಮದ ಮದುವೆ . ಆಲೂರಿನ ಕಬೀರ್ ಕನ್ವೆಷನ್ ಹಾಲ್ನಲ್ಲಿ ನೆಡೆದಿದೆ , ಈ ಕುರಿತು ಕಬೀರ್ ಕನ್ವೆಷನ್ ಹಾಲ್ನನ ಮಾಲೀಕರನ್ನು ವಿಚಾರಿಸಿದರೆ ನಾವು ಈಗಾಗಲೇ ಪೋಲೀಸರಿಗೊ , ಆಲೂರು ದಂಡಾಧಿಕಾರಿಗಳಿಗೂ ವಿಚಾರ ತಿಳಿಸಿ ಅವರಿಂದ ಅನುಮತಿ ಪಡೆದಿರುತ್ತೇವೆ ಎಂದು  ಹೇಳುತ್ತಾರೆ ಏನಾದರು ಲಿಖಿತ ದಾಖಲೆ ಇದಿಯಾ ಎಂದು ಕೇಳಿದರೆ ಕೇವಲ ದೊರವಾಣಿ ಕೆರೆ ಮಾಡಿ ಕೇಳಿಕೊಂಡಿರುವುದಾಗಿ ತಿಳಿಸುತ್ತಾರೆ . ಅದ್ರೊ ಎಲ್ಲರಿಗೆ ಒಂದು ಕಾನೂನು  ಆದರೆ ಇವರಿಗೆ ಒಂದು  ಕಾನೂನ, ಈ ವೈರಸ್ ಏನು ಆಲೂರಿಗೆ ಬರೋದಿಲ್ವ?  ಎಂದು ಇವರನ್ನು ಕೇಳಬೇಕಿದೆ ಈ ಕುರಿತಾಗಿ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲೋ ನಮ್ಮ ತಂಡ ವಿಚಾರಿಸಿದ್ದು ಈ ರೀತಿಯ ಯಾವುದೇ ಸಮಾರಂಭಗಳಿಗೆ ಅನುಮತಿ ನೀಡಿಲ್ಲವೆಂದು ತಿಳಿಸಿರುತ್ತಾರೆ  ಈ ಕುರಿತಾಗಿ ಕಬೀರ್ ಕನ್ವೆಷನ್ ಹಾಲ್ನನ ಮಾಲೀಕರ ಮೇಲೂ  ಮದುವೆ  ಸಮಾರಂಭ ಏರ್ಪಡಿಸಿದ ಕುಟುಂಬದ ಮೇಲೆಯೂ ಮತ್ತು ಇಡೀ ದೇಶವೇ ತತ್ತರಿಸುತ್ತಿರುವಾಗ ಸರ್ಕಾರದ ಆದೇಶಕ್ಕೆ ತಲೆಬಾಗದೆ ಮದುವೆಗೆ ಆಗಮಿಸಿದ ಅಂದಾಜು ೧೫೦ ರಿಂದ ೨೦೦ ಜನರ ಮೇಲೆಯೂ ಕಠಿಣ ಕ್ರಮ  ಜರುಗಿಸಬೇಂದು ಪತ್ರಿಕೆ ವಿನಂತಿಸಿಕೊಳ್ಳುತ್ತದೆ .   


ಇದು ಮಹಾಪಾಪಿ ಪತ್ರಿಕೆಯ ಸುದ್ದಿ ಜಾಲ 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ