ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

                         ವೈಯಕ್ತಿಕ ದ್ವೇಷ ಹಾಡಹಗಲೇ  ಯುವಕನ ಬರ್ಬರ ಹತ್ಯೆ
ಹಾಸನ ಜಿಲ್ಲೆ ಆಲೂರು ತಾಲೂಕು ಸೊಪ್ಪಿನಹಳ್ಳಿ ಗ್ರಾಮದಲ್ಲಿ ವೈಯಕ್ತಿಕ ದ್ವೇಷದಿಂದಾಗಿ ಯುವಕನೋರ್ವನ ಬರ್ಬರ ಹತ್ಯೆಯನ್ನು ಹಾಡಹಗಲೇ ಮಾಡಲಾಗಿದೆ ಸುಮಾರು ಇಪ್ಪತ್ತೈದು ವರ್ಷ ವಯಸ್ಸಿನ ಮಧು ಎಂಬ ಯುವಕ  ಮತ್ತು ಸೊಪ್ಪಿನಹಳ್ಳಿ ಗ್ರಾಮದ ಶಿವೇಗೌಡರ ಮಗ ರೂಪೇಶ ಎಂಬವರಿಗೆ ವೈಯಕ್ತಿಕ ದ್ವೇಷವಿದ್ದು ದ್ವೇಷದ ಹಿನ್ನೆಲೆಯಲ್ಲಿ ಇಂದು ಭೈರಾಪುರದಿಂದ ಸೊಪ್ಪಿನಹಳ್ಳಿ ಗೆ  ಹೋಗುವ ರಸ್ತೆಯಲ್ಲಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ಹಾಡು ಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಸ್ಥಳಕ್ಕೆ ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾದಿಕಾರಿ  ಶ್ರೀನಿವಾಸ್ ಗೌಡ ಮತ್ತು ಸಕಲೇಶಪುರ  ಅಧೀಕ್ಷಕರಾದ ಗೋಪಿ ಆಲೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಿಕರಾದ  ರೇವಣ್ಣ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಆರೋಪಿಯು ತಲೆಮರೆಸಿಕೊಂಡಿದ್ದು ಹುಡುಕಾಟಕ್ಕೆ ಈಗಾಗಲೇ ತಂಡವನ್ನು ರಚಿಸಲಾಗಿದ್ದು ಶೀಘ್ರದಲ್ಲೇ ಆರೋಪಿಯನ್ನು ಹಿಡಿಯಲಾಗುವುದು ಎಂದು ತಿಳಿಸಿದರು 
ಹತ್ಯೆಯ ಹಿನ್ನೆಲೆ : ಸೊಪ್ಪಿನಹಳ್ಳಿ  ಗ್ರಾಮದ ರಮೇಶ್ ಎಂಬುವರ ಮಗಳನ್ನು ಮಧು ಎಂಬಾತನು ಅಪಹರಿಸಿಕೊಂಡು ಹೋಗಿದ್ದು ಈ ಕುರಿತಾಗಿ ಕೇಸು ಕೂಡ ದಾಖಲಾಗಿದ್ದು ಜೈಲಿಗೆ ಕೂಡ ಹೋಗಿ ಬಂದಿರುತ್ತಾನೆ ಈ   ದ್ವೇಷವನ್ನು  ಇಟ್ಟುಕೊಂಡಂತಹ ರಮೇಶ್ ಅವರ ತಮ್ಮ ರೂಪೇಶ್ ಇಂದು ನಾಡಬಂದೂಕು ನಿಂದ ಹತ್ಯೆ ಮಾಡಿರುತ್ತಾನೆ

                                   
                                     ಕೊಲೆಯಾದ ಮಧು ಎಂಬ ಯುವಕ
                                  ಕೊಲೆಮಾಡಿರುವ ಆರೋಪಿ ರೂಪೇಶ್ 
                            

ಇದು ಮಹಾಪಾಪಿಯ ಸುದ್ದಿಜಾಲ 

ವರದಿಗಾರರು : ಯೋಗೇಶ ಬಿ.  ಜೆ 
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು ಹಾಸನ ಜಿಲ್ಲೆ 


Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ