ಗೋ ಮಾಂಸ ಮಾರಾಟ ಜಾಲದ ಮೇಲೆ ಆಲೂರು ಪೋಲೀಸರಿಂದ ಭರ್ಜರಿ ಭೇಟೆ

          ಗೋ ಮಾಂಸ ಮಾರಾಟ ಜಾಲದ ಮೇಲೆ ಆಲೂರು ಪೋಲೀಸರಿಂದ ಭರ್ಜರಿ ಭೇಟೆ    


ವ್ಯಕ್ತಿಯ ಮತ್ತು  ಒಂದು ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಹಾಲು  ಅಂಬ್ರುತಕ್ಕೆ ಸಮಾನ , ಇಂತಹ ಶಕ್ತಿ ಇರುವುದು ತಾಯಿಯ ಹಾಲಿಗೆ ಬಿಟ್ಟರೆ ಅದು ಇರುವುದು ಗೋವಿನ ಹಾಲಿಗೆ ಆದ್ದರಿಂದಲೇ ಗೋ ವನ್ನ ತಾಯಿಗೆ ಹೋಲಿಸುತ್ತಾರೆ , ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು,  ಜನ ಕೊರೊನ  ವೈರಸ್ ಹಾವಳಿಯಿಂದ ನಡುಗುತ್ತಿದ್ದು ಮನೆಯಿಂದ ಹೋರ ಬರಲು ಹೆದರುತ್ತಿರುವಾಗ ,  ಮುನ್ನ  ಎಂಬುವ ವ್ಯಕ್ತಿ ಗೋ ವನ್ನು  ಕಡಿದು ಗೋ ಮಾಂಸ ಮಾರಾಟ ಮಾಡುತ್ತಿದ್ದ ಘಟನೆ ಆಲೂರಿನ ದೊಡ್ಡಿ  ಬೀದಿಯಲ್ಲಿ ನೆಡೆದಿದೆ, 

 ವಿಷಯವನ್ನು  ತಿಳಿದ ಆಲೂರಿನ ಸಬ್ ಇನ್ಸ್ ಪೆಕ್ಟರ್   ಶ್ರೀಯುತ ರೇವಣ್ಣರವರು ಮತ್ತು ಅವರ ತಂಡ  ಮಾಂಸ ಮಾರಾಟ ಮಾಡುತ್ತಿದ್ದ ಜಾಗದ ಮೇಲೆ ದಾಳಿ ನೆಡೆಸಿದ್ದು ಗೋ ಮಾಂಸ ಮತ್ತು ಅದನ್ನು  ಕೊಲ್ಲಲು  ಬಳಸಿದ್ದ  ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ,

ಸ್ಥಳಕ್ಕೆ ಆಲೂರಿನ  ದಂಡಾಧಿಕಾರಿಗಳಾದ ಶ್ರೀಮತಿ ಶರೀನ್ ತಾಜ್ ರವರು, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು , ಆಲೂರಿನ ಪಶು ವೈಧ್ಯರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ ಹಾಗೂ  ಮುನ್ನರವರ ಮೇಲೆ ಕಾನೂನು ರೀತಿಯ ಕ್ರಮ ಕೈ ಗೊಳ್ಳುವಂತೆ  ತಿಳಿಸಿದ್ದಾರೆ , ಒಟ್ಟಾರೆಯಾಗಿ ಆಲೂರಿನ ಪೋಲೀಸರ  ಇಂತಹ ಕಾರ್ಯವನ್ನು ಪತ್ರಿಕೆ ಮೆಚ್ಚುತ್ತದೆ ಹಾಗೂ ಇಂತಹ ದುಷ್ಟರನ್ನು ಸದೆ  ಬಡಿಯುವ ಕೆಲಸ ಇವರ ತಂಡದಿಂದ ನೆಡೆಯಲಿ ಎಂದು ನಮ್ಮ ಮಹಾಪಾಪಿ ಪತ್ರಿಕೆ ಆಶಿಸುತ್ತದೆ.


ಇದು ಮಹಾಪಾಪಿ ಪತ್ರಿಕೆಯ ಸುದ್ದಿಜಾಲ 

ಯೋಗೇಶ   ಬಿ .ಜೆ 
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು 
ಹಾಸನ ಜಿಲ್ಲೆ 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ