ಮಾರನಹಳ್ಳಿ ಗ್ರಾಮದಲ್ಲಿ ನಿರಂತರ ಜ್ಯೋತಿ ಯ ದುರ್ಬಳಕೆ ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಮಾರನಹಳ್ಳಿ ಗ್ರಾಮದಲ್ಲಿ ನಿರಂತರ ಜ್ಯೋತಿ ಯ ದುರ್ಬಳಕೆ ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಹಾಸನ ಜಿಲ್ಲೆಯ ಸಾಲಗಾಮೆ ಹೋಬಳಿಯ ಮಾರನಹಳ್ಳಿ ಗ್ರಾಮದಲ್ಲಿ ಆ ಊರಿನ ವಾಟರ್ ಮ್ಯಾನ್ ಕೇಶವೇಗೌಡ ಸನ್ ಆಫ್ ಬಸವಲಿಂಗೇಗೌಡ ಎಂಬುವವರು ಈ ಗ್ರಾಮಕ್ಕೆ ಕುಡಿಯುವ ನೀರಿನ ಸ್ವಲಭ್ಯಕ್ಕಾಗಿ ನೀಡಿರುವ ನಿರಂತರ ಜ್ಯೋತಿಯ ಲೈನಿಂದ ಅವರ ಜಮೀನಿಗೆ ಸಂಪರ್ಕ ಕಲ್ಪಿಸಿಕೊಂಡು ನೀರು ಹೊಡೆದುಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು ಈ ಗ್ರಾಮದ ವಿಶ್ವನಾಥ್ ಎಂಬುವವರು ಕೇಳಲು ಹೋದಾಗ ವಾಟರ್ ಮ್ಯಾನ್ ಉಡಾಫೆ ಉತ್ತರವನ್ನು ನೀಡಿರುತ್ತಾರೆ. ಈ ಕುರಿತಾಗಿ ಮೇಲಧಿಕಾರಿಗಳಿಗೆ ದೂರುನೀಡಲಾಗಿದ್ದು ಗೊತ್ತಿದ್ದೂ ಗೊತ್ತಿಲ್ಲ
ಎಂಬಂತೆ ಕ್ರಮ ಜರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಹಾಗಾದರೆ ಒಂದು ಊರಿನಲ್ಲಿ ಈ ತರಹದ ಘಟನೆ ಒಂದು ವರ್ಷದಿಂದ ನೆಡೆಯುತ್ತಿದ್ದರು ಅದಿಕಾರಿಗಳಿಗೆ ಗೊತ್ತಿಲ್ಲವೇ ? ಎಂದು ಪ್ರಶ್ನಿಸುತ್ತಿದ್ದಾರೆ . ಆದ್ರೆ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ . ಮುಂದೆ ಈ ವಾಟರ್ ಮ್ಯಾನ್ ಗೆ ಗ್ರಾಮಪಂಚಾಯತಿಯವರು ಯಾವ ಕ್ರಮ ಕೈಗೊಳ್ಳುತ್ತಾರೆ , ಸರ್ಕಾರಕ್ಕೆ ಮೋಸಮಾಡುವ ಇಂತಹ ನೌಕರರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬಾರದು ಹಾಗೂ ಈತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪತ್ರಿಕೆ ಒತ್ತಾಹಿಸುತ್ತದೆ
ಇದು ಮಹಾಪಾಪಿಯ ಸುದ್ದಿಜಾಲ
ಯೋಗೇಶ ಬಿ. ಜೆ
ಹಾಸನ ಜಿಲ್ಲಾ ಮುಖ್ಫ್ಯಕಾರ್ಯನಿರ್ವಾಹಕ ಸಂಪಾದಕರು


Comments
Post a Comment