ಇಗೋ ನೋಡಿ ಇಲ್ಲೊಬ್ಬ ಮಕ್ಕಳ ಮತ್ತು ಗರ್ಭಿಣಿಯರ ಸವಲತ್ತನ್ನು ತಿಂದು ಬದುಕುವ ಉಮಾಶ್ರೀ ಎಂಬ ಭ್ರಷ್ಟ ಮೇಲ್ವಿಚಾರಕಿ

 ಸಕಲೇಶಪುರದಲ್ಲಿರುವ ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಉಮಾಶ್ರೀ ಎಂಬ ಭ್ರಷ್ಟ ಮೇಲ್ವಿಚಾರಕಿ 

ಪ್ರಿಯ ಓದುಗರೇ ಈ ಸುದ್ದಿಯ ಕುರಿತಾಗಿ ನಮ್ಮ ಪತ್ರಿಕಾ ತಂಡ ವರದಿಗಾಗಿ ಕಛೇರಿಗೆ ಭೇಟಿ ನೀಡಿದಾಗ ಅಲ್ಲಿ ಕಂಡು ಬಂದ ವಾತಾವರಣವೇ ಬೇರೆಯಾಗಿತ್ತು, ಅಲ್ಲಿರುವ ಯಾವ ಸಿಬ್ಬಂದಿಯನ್ನು ಮಾತನಾಡಿಸಿದರು ಸರಿಯಾದ ಉತ್ತರ ನೀಡದೆ ತಡವರಿಸುವುದು ಕಂಡುಬಂದಿತು . ಇನ್ನು ಇಲ್ಲಿನ ಮೇಲಧಿಕಾರಿಯವರಾದ ದಿಲೀಪ್ ರವರನ್ನು ಭೇಟಿಯಾಗಲು ಪ್ರಯತ್ನಿಸಿದ್ರು ಅವ್ರು ಕರ್ತವ್ಯ ನಿಮಿತ್ತ ಹೊರಗಡೆ ಇರುವುದಾಗಿ ತಿಳಿಸಿದ್ರು . ಆಗ್ಲಿ ಅಂತ ಉಮಾಶ್ರಿಯವ್ರಿಗೆ ನೀಡಿರುವ ನೋಟಿಸ್ , ಮತ್ತು ಇದೇ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸಮಾಡುವ ಗೀತಾರವರಿಗೆ ನೀಡಿರುವ  ನೋಟಿಸ್ ಕುರಿತು ಕೇಳಿದರು ಅದೆಲ್ಲವನ್ನು ತಮ್ಮ ಮೇಲಧಿಕಾರಿಗಳಿಗೆ ನೀಡಿದ್ದೇವೆ ಇದಕ್ಕೆ ಅವ್ರೆ ಉತ್ತರಿಸಬೇಕು ಎಂದು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡಿದರು , ಇವೆಲ್ಲವನ್ನೂ ಗಮನಿಸಿದರೆ ಇಷ್ಟೆಲ್ಲಾ ಆದ್ರೂ ನನಗೆ ಏನೋ ಗೊತ್ತಿಲ್ಲ ಎಂದು ಹೇಳುವ ಇವರು ಇನ್ನೇನು ಕೆಲಸಮಾಡುತ್ತಿದ್ದಾರೆ , ಇವರು ತಮ್ಮ ಸಿಬ್ಬಂದಿಯ ಮೇಲೆ ಯಾವ ರೀತಿ ಗಮನಹರಿಸುತ್ತಿದ್ದರೆ ಎಂಬುದು ತಿಳಿಯುತ್ತದೆ, ಮೇಲ್ನೋಟಕ್ಕೆ ನೋಡುವುದಾದರೆ . ಇಲ್ಲಿ ಮೇಲಧಿಕಾರಿಗಳ  ಶಾಮೀಲು ಇರುವುದು   ಕಂಡು ಬರುತ್ತದೆ . ಈ ಕುರಿತಾಗಿ ನಮ್ಮ ತಂಡ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುವ ಪ್ರಯತ್ನದಲ್ಲಿದೆ. ಕಾಯುತ್ತೀರಿ ಮುಂದಿನ ಸುದ್ದಿಗಾಗಿ


ಈ ಕುರಿತು ಪೂರ್ಣ ಸುದ್ದಿಗಾಗಿ ಕಾಯುತ್ತೀರಿ ನಿಮ್ಮ ಮುಂದೆ ಇಡಲ್ಲಿದ್ದೇವೆ   ಸತ್ಯ ಇದು ನಮ್ಮ ಮಹಾಪಾಪಿ ಪತ್ರಿಕೆಯ ಸುದ್ದಿಜಾಲ

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ