ತಿಮ್ಲಾಪುರದಲ್ಲಿ ದುಷ್ಕರ್ಮಿ ಗಳಿಂದ ಹುಲ್ಲಿನ ಮೆದೆಗೆ ಬೆಂಕಿ ಕಂಗಾಲಾದ ರೈತ
ತಿಮ್ಲಾಪುರದಲ್ಲಿ ದುಷ್ಕರ್ಮಿ ಗಳಿಂದ ಹುಲ್ಲಿನ ಮೆದೆಗೆ ಬೆಂಕಿ ಕಂಗಾಲಾದ ರೈತ
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ. ತಿಮ್ಲಾಪುರ ಗ್ರಾಮದಲ್ಲಿ ವಾಸವಾಗಿರುವ ಕೃಷ್ಣಮೂರ್ತಿ ಎಂಬುವವರ ೫ ಟ್ರಾಕ್ಟರ್ ಹುಲ್ಲಿನ ಮೆದೆಗೆ ಬೆಳಗಿನ ಜಾವಾ ಸುಮಾರು3.30ರ ಸಮಯದಲ್ಲಿ ದುಷ್ಕರ್ಮಿಗಳಿಂದ ಹುಲ್ಲಿನ ಮೆದೆಗೆ ಬೆಂಕಿ ಹಚ್ಚಿದ್ದಾರೆ ಇದರಿಂದ ಮೆದೆ ಸಂಪೂರ್ಣವಾಗಿ ಅತಿಕೊಂಡಿದ್ದು ಗ್ರಾಮಸ್ಥರು ಬೆಂಕಿಯನ್ನು ಆರಿಸಲು ಪ್ರಯತ್ನ ಮಾಡಿದ್ರು ಸಾಧ್ಯವಾಗದಿದ್ದಾಗ ಫೈರ್ ಇಂಜಿನ್ ರವರಿಗೆ ಕರೆಮಾಡಿ ಕರೆಸಿಕೊಂಡು ಬೆಂಕಿಯನ್ನು ಆರಿಸಿದ್ದಾರೆ, ಇದರಿಂದ ಕೃಷ್ಣಮೂರ್ತಿ ಸುಮಾರು ೫೦ರಿಂದ ೬೦ ಸಾವಿರಗಳಷ್ಟು ನಷ್ಟವಾಗಿದೆ ಎಂದು ತಮ್ಮ ಅಳಲು ತೂಡಿಕೊಂಡಿದ್ದಾರೆ. ವರ್ಷ ಪೂರ್ತಿ ಬೆಳೆದ ಹುಲ್ಲು ಸಂಪೂರ್ಣವಾಗಿ ನಾಶವಾಗಿರುವುದರಿಂದ ಈ ರೈತ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ .ಹಾಗೂ ಈ ಕುರಿತು ಸಂಬಂಧ ಪಟ್ಟ ಪೋಲೀಸ್ ಠಾಣೆಗೂ ದೂರು ನೀಡಲಾಗಿದೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಆ ದುಷ್ಕರ್ಮಿಗಳನ್ನು ಹಿಡಿದು ಈ ರೈತನಿಗೆ ನ್ಯಾಯ ದೊರಕಿಸಬೇಕಾಗಿ ಪತ್ರಿಕೆ ಒತ್ತಾಯಿಸುತ್ತದೆ
ಇದು ಮಹಾಪಾಪಿ ಪತ್ರಿಕೆಯ ಸುದ್ದಿಜಾಲ
ಯೋಗೇಶ ಬಿ ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು .
ಹಾಸನ ಜಿಲ್ಲೆ


Comments
Post a Comment