ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬೇರೆಯವರ ಪ್ರಾಣ ಕಾಪಾಡುವ ವೈದ್ಯರಿಗೋಂದು ನಮನ

    ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬೇರೆಯವರ ಪ್ರಾಣ ಕಾಪಾಡುವ ವೈದ್ಯರಿಗೋಂದು ನಮನ 

ಮನುಷ್ಯ ಎಷ್ಟೇ ಬುದ್ದಿವಂತನಾದರೂ ಪ್ರಕೃತಿಯ ಮುಂದೆ ಅವನು ಮಗು ,ಅದ್ಕಕೆ ವಿರುದ್ಧವಾಗಿ ಹೋರಾಡಲು ನಿಂತಾಗ ಆ ಪ್ರಕೃತಿ ಅವನ ವಿರುದ್ಧವೆ ತಿರುಗಿ ನಿಲ್ಲುತ್ತದೆ ಇದಕ್ಕೆ  ಮುನ್ಸೂಚನೆಯೇ  ಇಂದು ಇಡೀ ಪ್ರಪಂಚವೇ ಕೊರೋನಾ ಭೀತಿಯಲ್ಲಿ ಮುಳಿಗಿರುವಾಗ ಇದರ ಪರಿಣಾಮ ಯಾವ ರೀತಿ ತಿರುಗುತ್ತದೆ ಎಂದು ತಿಳಿಯದೆ ಹೋಗಿದೆ, ಎಲ್ಲರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವ ಸಲುವಾಗಿ ತಮಗೆ ತಾವೇ ಒಂದು ಲಕ್ಷ್ಮಣ ರೇಖೆಯನ್ನು ಎಳೆದುಕೊಂಡು ಮನೆಯಲ್ಲಿಯೇ ಉಳಿಯುವ ಪರಿಸ್ಥಿತಿ ಎದುರಾಗಿದೆ. ಆದ್ರೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬೇರೆಯವರ ಪ್ರಾಣ ಕಾಪಾಡುವ ವೈದ್ಯರು ಹಗಲು ರಾತ್ರಿ ಎನ್ನದೆ ರೋಗಿಗಳ ಆರೈಕೆ ಮಾಡುತ್ತಿದ್ದಾರೆ , ತಮ್ಮ ಪ್ರಾಣದ  ಅಂಗನ್ನು ತೊರೆದು ಕೊರೋನ ವೈರಸ್ ನ್ನು  ಹೋಗಲಾಡಿಸಲು ಪ್ರಯತ್ನ ಮಡುತ್ತಿದ್ದರೆ ,  ಹಲವಾರು ವೈಧ್ಯರು ತಮ್ಮ  ಸಂಸಾರವನ್ನೇ ಮರೆತು ದುಡಿಯುತ್ತಿದ್ದಾರೆ , ಹಣವನ್ನು ಯಾವ ರೀತಿ ಬೇಕಾದರೂ ದುಡಿಯಬಹುದು ಆದರೆ ಸೇವಾ ಮನೋಭಾವ ಇರುವುದು ಕೇವಲ ಕೆಲವರಿಗೆ ಮಾತ್ರ ಇದ್ರಲ್ಲಿ ವೈಧ್ಯರ ಪಾಲು ಹೆಚ್ಚು. ದಾದಿಯರು , ನರ್ಸ್ ಗಳು  ಇದೆ ಪ್ರಯತ್ನದಲ್ಲಿದ್ದಾರೆ , ಎಲ್ಲರು ಹಸಿದವರಿಗೆ ಅನ್ನಕೊಡಬಹುದು, ಬಟ್ಟೆ ಕೊಡಬಹುದು, ಒಂದಿಷ್ಟು ಕಾಸನ್ನು ಕೊಡಬಹುದು ಆದರೆ ಅವನ ಪ್ರಾಣ ಉಳಿಸಲು ಹೋರಾಡುವುದು ವೈದ್ಯರೆ  ಅದಕ್ಕಾಗಿಯೇ ವೈದ್ಯೋ ನಾರಾಯಣೋ ಎಂದುಹೇಳಲಾಗುತ್ತದೆ . ಅಂತಹ ವೈದ್ಯರಿಗಾಗಿ ಒಂದು ದಿನ ಮೀಸಲಿಡುವುದು ತಪ್ಪಲ್ಲ ಇಂದು ಮಾರ್ಚ್ ೩೦  ರಾಷ್ಟ್ರೀಯ ವೈಧ್ಯರ  ದಿನಾಚರಣೆ ಇಂದು ನಾವೆಲ್ಲರೂ ಸೇರಿ ಅವರಿಗೆ ಶುಭಾಷಯ ಹೇಳುವ ದಿನ ನಮ್ಮೆಲ್ಲರ ಒಳಿತಿಗಾಗಿ  ಹೋರಾಡುವ ಅವರಿಗೆ ಆ ದೇವರು ಹೆಚ್ಚಿನ ಆಯಸ್ಸನ್ನು ನೀಡಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳೋಣ . 

ಇದು ಮಹಾಪಾಪಿಯ ಸುದ್ದಿಜಾಲ.


Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ