ಹಾಸನದಲ್ಲಿ ಒಬ್ಬ ಖತರ್ನಾಕ್ ನಕಲಿ ವೈದ್ಯ
ಹಾಸನದಲ್ಲಿ ಒಬ್ಬ ಖತರ್ನಾಕ್ ನಕಲಿ ವೈದ್ಯ
ಪ್ರಿಯ ಓದುಗರೇ ಈಗಾಗಲೆ ನಾವು ತಿಳಿಸಿರುವಂತೆ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಪುರಾಣದಲ್ಲಿ ವೈದ್ಯನನ್ನು ನಾರಾಯಣನಿಗೆ ಹೋಲಿಸುತ್ತಾರೆ ಕಾರಣ ಒಬ್ಬ ವ್ಯಕ್ತಿಯ ಪ್ರಾಣ ಉಳಿಸುವ ಸಾಮರ್ತ್ಯ ದೇವರಿಗೆ ಬಿಟ್ಟರೆ ಆ ಸಾಮರ್ತ್ಯ ಇರುವುದು ವೈದ್ಯನಿಗೆ ಮಾತ್ರ ಅದಕ್ಕಾಗಿಯೆ ಜನರು ತಮ್ಮ ಅರೋಗ್ಯ ಕೆಟ್ಟಾಗ ವೈದ್ಯರ ಬಳಿ ಹೋಗುತ್ತಾರೆ ,ಇಂತಹ ಪವಿತ್ರ ವೃತ್ತಿ ಯನ್ನು ಮಾಡಬೇಕಾದ್ರೆ ಅದಕ್ಕೆ ಒಂದು ಅರ್ಹತೆ ಬೇಕಾಗುತ್ತದೆ, ಆದ್ರೆ ನಕಲಿ ವೈದ್ಯರ ಹಾವಳಿ ಇದನ್ನು ಮರೆತು ತಲೆಯೆತ್ತಿ ನಿಂತೆದೆ.
ಇದಕ್ಕೆ ನಾನೇನು ಕೆಡಿಮೆ ಇಲ್ಲ ಎಂಬಂತೆ ಹಾಸನ ಇಂದು ಸೆಡ್ಡು ಹೊಡೆದು ನಿಂತಿದೆ ಇದಕ್ಕೆ ಉದಾಹರಣೆ ಎಂಬಂತೆ ಹಾಸನದ ಕೆಸ್ತೂರಿ ಬಾ ರಸ್ತೆಯಲ್ಲಿ ಸುಪ್ರಿಯ ಬಾರ್ ಪಕ್ಕದಲ್ಲಿ ಇರುವ ಪದ್ಮಾವತಿ ಕ್ಲಿನಿಕ್ . ಇದ್ರ ನಿಜವಾದ ಮಾಲೀಕರು ಡಾಕ್ಟರ್ ಕೆ ಆನಂದ್ ಕುಮಾರ್ ಮತ್ತು ಡಾಕ್ಟರ್ ರಾಜಾರಾಮ್ ಎಂಬುವವರು , ಆದ್ರೆ ಇವ್ರು ಬೆಂಗಳೂರಿಗೆ ಹೋಗಿ ತುಂಬಾ ಕಾಲಗಳೆ ಆಗಿವೆ . ಇದನ್ನು ಅರಿತ ಹಾಸನದ ಹೇಮಾವತಿ ನಗರದ ನಿವಾಸಿ ಎಂದು ಹೇಳಿಕೊಳ್ಳುವ ಶ್ರೀಕಾಂತ್ ಎಂಬ ವ್ಯಕ್ತಿ ತಾನೇ ವೈದ್ಯ ಎಂದು ಕ್ಲಿನಿಕ್ ಗೆ ಬಂದು ಕುಳಿತು ಬರುವ ರೋಗಿಗಳಿಗೆ ಕುಡಿದ ಅಮಲಿನಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ .
ಅವ್ರು ನೀಡುವ ಚಿಕಿತ್ಸೆ ಕುರಿತು ಅವರನ್ನು ವಿಚಾರಿಸಿದ್ರೆ ಹೇಳಲು ತಡವರಿಸುತ್ತಾರೆ, ಇನ್ನೂ ಇವ್ರ ವಿದ್ಯಾಭ್ಯಾಸದ ಪುರಾವೆಗಳನ್ನು ಕೇಳಿದ್ರೆ ಅವು ಮನೆಯಲ್ಲಿವೆ ಎಂದು ಅವುಗಳನ್ನು ತರಿಸಿಕೊಳ್ಳಿ ಎಂದು ಹೇಳಿದ್ರೆ ಮನೆಯಲ್ಲಿ ಯಾರು ಇಲ್ಲ . ಎಂಬ ಕಾರಣ ಹೇಳುತ್ತಾರೆ ನಮ್ಮ ಅನುಮಾನ ಹೆಚ್ಚಾಗಿ ಇನ್ನು ಬಲ್ವಂತ್ತ ಮಾಡಿದಕ್ಕೆ ನಮ್ಮಿಂದ ತಪ್ಪಿಸಿಕೊಂಡು ಕ್ಲಿನಿಕ್ ನಿಂದಲೇ ಹೋಡಿಹೋದ್ರು ಇವ್ರಿಗೆ ಪಕ್ಕದ ಗಣೇಶ್ ಮೆಡಿಕಲ್ ನವರು ಸಪೂರ್ಟ್ ಗೆ ಬಂದು ನಾವು ಏನೋ ತಪ್ಪು ಮಾಡಿರುವ ರೀತಿಯಲ್ಲಿ ನಮ್ಮನೆ ಅಪರಾಧಿಗಳ ತರಹ ನೋಡಿದ್ರು ಅಲ್ಲದೆ ಒಬ್ಬ ವ್ಯಕ್ತಿ ತಾನು ವಕೀಲ ಎಂದು ಹೇಳಿಕೊಂಡು ಬೇರೆ ಪತ್ರಿಕೆಯವರಿಂದ ನಮಗೆ ಕೆರೆ ಮಾಡಿಸಿ ಹೆದರಿಸುವ ಪ್ರಯತ್ನವನ್ನು ಕೂಡ ಮಾಡಿದ್ದಾರೆ. ಒಂದು ಪವಿತ್ರ ವಕೀಲ ವೃತ್ತಿಯನ್ನು ಮಾಡುವ ವಕೀಲ ಇವರು ಜನರ ಪ್ರಾಣದ ಜೊತೆ ಆಟವಾಡುವ ಇಂತಹ ನಕಲಿ ವೈದ್ಯರಿಗೆ ಪ್ರಚೊದನೆ ನೀಡುತ್ತಿರುವುದು ಒಂದು ವಿಷಾದನೀಯ ವಿಷಯವಾಗಿದೆ.ಈ ಕುರಿತು ಈಗಾಗಲೇ ಹಾಸನ ಜಿಲ್ಲೆಯ ಜಿಲ್ಲಾದಿಕಾರಿಗಳಿಗೂ, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಿಗೂ ಮತ್ತು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ದೂರು ನೀಡಲಾಗಿದೆ. ಈ ಕುರಿತಾಗಿ ಮೇಲಾಧಿಕಾರಿಗಳು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡ ಬೇಕಾಗಿದೆ . ಇಂತಹ ಪ್ರಕರಣಗಳ ವಿರುದ್ಧ ನಮ್ಮ ಪ್ರತಿಕೆ ಹೋರಾಟ ನೆಡೆಸಲಿದೆ
ಯೋಗೇಶ ಬಿ.ಜೆ
ಹಾಸನ ಜಿಲ್ಲಾ ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
Comments
Post a Comment