ಸರ್ಕಾರಕ್ಕೆ ಕಾಣದ ಬಡವರ ಗೋಳು ! ಮನೆಯ ಮಾಲೀಕರಿಗೆ ಚೆಲ್ಲಾಟ ಬಾಡಿಗೆದಾರರಿಗೆ ಪ್ರಾಣ ಸಂಕಟ


ಕೊರೊನ ಮಹಾಮಾರಿಯ ದಾಳಿಯಿಂದ ಇಂದು ಜನತೆ ತ್ತತ್ತರಿಸಿ  ಹೋಗಿದೆ , ಈ ಮಾರಿ  ಯಾವಾಗ, ಯಾರಿಂದ, ಹೇಗೆ ಬಂದು  ಹೊಕ್ಕರಿಸುತ್ತದೆ ಎಂಬುದೇ ತಿಳಿಯುತ್ತಿಲ್ಲ. ಇದನ್ನು ತಪ್ಪಿಸಲು ನಮ್ಮ ಘನ ಸರ್ಕಾರ ಈಗಾಗಲೇ ಇಡೀ ದೇಶವನ್ನೇ ಸರಿ ಸುಮಾರು 40 ದಿನಗಳ ಕಾಲ ಲಾಕ್ ಡೌನ್ ಮಾಡಿತ್ತು , ಹಾಗೂ ಎಲ್ಲರು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿತ್ತು ಇದರ ಪರಿಣಾಮ ದುಡಿಮೆಯಿಲ್ಲದ ಜನರ ಜೀವನ ವ್ಯವಸ್ಥೆ ಸಂಪೂರ್ಣವಾಗಿ ಏರುಪೇರಾಗಿ ಹೋಗಿತ್ತು. ಇಲ್ಲಿ ಹಣ ವಿದ್ದವನು ಹೇಗೂ ಈ ಸಮಸ್ಯೆಯಿಂದ ಪಾರಾಗಿದ್ದಾನೆ ಆದರೆ ಇಲ್ಲಿ ನಾವು ಯೋಚಿಸಬೇಕಾಗಿರುವುದು ಮಧ್ಯಮವರ್ಗದ ಮತ್ತು ಕೊಲಿ ಮಾಡಿ ಬದುಕಬೇಕಾಗಿರುವ ವರ್ಗದ ಬಗ್ಗೆ. ಇದರಲ್ಲಿ ಸರಿ ಸುಮಾರು 50ರಿಂದ 60 ರಷ್ಟು ಜನ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ, ತಮ್ಮ ಪುಟ್ಟ ಬದುಕನ್ನು ಕಟ್ಟಕೊಳ್ಳುವ ಕನಸು ಕಂಡಿರುವ ಇವರು ಈ ಕೊರೊನ ಮಹಾಮಾರಿಯ ದಾಳಿಯಿಂದ ಇಂದು ನಲುಗಿ ಹೋಗಿದ್ದಾರೆ ತಮ್ಮ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಇವರಿಗೆ ತಾವು ಖರೀದಿಸಿದ ಯಾವುದೊ ಒಂದು ಗೃಹ ಬಳೆಕೆಯ ವಸ್ತುವಿನ EMI ಕಟ್ಟಲು ಮನೆ ಬಾಡಿಗೆ ಕಟ್ಟಲು ಪರದಾಡುತ್ತಿದ್ದಾರೆ, ಇದನ್ನು ಅರಿತ ನಮ್ಮ ಸರ್ಕಾರ ಮೂರು ತಿಂಗಳು EMI ಕಟ್ಟಲು ಮತ್ತು ಮನೆ ಬಾಡಿಗೆ ಕಟ್ಟಲು ವಿನಾಯತಿ ಕೊಟ್ಟಿದೆ ಆದರೆ ಇದು ಯಾವುದೇ  ಲಿಖಿತ ಸುತ್ತೋಲೆ ಇಲ್ಲ. ಇದನ್ನೇ ಮುಂದಿಟ್ಟುಕೊಂಡಿರುವ ಮನೆ ಮಾಲೀಕರು ಈ ನಿಯಮ ಬೆಂಗಳೂರಿಗೆ ಮಾತ್ರ ಸಂಬಂಧ ಪಟ್ಟ ವಿಚಾರವಾಗಿದೆ ಹಾಗೂ ಸರ್ಕಾರ ಯಾವುದೇ ಲಿಖಿತ ಆದೇಶ ನೀಡಿಲ್ಲ ಎಂದು ಬಾಡುಗೆದಾರರಿಗೆ ಬಾಡಿಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಇದರಲ್ಲಿ  ಗಮನಿಸಬೇಕಾದ ವಿಚಾರವೆಂದರೆ ಶೇ 50 ರಷ್ಟು ಮನೆ ಮಾಲೀಕರು ಬಾಡಿಗೆದಾರರ ಪರಿಸ್ಥಿತಿ ಅರ್ಥ ಮಾಡಿಕೊಂಡು ಮುಂಬರುವ ದಿನಗಳಲ್ಲಿ ಈಗಿನ ಬಾಡಿಗೆಯನ್ನು ಸ್ವಲ್ಪ ಸ್ವಲ್ಪ ಸೇರಿಸಿ ಕೊಡುವಂತೆಯೋ ಹೇಳುತ್ತಿದ್ದಾರೆ. ಆದರೆ ಇನ್ನೂಳಿದ ಶೇ 50 ರಷ್ಟು ಮನೆ ಮಾಲೀಕರು  ಸರ್ಕಾರದ ಈ ಆದೇಶ ನಮಗಲ್ಲ ಎಂಬಂತೆ ನೆಡೆದುಕೊಳ್ಳುತ್ತಿದ್ದರೆ ಈ 50 ರಷ್ಟು ಇರುವ ಮಾಲೀಕರಲ್ಲಿ ಹೆಚ್ಚಿನಭಾಗ ಸರ್ಕಾರಿ ಕೆಲಸದಲ್ಲಿ ಇರುವ ಉದ್ಯೋಗಿಗಳು ತಾವು ಕಟ್ಟಿರುವ ಮನೆಗಳನ್ನು ಬಾಡಿಗೆ ಕೊಟ್ಟಿದ್ದು ಇವರಿಗೆ ಸರ್ಕಾರ ಕೊರೊನ ಮಧ್ಯದಲ್ಲೂ ಸಂಬಳವನ್ನು ಕಡಿತಮಾಡದೆ ಸಂಬಳ ನೀಡುತ್ತಿದ್ದೆ ಅದರೊ ಇವರಿಗೆ ಬರುವ ಮನೆ ಬಾಡಿಗೆ ಇಂದಲೇ ಇವರು ಜೀವನ ಸಾಗಿಸುತ್ತಿದ್ದಾರೆ ಎಂಬಂತೆ ನೆಡೆದು ಕೊಳ್ಳುತ್ತಿದ್ದಾರೆ , ಸಚಿವರು  ಬಾಡಿಗೆ ಕೇಳುವ ಮಾಲೀಕರ ವಿರುದ್ಧ ಕೇಸು ದಾಖಲಿಸುವಂತೆ ಬಹಿರಂಗವಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ , ಸರಿ ! ನಮ್ಮದೊಂದು ಪ್ರಶ್ನೆ  ಬಾಡಿಗೆದಾರ ಮಾಲೀಕ ವಿರುದ್ಧ ಕೇಸು ದಾಖಲಿಸಿದರು ಅದು ಎಷ್ಟರ ಮಟ್ಟಿಗೆ ನಿಲ್ಲುತ್ತದೆ ?  ಬಾಡಿಗೆದಾರ ಮನೆಯ ಮಾಲೀಕನ ವಿರುದ್ಧ ದೊರು ದಾಖಲಿಸಿದ ತಕ್ಷಣ ಅವನ್ನನು ಮನೆ ಖಾಲಿ ಮಾಡಿಸುತ್ತಾರೆ ನಂತರ ಅವನು ಬೇರೆ ಮನೆ ಸೇರಬೇಕೆಂದರು ಬೇರೊಬ್ಬ ಮನೆಯ ಮಾಲೀಕ ತನ್ನ ಮನೆಯನ್ನು ಬಾಡಿಗೆ ನೀಡಲು ನಿರಕರಿಸುತ್ತಾನೆ ಹಾಗಾದರೆ ಬಾಡಿಗೆದಾರನ ಜೀವನಕ್ಕೆ ಬೆಲೆ ಇಲ್ಲವೇ ? ತನ್ನ ಜೀವನಕ್ಕೆ ಇರಲಿ ಇಲ್ಲದಿರಲಿ ಬಾಡಿಗೆದಾರ ಇಷ್ಟು ದಿನ  ಬಾಡಿಗೆ ತಂದು ಕಟ್ಟುತ್ತಿದ್ದ ಆದರೆ ಈಗ ಅವನ ಜೀವ ಮತ್ತು ಜೀವನ ಉಳಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ , ಹಾಗೂ ಯೋಚಿಸುವುದಾದರೆ ಸರ್ಕಾರಿ ಕೆಲಸದಲ್ಲಿರುವವರು ಬಾಡಿಗೆ ಮನೆಯಲ್ಲಿ ಇದ್ದಾರೆ. ಅವ್ರೇನೋ ತಮಗೆ ಬಂದಿರುವ ಸಂಬಳದಲ್ಲಿ ಬಾಡಿಗೆ ಕೊಟ್ಟು ಕೈ ತೊಳೆದುಕೊಂಡಿದ್ದಾರೆ.  ಆದರೆ  ಕೊಲಿ ಕೆಲಸ ಮಾಡುವವರು , ಯಾವುದೊ ಸಣ್ಣ ಪುಟ್ಟ ವ್ಯಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವ ಪರಿಸ್ಥಿತಿ ಅದೋಗತಿ ಆಗಿದೆ , ಆದರೆ  ಮನೆಯ ಮಾಲೀಕರು ಕೊರೊನಗೊ ನಮ್ಮ ಬಾಡಿಗೆಗೋ ಏನು ಸಂಬಂಧ ನಮಗೆ ಕೊಡಬೇಕಾದ ಬಾಡಿಗೆ ಕೊಟ್ಟು ಬಿಡಿ ಎಂದು ಒತ್ತಾಯ ಹಾಕುತ್ತಿದ್ದಾರೆ , ಯಾರಿಂದನಾದರೂ  ಸಾಲ  ಮಾಡಿಯಾದರೂ ನಮ್ಮ ಬಾಡಿಗೆ  ಕೊಡಿ ಇಲ್ಲವಾದಲ್ಲಿ ಮನೆಖಾಲಿ ಮಾಡಿ ಎಂದು ಬೆದರಿಸುತ್ತಿದ್ದಾರೆ . ಸರಿ!  ಕೊರೊನದಿಂದ ಇಡೀ ಆರ್ಥಿಕ ವ್ಯವಸ್ಥೆಯೇ ಹಿಂದೆ ಬಿದ್ದಿರುವಾಗ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ನಿಂತು ಹೋಗಿರುವಾಗ ಯಾರು ತಾನೇ ಸಾಲ ನೀಡುತ್ತಾರೆ ಹೇಳಿ ? ಕಳೆದ ಒಂದು ವಾರದಿಂದ ತಾನೇ ಸರ್ಕಾರ ಲಾಕ್ ಡೌನ್ ಸಡಿಲ ಗೊಳಿಸಿದ್ದು ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಮುಳಿಗಿರುವಾಗ ಎಲ್ಲಿಯೂ ಹಣ ಸಿಗುವುದಿಲ್ಲ ಹಾಗೂ ವ್ಯಾಪಾರ ವಹಿವಾಟು ನಿದಾನವಾಗಿ ಚೇತರಿಸಿಕೊಳ್ಳ ಬೇಕಾಗಿದೆ ಇದ್ಯಾವುದರ ಪರಿಜ್ಞಾನವೇ ಇಲ್ಲ ವೆಂಬಂತೆ ನೆಡೆದುಕೊಳ್ಳುತ್ತಿರುವ ಕೆಲವು ಮಂದಿ ಬಾಡಿಗೆ ಮನೆ ಮಾಲಿಕರಿಗೆ  ಸರ್ಕಾರವೇ ಕಡಿವಾಣ ಹಾಕಬೇಕಾಗಿದೆ ಹಾಗೂ ಬಾಡಿಗೆದಾರನ ಜೀವ ಉಳಿಸಬೇಕಾಗಿದೆ , ಈ ಮೂಲಕ ಸಚಿವರಿಗೆ ಒಂದು ಬೇಡಿಕೆ  ಕೇವಲ ಬೆಂಗಳೂರು ಜನತೆಗೆ ಮಾತ್ರ ಕೊರೊನದ  ಕರಿನೆರಳು ಬಿದ್ದಿದೆಯಾ ಅಥವಾ ಇಡೀ ರಾಜ್ಯಕ್ಕೆ ಈ ನೆರಳು ಅವರಿಸಿದೆಯಾ ? ಮತ್ತು ಲಾಕ್ ಡೌನ್ ಕೇವಲ ಬೆಂಗಳೂರಿಗೆ ಮಾತ್ರ ಆಗಿತ್ತ ?ಅಥವಾ ಇಡೀ ರಾಜ್ಯಕ್ಕೆ ಆಗಿತ್ತ ಎಂಬ ಪ್ರಶ್ನೆ ಕೇಳುವುದರ ಜೊತೆಗೆ  ಈ ಎಲ್ಲವನ್ನು ಆಲೋಚಿಸಿ  ರಾಜ್ಯದ ಎಲ್ಲ ಮಧ್ಯಮ ಮತ್ತು ಕೆಳವರ್ಗದ ಜನರ ಜೀವನ ಉಳಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ , ಹಾಗೂ ಬಾಡಿಗೆದಾರರ ಜೀವ ಹಿಂಡುತ್ತಿರುವ ಮತ್ತು ಬಾಡಿಗೆದಾರರ ಜೀವನ ಕ್ರಮದ ಬಗ್ಗೆ ಕೀಳಾಗಿ ಮಾತನಾಡುವ ಮನೆ ಮಾಲೀಕರ ಮೇಲೆ ಈ ಕೊಡಲೇ ಸರ್ಕಾರ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತಾ  ಈ ಕುರಿತಾಗಿ ನಮ್ಮ ತಂಡ ಪ್ರತಿ ಜಿಲ್ಲೆಯಿಂದ ಆಯಾ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕ ಮನವಿ ಸಲ್ಲಿಸುವ ಕೆಲಸ  ಮಾಡಲಿದೆ , ಇಂತಹ ಜೀವ ಹಿಂಡುವ ಮನೆ ಮಾಲೀಕರ ಬಗ್ಗೆ  ಸರ್ಕಾರಕ್ಕೆ ಸುಳಿವು ನೀಡುವ ಕೆಲಸವನ್ನು ಮಾಡಲಿದೆ . 

ಈ ಮೂಲಕ ಬಾಡಿಗೆದಾರರರಿಗೆ ಬಾಡಿಗೆಗಾಗಿ ಹಿಂಸಿಸುವ ಮತ್ತು ಒತ್ತಾಹಿಸುವ ಮನೆ ಮಾಲೀಕರಿಗೆ ಎಚ್ಚರಿಕೆನಮ್ಮ ತಂಡ  ನಿಮ್ಮಗಳ ನಡುವೆಯೇ ಇದೆ ನಿಮ್ಮ ಈ  ವರ್ತನೆಯನ್ನು ಸರ್ಕಾರದ ಗಮನಕ್ಕೆ ತರಲಿದೆ ನಿಮಗೆ ಯಾವುದೇ ಪ್ರಭಾವಿ ವ್ಯಕ್ತಿಗಳ ಬೆಂಬಲವಿದ್ದರೂ, ನೀವು  ಯಾವುದೇ ಹುದ್ದೆಯಲ್ಲಿದ್ದರು  ನಾವು ಅದ್ಕಕೆ ಹೆದರುವುದಿಲ್ಲ ನೀವು ಬದುಕಿ ನಿಮ್ಮ ಬಾಡಿಗೆದಾರರನ್ನು ಬದುಕಲು ಬಿಡಿ .ಅವರೆಲ್ಲೂ ಓಡಿ ಹೋಗುವುದಿಲ್ಲ, ನಿಮ್ಮ ಮನೆಯಲ್ಲಿಯೇ ಇರುತ್ತಾರೆ ಮತ್ತು ಅವರಿಂದ ಪಡೆದಿರುವ ಮುಂಗಡ ಹಣ ನಿಮ್ಮ ಕಡೆ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.  

ಓದುಗರಲ್ಲಿ ಒಂದು ವಿನಂತಿ:  ಈ ನಮ್ಮ ಒಂದು  ವರದಿ ತಮಗೆ ಇಷ್ಟವಾದರೆ  ತಾವು ನಮ್ಮ ಈ  ಪ್ರಯತ್ನ ವನ್ನು ಬೆಂಬಲಿಸಿ ಮತ್ತು ಈ ಸುದ್ದಿಯನ್ನು ನಿಮ್ಮವರಿಗೂ ಶೇರ್ ಮಾಡಿ 

                                    

                                      ಜಾಹೀರಾತು 







ಇದು ಮಹಾಪಾಪಿಯ ಸುದ್ದಿ ಜಾಲ 

Comments

Post a Comment

Popular posts from this blog

ಸಿಂಹ ಗರ್ಜನೆ ಮಾಡುತ್ತಿರುವ ಡಿ ವೈ ಎಸ್ ಪಿ ಶ್ರೀಯುತ ಗೋಪಿಯವರ ತಂಡ ಸಕಲೇಶಪುರ ಪೋಲೀಸರಿಂದ ಭರ್ಜರಿ ಭೇಟೆ