ದಕ್ಷ ಪೋಲೀಸ್ ಅಧಿಕಾರಿ ಶ್ರೀ ಗೋಪಿಯವರನ್ನು ಕುರಿತು ಒಂದಿಷ್ಟು ಮಾತು
ಪೋಲೀಸ್ ಎಂಬ ಪದವೆ ಒಂದು ಗಡುಸಾದ ವಾಕ್ಯ , ಆರಕ್ಷಕ ರು ನಮ್ಮೆಲ್ಲರ ನೆಮ್ಮದಿಯ ಹೊಣೆಗಾರಿಕೆ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು ಕಾರಣ ಇಷ್ಟೆ, ಇಂದು ನಾವೆಲ್ಲರೂ ನಮ್ಮ ಮನೆಯಲ್ಲಿ ಯಾವುದೇ ಇಲ್ಲದೆ ಭಯವಿಲ್ಲದೆ ನಿದ್ರಿಸುತ್ತಿದ್ದೇವೆ ಎಂದರೆ ಕಾರಣ ಹಗಲಿರುಳೆನ್ನದೆ ನಮ್ಮನ್ನು ಕಾಯುತ್ತಿರುವ ಆರಕ್ಷಕ ರು, ಈ ನಮ್ಮ ಆರಕ್ಷಕ ರು ಅವರ ಸಂಸಾರದ ಜವಾಬ್ದಾರಿಗಿಂತ ನಮ್ಮಗಳ ರಕ್ಷಣೆಯ ಜವಾಬ್ದಾರಿಯನ್ನು ಅವರ ಹೆಗಲ ಮೇಲೆ ಹಾಕಿಕೊಂಡು ನಮ್ಮನ್ನು ಕಾಯುತ್ತಾರೆ ರಾತ್ರಿ ನಾವು ಮಲಗಿದರೆ ಆರಕ್ಷಕ ರು ನಮಗಾಗಿ ಎಚ್ಚರವಾಗಿರುತ್ತಾರೆ, ಇಂತಹ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಕ್ಷ ಹಾಗೂ ಧೀಮಂತ ಪೋಲೀಸ್ ಅಧಿಕಾರಿಯಾದ ಸಕಲೇಶಪುರ ಉಪ ವಿಭಾಗದ ಪೋಲೀಸ್ ಉಪಾಧೀಕ್ಷಕರಾದ ಶ್ರೀಯುತ ಗೋಪಿಯವರನ್ನು ತಮ್ಮೆಲ್ಲರಿಗೂ ಒಂದಿಷ್ಟು ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ನಮ್ಮದು.
ಸಕಲೇಶಪುರ ಉಪ ವಿಭಾಗದ ಪೋಲೀಸ್ ಉಪಾಧೀಕ್ಷಕರಾದ ಶ್ರೀಯುತ ಗೋಪಿ ಹುಟ್ಟಿದ್ದು ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದಲ್ಲಿ ಶ್ರೀಯುತ ರಾಜನಾಯ್ಕ ಮತ್ತು ಶ್ರೀಮತಿ ಲಲಿತ ಬಾಯಿಯವರ ಮೊದಲ ಮಗನಾಗಿ ಜನಿಸಿದ ಇವರು ಒಂದು ತುಂಬಾ ಬಡ ಕುಟುಂಬದಲ್ಲಿ ಬೆಳೆದು ಬಾಲ್ಯದಲ್ಲಿಯೇ ದೇಶ ಪ್ರೇಮವನ್ನು ಮೈ ಗೊಡಿಸಿಕೊಂಡು ಬೆಳೆದರು , ದೇಶ ಸೇವೆಯನ್ನು ಮಾಡಬೇಕು ಎಂಬ ಅಂಬಲವನ್ನು ಹೊಂದಿದ್ದ ಶ್ರೀಯುತರು ಭಾರತೀಯ ಸೇನೆಯನ್ನು ಸೇರಿ ೧೫ ವರ್ಷಗಳ ಕಾಲ ಹವಲ್ದಾರ್ ರಾಗಿ ಕಾರ್ಯನಿರ್ವಹಿಸಿದ್ದಾರೆ . ಸೇನೆಯಿಂದ ನಿವೃತ್ತಿ ಹೊಂದಿದ ಮೇಲೂ ಜನ ಸೇವೆಯನ್ನು ಮಾಡಬೇಕು ಎಂಬ ಆಸೆಯಿಂದ ಪೋಲೀಸ್ ಇಲಾಖೆಯನ್ನು ಸೇರಿದರು ,ಬೆಂಗಳೂರಿನಲ್ಲಿ ರೆವಿನ್ಯೂ ಇನ್ಸ್ಪೆಕ್ಟೇರ್ ಆಗಿ ೨೦೧೫ರಿಂದ ೨೦೧೭ ರ ವರೆಗೆ ಕಾರ್ಯನಿರ್ವಹಿಸಿದ್ದಾರೆ , ೦೬-೦೧-೨೦೨೦ ರಲ್ಲಿ ಸಕಲೇಶಪುರ ಉಪ ವಿಭಾಗದ ಪೋಲೀಸ್ ಉಪಾಧೀಕ್ಷಕರಾಗಿ ವರ್ಗಾವಣೆಯಾಗಿ ಬಂದ ಮೇಲೆ ಇಲ್ಲಿಯ ಜನರ ಹಿತವನ್ನು ಕಾಯಲು ಈ ಹಿಂದೆ ಇದ್ದ ಅಧಿಕಾರಿಗಳು ಮಾಡದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ .ಇವರು ಇಲ್ಲಿ ಅಧಿಕಾರ ತೆಗೆದುಕೊಂಡ ಕೇವಲ ಒಂದು ತಿಂಗಳಿನಲ್ಲಿ ೨೦ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎನ್ನುವುದು ಒಂದು ಹೆಮ್ಮೆಪಡುವ ವಿಚಾರ . ಆಲೂರಿನ ಸಂತೋಷ್ ಎಂಬುವನನ್ನು ಬಂಧಿಸಿ ಅವನಿಂದ ೩೦೦ಗ್ರಾಂ ಚಿನ್ನ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ , ಸಕಲೇಶಪುರದ ಗ್ರಾಮೀಣ ಕೋಟ ಕಚೇರಿಯಲ್ಲಿ ನೆಡೆದ ದರೋಡೆಯ ಬೆನ್ನು ಹತ್ತಿ ಹೊರಟ ಇವರು ಕಳ್ಳರನ್ನು ಬಂಧಿಸಿ ಅವರಿಂದ ನಾಲ್ಕು ಲಕ್ಷದ ಎಂಭತ್ತು ಸಾವಿರ ರೂಗಳನ್ನು ವಶಪಡಿಸಿಕೊಂಡಿದ್ದಾರೆ , ಈ ಮೊದಲಿದ್ದ ಮರಳುದಂದೆಯನ್ನು ಕೆಡಿಮೆ ಮಾಡುವಲ್ಲಿ ಇವರ ಪಾತ್ರ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು ,
ಹಾಗೆಯೆ ಇತ್ತೀಚಿಗೆ ಸಕಲೇಶಪುರ ತಾಲೂಕಿನಲ್ಲಿ ಮನೆಗಳ್ಳನ ಪ್ರಕರಣ ಹೆಚ್ಚಾಗಿದ್ದು ಈ ಕುರಿತು ಆರೋಪಿಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಹಾಸನ ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಶ್ರೀಯುತ ಶ್ರೀನಿವಾಸಗೌಡ ಆರ್ . ಐ ಪಿ ಎಸ್ , ಇವರ ಉಸ್ತುವಾರಿಯಲ್ಲಿ ತಂಡ ರಚಿಸಿಕೊಂಡು ಫಯಾಜ್ ಅಹಮದ್ ಎಂಬುವವನನ್ನು ಬಂಧಿಸಿದ್ದು ಸದರಿ ಆರೋಪಿಯು ಸಕಲೇಶಪುರದಲ್ಲಿ -೦೫, ಸಕಲೇಶಪುರ ಗ್ರಾಮಾಂತರದಲ್ಲಿ -೦೨, ಯಳಸೂರಿನಲ್ಲಿ -೦೧,ಆಲೂರಿನಲ್ಲಿ -೦೧. ಬಡಾವಣೆಯಲ್ಲಿ-೦೩ ಮತ್ತು ಬೇಲೂರಿನಲ್ಲಿ-೦೧ ಪ್ರಕಟನಗಳಲ್ಲಿ ಭಾಗಿಯಾಗಿದ್ದು , ಮಂಡ್ಯ ನಗರದಲ್ಲಿ -೦೩, ಗುಂಡ್ಲುಪೇಟೆಯಲ್ಲಿ-೦೪, ಕೊಡಗು ಜಿಲ್ಲೆಯ ಶನಿವಾರ ಸಂತೆಯಲ್ಲಿ -೦೧ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ . ಈತನಿಂದ ಸುಮಾರು ೨೪,೭೫. ೦೦೦ ಬೆಲೆ ಬಾಳುವ ೮೨೫ ಗ್ರಾಂ ಚಿನ್ನಾಭರಣ ಹಾಗೂ ೭,೮೦. ೦೦೦ ಬಿ ಬಾಳುವ ೧೭ಕೆಜಿ ಬೆಳ್ಳಿ ವಸ್ತುಗಳನ್ನು ಮತ್ತು ೩೦. ೦೦೦ ಬೆಳೆಯ ಲ್ಯಾಪ್ ಟಾಪ್ , ೧೨ನ್ಯಾಸವಿರ ಬೆಲೆಯ ವಾಚು ಸೇರಿದಂತೆ ಒಟ್ಟು ೩೨,೯೭. ೦೦೦ ಬೆಲೆ ಸ್ವತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ನಮ್ಮ ತಂಡ ಈ ಕುರಿತು ಶ್ರೀಯುತ ಗೋಪಿಯವರನ್ನು ಮಾತನಾಡಿಸಿದಾಗ ಇದು ಕೇವಲ ನನ್ನೊಬ್ಬನ ಗೆಲುವಲ್ಲ ಇದು ಇಡೀ ನಮ್ಮ ಸಿಬ್ಬಂದಿಯವರ ಸಹಕಾರದಿಂದ ಬಂದ ಗೆಲುವು ಎಂದು ಹೇಳುತ್ತಾರೆ ಇದ್ರಲ್ಲಿಯೇ ಇವರ ದೊಡ್ಡ ಗುಣ ಎದ್ದು ಕಾಣಿಸುತ್ತದೆ. ತಮ್ಮ ಜೊತೆಗೆ ತಮ್ಮವರನ್ನು ಬೆಳೆಸಬೇಕು ಎಂಬುದು ಇವರ ಬಯಕೆಯಾಗಿದೆ , ಇಂತಹ ದಕ್ಷ ಅಧಿಕಾರಿ ಸಕಲೇಶಪುರ ತಾಲೂಕಿಗೆ ಬಂದಿರುವುದು ಈ ತಾಲೂಕಿನ ಪುಣ್ಯ ಎಂದರೆ ತಪ್ಪಾಗಲಾರದು .
ಇನ್ನೂ ಮುಂದಿನ ದಿನಗಳಲ್ಲಿ ಇವರಿಂದ ಜನತೆಗೆ ಯಾವ ರೀತಿಯ ಸೇವೆ ದೂರೆಯುತ್ತದೆ ಎಂಬುದನ್ನು ಜನತೆ ಕಾಯುತ್ತಿದೆ . ಹಾಗೂ ಇಂತಹ ಅಧಿಕಾರಿಗಳು ಇನ್ನು ಎತ್ತರಕ್ಕೆ ಬೆಳೆಯಬೇಕು ಎಂಬುದೇ ಪತ್ರಿಕೆಯ ಆಶಯ .
ಇದು ಮಹಾಪಾಪಿ ಪತ್ರಿಕೆಯ ಸುದ್ದಿಜಾಲಾ
ಯೋಗೇಶ ಬಿ.ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು
ಹಾಸನ ಜಿಲ್ಲೆ
Comments
Post a Comment