ತನ್ನ ಕರುಳಕುಡಿಯನ್ನು ಹೊಸಗಿ ಆತ್ಮಹತ್ಯೆ ಮಾಡಿಕೊಂಡ ತಾಯಿ , ಆಗಿದ್ದಾದರೂ ಏನು ?
ಕೊರೊನ ಮದ್ಯೆ ದೇಶವೇ ತಲ್ಲಣಿಸಿ ಹೋಗಿರುವಾಗ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವಾಗ ಎಷ್ಟೋ ಜನ ಅನ್ನಕ್ಕಾಗಿ ಸರ್ಕಾರವನ್ನು ಬೇಡಿಕೊಳ್ಳುತ್ತಿದ್ದರೆ, ಅಂದರೆ ತಮ್ಮ ಬದುಕು ಮತ್ತು ತಮ್ಮ ಪ್ರಾಣದ ಬೆಲೆ ಅವರಿಗೆ ತಿಳಿದಿದೆ , ಆದರೆ ಇದರ ಯಾವ ಅರಿವೇ ಇಲ್ಲವೆಂಬಂತೆ ತನ್ನ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿ ತಾನು ಕೊಡ ನೇಣಿಗೆ ಶರಣಾಗಿರುವ ಗಟನೆ ನೆಡೆದಿದೆ , ಅದು ಎಲ್ಲಿ ಎಂದು ಕೇಳುವಿರಾ ? ಬೇರೆಲ್ಲೊ ಅಲ್ಲ ಅದು ಹಾಸನದಲ್ಲಿ , ಹಾಸನದ ಕೆ.ಎಂ ಫ್ ನಲ್ಲಿ ಕೆಲಸ ಮಾಡುತ್ತಿರುವ ಪಡುವಲಹಿಪ್ಪೆಯ ಗ್ರಾಮದ ಗುರು (೩೮ ವರ್ಷ ) ಎಂಬುವವರ ಪತ್ನಿ ರೂಪ (೩೬ವರ್ಷ ) ಕಳೆದ ರಾತ್ರಿ ತನ್ನ ೬ವರ್ಷದ ಮಗು ಬಿಂದುವನ್ನು ಉಸಿರುಕಟ್ಟಿ ಸಾಯಿಸಿ ತಾನು ಕೊಡ ನೇಣಿಗೆ ಶರಣಾಗಿದ್ದಾಳೆ, ಯಾವ ತಾಯಿಯೇ ಆದರೂ ತನ್ನ ಕರುಳ ಕುಡಿಯನ್ನು ಕಿತ್ತು ಜನ್ಮ ನೀಡಿ ಸಾಕಿ ಸಲಹಿದ ತನ್ನ ಮಗುವನ್ನೇ ಕೊಲ್ಲುವ ಕೃತ್ಯ ಹೆಸಗಿದ್ದಾಳೆ ಎಂದರೆ ಅವಳ ಮನಸ್ಸಿನಲ್ಲಿ ಏನೆಲ್ಲಾ ನೆಡೆದಿರಬಹುದು ಎಂದೊಮ್ಮೆ ಯೋಚಿಸಬೇಕಾಗುತ್ತದೆ, ಒಂದು ತಾಯಿಯ ಹೃದಯ ಇಷ್ಟು ಕಠೋರವಾಗಬೇಕಾದರೆ ಆ ತಾಯಿಗೆ ಆಗಿದ್ದಾದರೂ ಏನು ?
ಊಹಾ ಪೋಹ ಗಳು : ನಮ್ಮ ತಂಡ ಈ ವಿಷಯದ ಕುರಿತಾಗಿ ವರದಿ ಸಂಗ್ರಹಿಸಲು ಹೋದಾಗ ಗುರು ಇಸ್ಪೀಟ್ ಆಟದ ದಾಸನಾಗಿದ್ದು ಅದ್ಕಕಾಗಿ ತುಂಬಾ ಸಾಲ ಮಾಡಿದ್ದೂ ಈ ವಿಷಯಕ್ಕಾಗಿ ದಂಪತಿಗಳ ನಡುವೆ ಹಾಗಾಗೇ ಜಗಳ ನೆಡೆಯುತ್ತಿತ್ತು ಎಂದು ತಿಳಿದುಬಂದಿದೆ ಹಾಗೂ ಕಳೆದ ರಾತ್ರಿ ಗುರು ತನ್ನ ಊರಾದ ಊರಾದ ಪಡುವಲಹಿಪ್ಪೆಗೆ ಹೋಗಿದ್ದಾನೆಂದು ಈ ಸಮಯದಲ್ಲಿ ಈ ಘಟನೆ ನೆಡೆದಿದೆ . ಎಂದು ತಿಳಿದುಬಂದಿದೆ , ಅದೇನೇ ಆಗಲಿ ತಾನು ಏನು ತಪ್ಪು ಮಾಡದ ಆ ಕಂದಮ್ಮ , ತನ್ನದಲ್ಲದ ತಪ್ಪಿಗೆ ಪ್ರಾಣ ಬಿಡುವಾಗ ಅದೆಷ್ಟು ನೊಂದಿರಬಹುದು ಅಲ್ಲವೇ ಇಂತಹ ಒಂದು ವಿಷಮ ಪರಿಸ್ಥಿತಿ ಯಾವ ತಾಯಿಗೂ ಮತ್ತು ಮಗುವಿಗೂ ಬರಬಾರದು, ತನ್ನ ಸಾವಿಗೆ ತನ್ನ ಪತಿಯೇ ಕಾರಣ ಎಂದು ಮತ್ತು ನನ್ನತಹ ತಾಯಿಯನ್ನ ಕ್ಷಮಿಸಪ್ಪ ಎಂಬ ಗೋಡೆಯಮೇಲೆ ಬರೆದಿರುವುದು ಆ ತಾಯಿಯ ಪಶ್ಚಾತಾಪದ ಕುರುಹಾಗಿದೆ . ಈ ಕುರಿತಾಗಿ ಪೋಲೀಸ್ ಇಲಾಖೆ ತನಿಖೆ ನೆಡೆಸಿ ಆ ಪುಟ್ಟ ಕಂದಮ್ಮನ ಸಾವಿಗೆ ನ್ಯಾಯ ಒದಗಿಸಬೇಕೆಂದು ಈ ಮುಲಕ ಕೇಳಿಕೊಳ್ಳುತ್ತದೆ .
ಇದು ಮಹಾಪಾಪಿಯ ಸುದ್ದಿಜಾಲ
ಯೋಗೇಶ ಬಿ ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು
ಹಾಸನ ಜಿಲ್ಲೆ
ಇದು ಮಹಾಪಾಪಿಯ ಸುದ್ದಿಜಾಲ
ಯೋಗೇಶ ಬಿ ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು
ಹಾಸನ ಜಿಲ್ಲೆ
Comments
Post a Comment