ಹೇಮಾವತಿ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ಯುವಕರ ಸಾವು

                 ಹೇಮಾವತಿ ಹಿನ್ನೀರಿನಲ್ಲಿ ಈಜಲು ಹೋದ ಇಬ್ಬರು ಯುವಕರ ಸಾವು



 ಅರಕಲಗೂಡು: ಕಳೆದ ವಾರವಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯೋಧ ಅರಕಲಗೂಡು ಸಮೀಪದ ಕಟ್ಟೇಪುರ ಹೊಳೆಯಲ್ಲಿ ಮುಳುಗಿ ಸಾವು ರಕ್ಷಿಸಲು ಹೋದ ಸಂಬಂಧಿಯೂ ನೀರು ಪಾಲುಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯೋಧ ಸೇರಿದಂತೆ ಇಬ್ಬರ ಸಾವು ಲಾಕ್‌ಡೌನ್‌ ಸಮಯದಲ್ಲಿ ಹೇಮಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯೋಧ ಸೇರಿದಂತೆ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಕೊಡ್ಲಿಪೇಟೆ ಹೋಬಳಿಯ ಬೆಸೂರು ನಿಲುವಾಗಿಲಿನಲ್ಲಿ ಇಂದು ಸಂಭವಿಸಿದೆ.

ಬೆಸೂರು ನಿಲುವಾಗಿಲು ಗ್ರಾಮದ ಲತೇಶ್ ಹಾಗೂ ಸೈನಿಕನಾಗಿರುವ ಲೋಕೇಶ್ (28) ಮೃತಪಟ್ಟವರು.ಲೋಕೇಶ್ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದು  ಅರಕಲಗೂಡು ಅರೆಹಳ್ಳಿಯಿಂದ ತಮ್ಮ ಸಂಬಂಧಿ ನಿಲುವಾಗಿಲುವಿನ ಲತೇಶ್  ಮನೆಗೆ ಬಂದಿದ್ದರು. ಇಂದು ಹೇಮಾವತಿ ಹಿನ್ನೀರಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ ಸಾವಿಗಿಡಾಗಿದ್ದಾರೆ. ಕಳೆದ ವಾರವಷ್ಟೆ ಲೋಕೇಶ್ ಅವರಿಎ ವಿವಾಹ ನಿಶ್ಚಿತಾರ್ಥ ಆಗಿತ್ತು.ವಿಷಯ ತಿಳಿಯುತ್ತಿದ್ದಂತೆ ಶನಿವಾರ ಸಂತೆ ಪೊಲೀಸರು ಮತ್ತು ಸೋಮವಾರ ಪೇಟೆ ಆಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರ  ಮೃತದೇಹಗಳನ್ನು  ನದಿಯಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದು ಮಹಾಪಾಪಿಯ ಸುದ್ದಿಜಾಲ 
ತಾಲ್ಲೂಕು ವರದಿಗಾರರು : ಅಕ್ಮಲ್  ಪಾಷಾ 


               ಯೋಗೇಶ ಬಿ ಜೆ 
 ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು 
             ಹಾಸನ ಜಿಲ್ಲೆ 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ