ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಇಂದು ಹಾಸನ ಜಿಲ್ಲೆಯೆ ಕೊರೊನ ಭೀತಿಯಲ್ಲಿ ಮುಳುಗಿರುವಾಗ ಹಾಸನ ಜಿಲ್ಲೆಯ ಆಲೂರು ತಾಲೂಕು ಪಾಳ್ಯ ಹೋಬಳಿ ಹುಲ್ಲಳ್ಳಿಯಲ್ಲಿ ಅಪರಿಚಿತ ವುಕ್ತಿಯ ಶವವು ಕೆರೆಯಲ್ಲಿ ಸಿಕ್ಕಿದೆ ,
ಈ ವ್ಯಕ್ತಿಯ ಕುರಿತಾಗಿ ನಮ್ಮ ತಂಡ ವಿಚಾರಿಸಿದಾಗ ಇವನ ಹೆಸರು ಶಂಕರ ಎಂದು ತಿಳಿದುಬಂದಿದೆ ಹಾಗೂ ಇವನ ವಯಸ್ಸು ಸರಿ ಸುಮಾರು ೩೦ ರಿಂದ ೩೫ ವರ್ಷ ಇರಬಹುದು ಎಂದು ಭಾವಿಸಲಗಿದೆ , ಈ ವ್ಯಕ್ತಿಯು ಅಕ್ಷಯ್ ಎಂಬುವವರ ಮನೆಯಲ್ಲಿ ಕಳೆದ ೨೦ ದಿನಗಳಿಂದ ಕೆಲಸ ಮಾಡುತ್ತಿದನೆಂಬುದು ತಿಳಿದು ಬಂದಿದೆ. ಈ ಕುರಿತಾಗಿ ಅಕ್ಷಯ್ ಯವರನ್ನ ವಿಚಾರಿಸಲು ಈ ವ್ಯಕ್ತಿಯು ಕಳೆದ ೨೦ ದಿನಗಳ ಹಿಂದೆ ಸಕಲೇಶಪುರ ಸಂತೆಯಲ್ಲಿ ಒಬ್ಬನೇ ನಿಂತಿದ್ದು ತನಗೆ ೩ ದಿಗಳಿಂದ ಊಟ ತಿಂಡಿ ಇಲ್ಲ ಹಾಗೂ ತನಗೆ ಏನಾದರು ಕೆಲಸ ನೀಡಬೇಕೆಂದು ನಮ್ಮನ್ನು ಕೇಳಿಕೊಂಡ ಹಾಗಾಗಿ ಅವನನ್ನು ನಮ್ಮ ಹೊಲದಲ್ಲಿ ಶುಂಠಿ ಕೆಲಸ ಮಾಡಲು ಇಟ್ಟಿಕೊಡಿದ್ದಾಗಿ ಹೇಳುತ್ತಾರೆ , ಆದ್ರೆ ಕಳೆದ ೪ ದಿನಗಳ ಹಿಂದೆ ಈ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಿದ್ದು, ಅವ್ನಿಗೆ ಬರಬೇಕಾದ ಸಂಬಳವನ್ನು ಪೂರ್ಣವಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ . ಹಾಗೂ ಈ ವ್ಯಕ್ತಿಯು ಮಧ್ಯಪಾನ ವ್ಯಸನಿಯಾಗಿದ್ದ ಎಂದು ಅಕ್ಷಯ್ ತಿಳಿಸಿದ್ದಾರೆ, ಆದ್ರೂ ಕೊಡ ನಮ್ಮನ್ನು ಕಾಡುವ ಒಂದು ಪ್ರೆಶ್ನೆ ಯಾರೇ ಆಗಲಿ ಒಬ್ಬ ಅಪರಿಚಿತ ಹೇಗೆ ಕೆಲಸಕ್ಕೆ ಇಟ್ಟುಕೊಂಡರು? , ಇಂದು ನಮ್ಮವರನ್ನೇ ನಾವು ನಂಬುವುದು ಕಷ್ಟವಾಗಿರುವಾಗ ಇಷ್ಟು ಸುಲಭವಾಗಿ ಹೇಗೆ ಈ ವ್ಯಕ್ತಿಯನ್ನು ಒಳಗೆ ಸೇರಿಸಿಕೊಂಡರು ? ಇದು ತಪ್ಪಲ್ಲವೇ ಎಂಬುದು , ಅದೇನೇ ಇರಲಿ ಈ ಕುರಿತಾಗಿ ನಮ್ಮ ಪೋಲೀಸರು ಕಟ್ಟುನಿಟ್ಟಿನ ಕ್ರಮ ತೆಡೆದುಕೊಂಡು ಹೆಚ್ಚಿನ ತನಿಖೆ ನೆಡೆಸಬೇಕೆಂದು ಮಹಾಪಾಪಿ ಪತ್ರಿಕೆ ಕೇಳಿಕೊಳ್ಳುತ್ತದೆ .
ಇದು ಮಹಾಪಾಪಿಯ ಸುದ್ದಿಜಾಲ
ಯೋಗೇಶ ಬಿ ಜೆ
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರು
ಹಾಸನ ಜಿಲ್ಲೆ


Comments
Post a Comment