ನಿರ್ಗತಿಕರಿಗಾಗಿ ಮಹಾಸುದ್ದಿಯ ಮಾತುಕತೆ , ಮಹಾಸುದ್ದಿಗೆ ಸ್ಪಂದಿಸಿದ ಸಕಲೇಶಪುರ ತಹಸೀಲ್ದಾರ್ ಮಂಜುನಾಥ್


ಕೊರೊನ  ಎಂಬ  ಮಹಾಮಾರಿ  ನಮ್ಮ  ದೇಶವನ್ನೇ ತಲ್ಲಣಗೊಳಿಸುತ್ತಿದೆ ಇದರ ಮದ್ಯೆ ಸಾರ್ವಜನಿಕರು ಯಾರು ಕೊಡ ಮನೆಯಿಂದ ಹೊರಗಡೆ ಬರದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ ಹೀಗಿರುವಾಗ ಹಣವಿದ್ದವನು ಹೇಗೋ ಬಚಾವಾಗುತ್ತಾನೆ.  ಆದ್ರೆ ಇಲ್ಲಿ ನಾವು ಯೋಚಿಸಬೇಕಾಗಿರುವುದು ಮಧ್ಯಮವರ್ಗ ಮತ್ತು ಕೆಳವರ್ಗದ ಜನರ ಸ್ಥಿತಿಗತಿಗಳನ್ನ, ಆದಿನ ದುಡಿದು ತಿನ್ನಬೇಕಾದವರ ಪರಿಸ್ಥಿತಿಯನ್ನ ಒಂದು ದಿನ ಕೆಲಸಕ್ಕೆ ಹೋಗದೆ ಹೋದರೆ ಅಂದು ಜೀವನ ನೆಡೆಸಲು ಕಷ್ಟವಾಗಿರುವವರ ಬಗ್ಗೆ, ದಾನಿಗಳಾದರು ಎಷ್ಟು ದಿನ ತಾನೇ ಕೊಡಲು ಸಾಧ್ಯ , ಕೊತು ತಿನ್ನುವವನಿಗೆ ಕುಡಿಕೆ ಹಣವಿದ್ದರೂ ಸಾಲದು ಎಂಬಂತಾಗಿದೆ ಇಂತಹ ಪರಿಸ್ಥಿತಿಯಲ್ಲಿ ಇನ್ನು ಬಡವರಗತಿ ಹೇಗೆ ಎಂದು ಎಲ್ಲರು ಒಮ್ಮೆ ಯೋಚಿಸಬೇಕಾಗಿದೆ, ಅದ್ಕಕಾಗಿಯೇ ನಮ್ಮ ಘನ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡವರ ಬೆನ್ನೆಲುಬಾಗಿ ನಿಲ್ಲಲು ಪ್ರಯತ್ನಿಸುತ್ತಿದೆ , ಆದರೆ ಈ ಯೋಜನೆಗಳು ಎಷ್ಟೋ ಮಂದಿಗೆ ತಲುಪುತ್ತಿಲ್ಲ ಎಂಬುದಂತೂ ನಿಜ ಸಂಗತಿ . ಇದಕ್ಕೆ ಉದಾಹರಣೆ ಎಂಬಂತೆ ನಮ್ಮ ಪತ್ರಿಕೆ ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಿರೇಕೆರೆ ಮಳಲಿ ಗ್ರಾಮದಲ್ಲಿ ತೋಟದ ಕೆಲಸ ಮಾಡುವ ಕುಟುಂಬಗಳನ್ನು ನಮ್ಮ ತಂಡ ಭೇಟಿಮಾಡಿತು ಅವರನ್ನು ಮಾತನಾಡಿಸಿತು ಆಗ ಹೊರಬಿದ್ದ ಸತ್ಯ ಅಲ್ಲಿ ವಾಸಿಸುತ್ತಿರುವ ಸುಮಾರು ೧೧ ಕುಟುಂಬಗಳು ತೊಂದರೆಯಲ್ಲಿರುವುದು . ಈ ಕುಟುಂಬಗಳಲ್ಲಿ ೫ ಕುಟುಂಬಗಳಿಗ ಪಡಿತರ ಚೀಟಿಯೇ ಇಲ್ಲ ಇನ್ನು ನಮ್ಮ ಸರ್ಕಾರ ಘೋಷಿಸಿರುವಂತೆ ಪಡಿತರ ಚೀಟಿ ಇಲ್ಲದವರಿಗೂ ಕೊಡ ಪಡಿತರವನ್ನು ವಿತರಿಸಬೇಕು ಎಂಬುದನ್ನು ತಿಳಿದ ಇವರು ನ್ಯಾಯಬೆಲೆ ಅಂಗಡಿಗೆ ಹೋಗಿ ವಿಚಾರಿಸಿದರೆ ನ್ಯಾಯಬೆಲೆ ಅಂಗಡಿಯವರು ಸರ್ಕಾರದಿಂದ ಇನ್ನು ನಮಗೆ ಆದೇಶ ಬಂದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ ,ಹಾಗೆಯೆ ಕಳೆದ ೨೧ ದಿನಗಳಿಂದ ತೋಟದಲ್ಲಿ ಕೆಲಸವನ್ನು ಕೊಡ ಕೊಟ್ಟಿಲ್ಲ , ಹೀಗಿರುವಾಗ ನಾವು ಜೀವನ ಮಾಡುವುದು ಹೇಗೆ ಎಂದು ಅವರು ಕೇಳುತ್ತಿದ್ದರೆ  ಎಂತವಹರ ಮನವು ಕೊಡ  ಕಲುಕುತ್ತದೆ , 


ಈ ಕುರಿತಾಗಿ ನಮ್ಮ ಹಾಸನ ಜಿಲ್ಲಾ ಸಂಪಾದಕರಾದ ಯೋಗೇಶರವರು ಸಕಲೇಶಪುರ ತಾಲ್ಲೂಕು   ತಹಸೀಲ್ದಾರ್ ರವರನ್ನು ಬೇಟಿಮಾಡಿ ಪತ್ರಿಕೆ  ಕಡೆಯಿಂದ  ಮನವಿ ಮಾಡಿಕೊಂಡರು 

    ನಮ್ಮ ಮನವಿಗೆ ಸ್ಪಂದಿಸಿದ  ಅಧಿಕಾರಿಗಳು ಕೊಡಲೇ ಕ್ರಮ ಕೈ ಗೊಳ್ಳುವಂತೆ ತಿಳಿಸಿದರು ಅದರಂತೆ ತುರ್ತಾಗಿ ಕ್ರಮ ತೆಗೆದುಕೊಳ್ಳುವಂತೆ ಹಿರಿಯ ಕಾರ್ಮಿಕ ನಿರೀಕ್ಷಕರಿಗೆ ಪತ್ರವನ್ನು ಕೊಡ ಕಳುಹಿಸಿ ಪರಿಶೀಲನೆ ನೆಡೆಸಿದ್ದಿದ್ದು ಅಲ್ಲದೆ ತಾವೇ ಖುದ್ದಾಗಿ ಹೋಗಿ ಆ ಕುಟುಂಬಗಳನ್ನು ಭೇಟಿ ಮಾಡಿ ಅವ್ರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಮಾಡಿರುವುದು ಅಲ್ಲದೆ ಆ ಕುಟುಂಬಗಳಿಗೆ ಕೆಲಸವನ್ನು ನೀಡುವಂತೆ ಮಾಲೀಕರಿಗೆ ನಿರ್ದೇಶನ ನೀಡಿದ್ದಾರೆ . 

ಇದು ನಮ್ಮ ಪತ್ರಿಕೆಯ ವರದಿಗೆ ಸಿಕ್ಕ ಫಲಶ್ರುತಿ ಆಗಿದೆ ಅಲ್ಲದೆ ಇಂತಹ ಧೀಮಂತ ಹಾಗೂ ಬಡವರ ಬಗ್ಗೆ ಒಲವು ಇರುವ ಅಧಿಕಾರಿಗಳು ಇರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರೆ ತಪ್ಪಾಗಲಾರದು , ಹಾಗು ಇವರಿಂದ ಸಹಾಯ ಪಡೆದ ಕುಟುಂಬಗಳು ಇವರನ್ನು ತುಂಬು ಹ್ರದಯದಿಂದ ಆರ್ಶಿವದಿಸಿದ್ದಾರೆ , ಹಾಗೂ ಇವರಿಂದ ಇನ್ನೂ ಹೆಚ್ಚಿನ ಬಡವರ ಪರ ಕೆಲಸ ನೆಡೆಯಲಿ ಎಂದು ಪತ್ರಿಕೆ ಕೇಳಿಕೊಳ್ಳುವುದರ ಜೊತೆಗೆ ಪತ್ರಿಕೆಗೆ ಸ್ಪಂದಿಸಿದ್ದಕ್ಕೆ ಪತ್ರಿಕೆ ಕಡೆಯಿಂದ  ಧನ್ಯವಾದಗಳನ್ನು ತಿಳಿಸುತ್ತದೆ


ಇದು ಮಹಾಪಾಪಿ ಪತ್ರಿಕೆಯ ಸುದ್ದಿಜಾಲ 

ಯೋಗೇಶ ಬಿ ಜೆ 
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು 
ಹಾಸನ ಜಿಲ್ಲೆ 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ