ತಾಲೂಕು ಆಡಳಿತದಿಂದ ಕೊರೊನ ವಿರುದ್ಧ ಅಪರಿಮಿತ ಸೇವೆ, ಆಲೂರು ಪೊಲೀಸರಿಂದ ಸಾತ್


ಆಲೂರು : ಕೊರೊನ ಎಂಬ ಮಹಾಮಾರಿ ದೇಶವನ್ನೇ ತನ್ನ ಕೈಯಲ್ಲಿ ಹಿಡಿದಿಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅದರ ವಿರುದ್ಧವಾಗಿ ನಮ್ಮ ಸರ್ಕಾರ ಪ್ರತಿ ಜಿಲ್ಲೆ ತಾಲ್ಲೂಕು , ಮತ್ತು ಪಂಚಾಯಿತಿ ಮಟ್ಟದಲ್ಲೂ ತಂಡ ರಚಿಸಿ ಕೆಲಸ ನಿರ್ವಹಿಸುತ್ತಿದೆ , ಇದರ ಮದ್ಯೆ ನಮ್ಮನ್ನು ರಕ್ಷಿಸುವ ಪೋಲೀಸ್ ಇಲಾಖೆ ತನ್ನ ದಿನ ನಿತ್ಯದ ಕೆಲಸದ ಒತ್ತಡದ ಜೊತೆಗೆ ಈ ಮಹಾಮಾರಿಯನ್ನು ತಡೆಯಲು ರಸ್ತೆ ರಸ್ತೆ ಗಳಲ್ಲೂ ಬೇರಿಕೆಟ್ ಹಾಕಿ  ಅನಾವ್ಯಶಕವಾಗಿ ಹೊರಗೆಡೆ ಬರುವವರನ್ನು ತಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಈ ಮದ್ಯೆ  ಸಂಸಾರವನ್ನು ಕೊಡ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ . ಇದಕ್ಕೆ ನಮ್ಮ ಆಲೂರಿನ ಪೋಲೀಸ್ ವರ್ಗವುಕೊಡ ಸೇರುತ್ತದೆ, ಇವರು ತಾಲ್ಲೂಕು ಆಡಳಿತದೊಂದಿಗೆ ಕೈ ಜೋಡಿಸಿ ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವ ಕೆಲಸ ಮಾಡುತ್ತಿದ್ದಾರೆ ರಾತ್ರಿ ಹಗಲೆನ್ನದೆ ಕೆಲಸ ಮಾಡುತ್ತಿರುವ ಇವರಿಗೆ ರಸ್ತೆಯೇ ಮನೆಯಾಗಿ ಹೋಗಿದೆ 
ತನ್ನ ಸಂಸಾರಕ್ಕಿಂತ ತಮ್ಮ ಸುತ್ತ ಮುತ್ತಲಿರುವ ಜನರ ಆರೋಗ್ಯದ ಮೇಲಿನ ಕಾಳಜಿಯಿಂದ ಕಾರ್ಯ ನಿರ್ವಹಿಸುತ್ತಿರುವ ಆಲೂರಿನ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಯುತ ರೇವಣ್ಣರವ ತಂಡ ತಾಲೂಕು ಆಡಳಿತ ಜೊತೆ ಸೇರಿ ಪ್ರತಿ ಹಳ್ಳಿ ಹಳ್ಳಿ ಯಲ್ಲೂ ಹೋಗಿ  ಹೊರಗಿನಿಂದ ಬಂದವರಿಗೆ ಹೋಂ  ಕೋರೆಂಟೇನ್ ಬಗ್ಗೆ ತಿಳಿಸಿ ಅವರನ್ನು ಮನೆಯಲ್ಲಿಯೇ ಇರುವಂತೆ ನಿರ್ದೇಶನ ನೀಡಿ ಬರುತ್ತಿದ್ದಾರೆ, ಅನುಮಾನ ಬಂದವರಿಗೆ ಅರೋಗ್ಯ ಇಲಾಖೆಯ ಸಹಕಾರದೊಂದಿಗೆ ಹೋಂ ಕೋರೆಂಟೇನ್ ಸೀಲ್ ಹಾಕಿ ಬರುತ್ತಿದ್ದಾರೆ. 


ಈ ಕೊರೊನ ಎಂಬ ಮಹಾಮಾರಿ ಯಾವಾಗ ಯಾರಿಂದ ಹರಡುತ್ತಿದೆ ಎಂದು  ಗೊತಿಲ್ಲದಿದ್ದರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಇವರಿಗೆ ನಮ್ಮ ಕಡೆಯಿಂದ ಒಂದು ಸಲಾಂ ಹಾಗೆಯೆ ರಾಜ್ಯದ ಎಲ್ಲಾ ಪೊಲೀಸರಿಗೂ ಒಂದು ಸಲಾಂ.

ಇದು ಮಹಾಪಾಪಿ  ಪತ್ರಿಕೆಯ ಸುದ್ದಿಜಾಲ 

ಆಲೂರು ತಾಲ್ಲೂಕು ವರದಿಗಾರರು : ಧರಣೇಂದ್ರ 

ಯೋಗೇಶ ಬಿ.ಜೆ 
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು 
ಮಹಾಪಾಪಿ ಪತ್ರಿಕೆ ಜಿಲ್ಲೆ 


Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ