ಬಾಂಬೆ ಮಾವ ಬಂದ ಕೊರೊನದ ಆತಂಕ ಹೊತ್ತು ತಂದ

                              ಬಾಂಬೆ ಮಾವ ಬಂದ ಕೊರೊನದ ಆತಂಕ ಹೊತ್ತು ತಂದ 

ಕೊರೊನ ಎಂಬ ಮಹಾಮರಿಯಿಂದ ಬೇಸೆತ್ತು ಹೋಗಿರುವ ಜನತೆ ಇನ್ನೇನು ಲಾಕ್ ಡೌನ್ ಮುಗಿಯಬಹುದು ಎಂಬ ಒಂದು ಆಶಾಕಿರಣ ಹೊತ್ತು ಕಾಯುತ್ತಿದ್ದಾರೆ ಈ ನಡುವೆ ಬಾಂಬೆಯಿಂದ ಅಕ್ರಮವಾಗಿ ಹಾಸನದ ಚನ್ನರಾಯಪಟ್ಟಣಕ್ಕೆ ಬಂದು ಇಲ್ಲಿಂದ ಸ್ನೇಹಿತನ ಸಹಕಾರದಿಂದ ತನ್ನೂರಾದ ಮಂಡ್ಯಕ್ಕೆ ತಲುಪಿರುವ ವ್ಯಕ್ತಿಗೆ ಕೊರೊನ ಸೋಂಕು ಮೆಟ್ಟಿರುವುದು ದೃಢವಾಗಿದೆ, ಇವನು ಮಂಡ್ಯದ ನಾಗಮಂಗಲ ತಾಲ್ಲೂಕಿನ ಡಿ . ಸಾತೇನಹಳ್ಳಿ ಗ್ರಾಮದ ವ್ಯಕ್ತಿ ಎಂದು ತಿಳಿದು ಬಂದಿದ್ದು ಇವನ್ನನ್ನು ಕೌರೆಂಟೇನ್ ನಲ್ಲಿ ಇಟ್ಟು ಪರೀಕ್ಷೆ ನೆಡೆಸಿದ್ದು ಕೊರೊನ ಪಾಸಿಟಿವ್ ಇರುವುದು ಕಂಡುಬಂದಿದ್ದು ಇವನ ಟ್ರಾವಲ್ ಹಿಸ್ಟ್ರಿಯನ್ನು ಕಲೆಯಾಕಲಾಗಿದ್ದು ಇವನು ಬಾಂಬೆಯಿಂದ ಉಡುಪಿ ಮಂಗಳೂರು ಮಾರ್ಗವಾಗಿ ಹಾಸನ ತಲುಪಿ ನಂತರ ಪ್ರಯಾಣ ಬೆಳೆಸಿರುತ್ತಾನೆ, ಚನ್ನರಾಯಪಟ್ಟಣದ ಗಡಿಭಾಗದ ಹೆಗ್ಗಡಿಹಳ್ಳಿಯ  ವ್ಯಕ್ತಿಯೊಬ್ಬ ಇವನ   ಜೊತೆಗೆ ಪ್ರಯಾಣ ಬೆಳೆಸಿರುತ್ತಾನೆ ಇದರಿಂದ ಚನ್ನರಾಯಪಟ್ಟಣದ ಗಡಿಭಾಗದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಜೊತೆಗೆ ಬಾಂಬೆಯಿಂದ ಬಂದವ ಭಾನುವಾರ ಒಂದು ಮದುವೆಯಲ್ಲೂ ಪಾಲ್ಗೊಂಡಿದ್ದ . ಆ ಮದುವೆಗೆ ಹಾಸನದ ಗಡಿಭಾಗದ ಹಲವಾರು ಜನರು ಭಾಗಿಯಾಗಿದ್ದರು  ಎಂದು ತಿಳಿದುಬಂದಿದ್ದು ಅವರನ್ನೆಲ್ಲ ಹುಡುಕಿ ಕೌರೆಂಟೇನ್ ಗೆ ಸೇರಿಸಲಾಗುತ್ತಿದೆ. ಎಂದು ತಿಳಿದು ಬಂದಿದೆ ಹಾಗೂ ಈ ವ್ಯಕ್ತಿ ಆಲೂರಿನ ಭಾಗದ ಕೆಲವು ವ್ಯಕ್ತಿಗಳ ಸಂಪರ್ಕ ಹೊಂದಿದ್ದ ವರದಿ ಬಂದಿರುವ ಹಿನ್ನಲೆಯಲ್ಲಿ ಈ ಭಾಗದ ಕೆಲವು  ವ್ಯಕ್ತಿಗಳನ್ನು ಹುಡುಕಿ ಕೌರೆಂಟೇನ್ ಗೆ ಒಳಪಡಿಸಲಾಡಿದೆ . 

ಇದರಲ್ಲಿ ಒಂದು ಸಂತೋಷದ ವಿಷಯವೆಂದರೆ ಈತನೊಂದಿಗೆ ನೇರ ಸಂಪರ್ಕ ಹೊಂದಿದ್ದ  ಚನ್ನರಾಯಪಟ್ಟಣದ 8 ಪ್ರಾಥಮಿಕ ಸಂಪರ್ಕ ಹೊಂದಿದ್ದ ಜನರನ್ನು ಸೇರಿ,30ಸೆಕೆಂಡರಿ ಸಂಪರ್ಕ ವ್ಯಕ್ತಿಗಳ ಸ್ವ್ಯಾಬ್ ಪರೀಕ್ಷೆಗೊಳಪಡಿಸಲಾಗಿತ್ತು ಎಲ್ಲಾ38 ಜನರ ವರದಿ ನೆಗೆಟಿವ್ ಆಗಿದ್ದು ಅಧಿಕಾರಿಗಳ ಕೈ ಸೇರಿದ್ದು ನೆನ್ನೆಯಿಂದ ತೀವ್ರ ಆತಂಕ ಸೃಷ್ಟಿಸಿದ್ದ ನಾಗಮಂಗಲದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ವೈದ್ಯಕೀಯ ವರದಿಯಿಂದ ಕೊಂಚ ನಿರಾಳತಂದಿದೆ, ಹಾಗೂ ಅಲೂರಿನ ಭಾಗದ  ವ್ಯಕ್ತಿಗಳ ರಕ್ತವನ್ನು ಪರೀಕ್ಷೆಗೆ ಕಳುಹಿಸಿದ್ದು  ವರದಿಗಾಗಿ ಜಿಲ್ಲಾಡಳಿತ    ಕಾಯುತ್ತಿದೆ, ಗ್ರೀನ್ ಝೋನ್ ಜಿಲ್ಲೆ ಹಾಸನಕ್ಕೂ ಕೊರೊನಾ ವಕ್ಕರಿಸೋ ಆತಂಕ ಮನೆ ಮಾಡಿತ್ತು, ವರದಿ ನೆಗೆಟಿವ್ ಬಂದರೂ ಎಲ್ಲರನ್ನೂ ಆಸ್ಪತ್ರೆಯಲ್ಲಿ ಕ್ವಾರಂಟೇನ್ ಮಾಡಿರೊ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್, ಜಿಲ್ಲೆಯ ಗಡಿಭಾಗ ಸಂಪೂರ್ಣ ಬಂದ್ ಗೆ ಹಾಸನ  ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ .


                                       ಜಾಹೀರಾತು






ಇದು  ಮಹಾಪಾಪಿಯ ಸುದ್ದಿಜಾಲ 


Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ