ಅನುಮತಿ ಇಲ್ಲದೆ ಬೆಂಗಳೂರಿನಿಂದ ಬಂದ ದಂಪತಿಗಳನ್ನು ಹಿಡಿದ ಆಲೂರು ಪೊಲೀಸರು
ಕೊರೊನ ದ ಭೀತಿ ದಿನೇದಿನೇ ಹೆಚ್ಚಾಗುತ್ತಿದ್ದು ಕಳೆದ 14ರಂದು ಮುಗಿಯಬೇಕಿದ್ದ ಲಾಕ್ ಡೌನ್ ಮುಂದಿನ ಮೇ 3 ರ ವರೆಗೆ ವಿಸ್ತರಣೆಯಾಗಿದೆ ಕಾರಣ ಇದರ ಭೀಕರತೆ ಇದು ಯಾವ ರೂಪದಲ್ಲಿ ಬರುತ್ತಿದೆ ಯಾರಿಂದ ಯಾರಿಗೆ ಹರಡುತ್ತಿದೆ ಎಂಬುದೇ ಒಂದು ಪ್ರಶ್ನಿ ಯಾಗಿದೆ, ಕೇವಲ ಒಂದೂವರೆ ವರ್ಷದ ಮಗುವನ್ನು ಕೊಡ ಬಿಡದ ಈ ಮಾರಿ ತನ್ನ ನಾಲಿಗೆಯನ್ನು ಚಾಚುತ್ತಿದೆ, ಇದೆ ಕಾರಣಕ್ಕಾಗಿ ಪ್ರಧಾನಿಯವರು ಯಾರು ಯಾರು ಯಾವ ಯಾವ ಜಾಗದಲ್ಲಿ ಇದ್ದರೋ ಅಲ್ಲಿಯೇ ಇರುವಂತೆ ಕೈ ಮುಗಿದು ಕೇಳಿಕೊಂಡಿದ್ದಾರೆ ಒಬ್ಬ ಪ್ರಧಾನಿ ತನ್ನ ಜನತೆಯ ಮುಂದೆ ಕೈ ಮುಗಿಯುತ್ತಾನೆ ಎಂದರೆ ಅವ್ರಿಗೆ ತನ್ನ ದೇಶ ಹಾಗೂ ದೇಶದ ಜನತೆಯ ಮೇಲಿರುವ ಕಾಳಜಿ ತಿಳಿಯುತ್ತದೆ ಹಾಗಾಗಿಯೇ ಜನರು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣ ಮಾಡುವುದನ್ನು ಸಂಪೂರ್ಣ ನಿಷೇದಿಸಿದ್ದಾರೆ , ಹಾಗೂ ಒಂದು ವೇಳೆ ಅನಿವಾರ್ಯತೆ ಇದ್ದಾರೆ ಸಂಬಂಧ ಪಟ್ಟ ಪೋಲೀಸ್ ಅಧಿಕಾರಿಗಳಿಂದ ಅನುಮತಿ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ , ಇಷ್ಟೆಲ್ಲಾ ಕಾನೂನು ಕ್ರಮ ಕೈ ಗೊಂಡರು ಕೆಲವು ಜನ ತಮ್ಮನ್ನು ತಾವೇ ಮರೆತು ಹೊರಗೆ ಬರುತ್ತಿದ್ದರೆ, ಇದಕ್ಕೆ ನಿದರ್ಶನ ವೆಂಬಂತೆ ಬೆಂಗಳೂರಿನ ಎಲ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿರುವ ಹಾಸನ ಜಿಲ್ಲೆಯ ದುಂಡನಾಯಕನ ಹಳ್ಳಿಯ ಮೂಲದ ಶಾಲಿನಿ ಮತ್ತು ಅವರ ಪತಿ ಸಂತೋಷ್ ಎಂಬುವವರು ಬೆಗಳೂರಿನಿಂದ ಯಾವುದೇ ಅನುಮತಿಯನ್ನು ಪಡೆಯದೇ ನೇರವಾಗಿ ಆಲೂರಿನ ಪಕ್ಕದ ಕಾಮತಿ ಕೊಡಿಗೆಗೆ ಬಂದಿರುತ್ತಾರೆ, ಈ ಸಮಯದಲ್ಲಿ ಬೈರಾಪುರ ಚಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲೀಸ್ ಸಿಬ್ಬಂಧಿ ಶ್ರೀಯುತ ಮಹೇಶ್ ರವರಿಗೆ ಅನುಮಾನ ಬಂದು ಈ ದಂಪತಿಗಳನ್ನು ತಡೆದು ವಿಚಾರಿಸಲು ಬೆಂಗಳೂರಿನಿಂದ ಬಂದಿರುವುದಾಗಿ ತಿಳಿದು ಕೊಡಲೇ ತಮ್ಮ ಮೇಲಧಿಕಾರಿಗಳಿಗೆ ವಿಷಯ ತಿಳಿಸಲು ಆಲೂರಿನ ಪೋಲೀಸ್ ಠಾಣೆಯ ಸರ್ಕಲ್ ಇನ್ಸ್ಪಕ್ಟರ್ ಶ್ರೀಯುತ ರೇವಣ್ಣ ರವರು ಮತ್ತು ತಾಲೂಕು ವೈದ್ಯಧಿಕಾರಿಗಳಾದ ಶ್ರೀಯುತ ತಿಮ್ಮಯ್ಯ ರವರು ಅರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಈ ದಂಪತಿಗಳನ್ನು ಪರೀಕ್ಷಿಸಿ ಅವ್ರಿಗೆ ಕೌರೆಂಟೇನ್ ಸೀಲ್ ಹಾಕಿದ್ದು 28 ದಿನಗಳ ಕಾಲ ಮನೆಯಿಂದ ಹೋರಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ ಹಾಗೂ ಕಾನೂನು ಉಲ್ಲ೦ಗನೆ ಮಡಿದ ಕಾರಣ ಇವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ , ಹಾಗೂ ಇದು ಬೇರೆಯವರಿಗೂ ಪಾಠವಾಗಬೇಕು ಎಂದು ತಿಳಿಸಿದ್ದಾರೆ
ಇದು ಮಹಾಪಾಪಿ ಪತ್ರಿಕೆಯ ಸುದ್ದಿಜಾಲ
ತಾಲ್ಲೂಕು ವರದಿಗಾರರು : ಧರಣೇಂದ್ರ
ಯೋಗೇಶ ಬಿ .ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಕರು
ಹಾಸನ ಜಿಲ್ಲೆ

Comments
Post a Comment