ಲಾಕ್ ಡೌನನಲ್ಲೂ ಸಾರ್ವಜನಿಕರಿಗೆ ತೊಂದರೆ ಅಂಚೆ ಇಲಾಖೆಯ ಕಂಠಕ
ಈ ಹಿಂದೆ ಮನುಷ್ಯನ ದುರಾಸೆ ಅತಿಯಾದಾಗ ಅದನ್ನು ಕೊನೆಗಾಣಿಸಲು ದೇವರು ಯಾವುದೊ ಒಂದು ರೀತಿಯಲ್ಲಿ ಸರಿದೊಗಿಸುತ್ತಿದ್ದರು, ಆದರೆ ಈ ಕಲಿಯುಗದಲ್ಲಿ ಮನುಷ್ಯನ ದುರಾಸೆ ಅತಿಯಾದಾಗ ಅದನ್ನು ಕೊನೆಗಾಣಿಸಲು ಪ್ರಕೃತಿಯೇ ತಕ್ಕ ಪಾಠ ಕಲಿಸುತ್ತಿದೆ. ಅದೇ ಈ ಕೊರೊನ ಎಂಬ ಮಹಾಮಾರಿ . ಈ ಮಹಾಮಾರಿ ಇಡೀ ದೇಶವನ್ನೇ ತಲ್ಲಣಗೊಳಿಸುತ್ತಿದೆ. ಜನರು ಮನೆಯಿಂದ ಹೊರಬರಲು ಎದರುತ್ತಿದ್ದರೆ, ಈ ಸಮಯದಲ್ಲಿ ಹಣವಿದ್ದವನು ಹೇಗೋ ಬಚಾವಾಗುತ್ತಾನೆ , ಇಲ್ಲಿ ನಾವು ಯೋಚಿಸಬೇಕಾಗಿರುವುದು ಬಡವನ ಬಗ್ಗೆ ಅದ್ಕಕಾಗಿಯೇ ಸರ್ಕಾರಕ್ಕೆ ಬಾರವಾದರೂ ವಯಸ್ಸಾದವರಿಗೆ ಅಂಗವಿಕಲರಿಗೆ ನೆರೆವಾಗಲಿ ಎಂದು ಋದ್ದಾಪ್ಯ ವೇತನ ಮತ್ತು ಅಂಗವಿಕಲ ವೇತನವನ್ನು ನೀಡಿದೆ . ಆದ್ರೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಇಂದು ನಗರಗಳಿಗೆ ಅಥವಾ ಹತ್ತಿರದ ಅಂಚೆ ಕಚೇರಿಗಳಿಗೆ ಹೋಗಿ ಈ ಹಣವನ್ನು ತೆಗೆದುಕೊಳ್ಳ ಬೇಕಾಗಿದೆ, ಇಂದು ಸಾರಿಗೆ ಸಂಪರ್ಕ ಸಂಪೂರ್ಣವಾಗಿ ನಿಂತಿರುವ ಕಾರಣ ಜನರು ದೊರದ ಊರುಗಳಿಂದ ನೆಡೆದೆ ಬರಬೇಕಾಗಿದೆ ವಯಸ್ಸಾದ ಆ ಬಡ ಜೀವ ಕಷ್ಟ ಪಟ್ಟು ಬಂದರು ಕೊಡ ಸರ್ಕಾರಿ ಸಂಬಳ ತಿಂದು ಹೆಗ್ಗಣಗಳಂತೆ ಕೊಬ್ಬಿರುವ ಕೆಲ ಅಧಿಕಾರಿಗಳು ಅವರನ್ನು ಗೊಂಬೆಗಳಂತೆ ಆಡಿಸುತ್ತಿದ್ದರೆ . ಇದಕ್ಕೆ ನಿದರ್ಶನ ವೆಂಬಂತೆ ಹಾಸನ ಜಿಲ್ಲೆಯ ಆಲೂರಿನ ಅಂಚೆ ಕಚೇರಿಯಲ್ಲಿ ಋದ್ದರು ಅಂಗವಿಕಲರು ತಮ್ಮ ಋದ್ದಾಪ್ಯ ವೇತನವನ್ನು ತೆಗೆದುಕೊಳ್ಳಲು ಹರಸಾಹಸಪಡುವಂತಾಗಿದೆ ಕಾರಣ ಇಲ್ಲಿ ಕರ್ತವ್ಯ ನಿರ್ವಹಿಸುವ ಪೋಸ್ಟ್ ಮಾಸ್ಟರ್ ಗಂಗಾಧರ್ ಪ್ರಭಾವ, ಕಳೆದ ಮೂರು ದಿನಗಳಿಂದ ನಿವೃತ್ತಿ ಹೊಂದಿರುವ ಸರ್ಕಾರಿ ನೌಕರರು , ಅಂಗವಿಕಲರು , ಋದ್ದರು ತಮ್ಮ ಪಿಂಚಿಣಿ ಹಣ ಮತ್ತು ಋದ್ದಾಪ್ಯ ವೇತನ ಪಡೆಯಲು ಅಂಚೆ ಕಚೇರಿಯ ಬಾಗಿಲು ಕಾದು ಹೋಗುವ ಪರಿಸ್ಥಿತಿ ಬಂದೊದಗಿದೆ . ಸಮಯ ಕಳೆದಂತೆ ಬಿಸಿಲ ತಾಪಕ್ಕೆ ನೆಡೆದುಕೊಂಡು ಬರಲಾಗದ ಜನ ಬೆಳಗ್ಗೆ ಬೇಗ ಬಂದು ಸಾಲು ಸಾಲಾಗಿ ಕಾದು ಕುಳಿತು ಇವರು ಹೇಳುವ ವ್ಯರ್ಥ ಕಾರಣಗಳನ್ನು ಕೇಳಿಕೊಂಡು ಹಿಂದಿರುಗುವ ಪರಿಸ್ಥಿತಿ ಬಂದಿದೆ . ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://youtu.be/ljD2pTuzb-Y
ನಮ್ಮ ತಂಡ ಈ ಅಧಿಕಾರಿಗಳನ್ನು ಕೇಳಲು ಹೋದಾಗ ಅಲ್ಲಿ ಕರ್ತವ್ಯ ನಿರ್ವಹಿಸುವ ಗಂಗಾಧರ್ ಎಂಬ ಸಿಬ್ಬಂದಿ ನಮ್ಮ ವರದಿಗಾರರಿಗೆ ಇಲ್ಲ ಸಲ್ಲದ ಕಾರಣಗಳನ್ನು ಹೇಳಿದ್ದು ನೇಟ್ ಕಾರ್ಯ ನಿರ್ವಹಿಸುತ್ತಿಲ್ಲ , ಇವರಾರು ನೆನ್ನೆ ಬಂದವರಲ್ಲ ಎಂದು ಹೇಳಿದ್ದು ಅಲ್ಲದೆ ಅವಾಚ್ಯ ಶಬ್ದ ಗಳಿಂದ ನಿಂದಿಸಿದ್ದು ಅಲ್ಲದೆ ತಹಸೀಲ್ದಾರ್ ರವರನ್ನು ಕರೆಯುವುದಾಗಿ ಬೆದರಿಕೆ ಹಾಕಿದ್ದಾರೆ, ಇಂತಹ ಒಬ್ಬ ನಿರ್ಲಕ್ಷ ಅಧಿಕಾರಿ ಇಲಾಖೆಗೆ ಬೇಕಾ ? ಹಾಗೂ ದೇಶದಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಗಳು ಇರುವಾಗ ಇಂತಹ ನಿರ್ಲಕ್ಷ ಅಧಿಕಾರಿಗಳ ಬದಲಿಗೆ ಗ್ರಾಹಕರ ಸೇವೆಮಾಡಲು ತುದಿಗಾಲಿನಲ್ಲಿ ನಿಂತಿರುವ ಯುವ ಪ್ರತಿಭೆಗಳಿಗೆ ಅವಕಾಶ ನೀಡಬಹುದಲ್ಲವೇ ಎಂಬ ಪ್ರಶ್ನಿ ಸಾರ್ವಜನಿಕರಲ್ಲಿ ಮೂಡಿದೆ ,ಹಾಗಾಗಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಕೊಡಲೆ ಇಂತಹ ಅಧಿಕಾರಿಗಳ ವಿರುದ್ಧ ತುರ್ತು ಕ್ರಮ ಕೈ ಗೊಂಡು ಇವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಪತ್ರಿಕೆ ಕೇಳಿಕೊಳ್ಳುತ್ತದೆ ಹಾಗೂ ಈ ಅಧಿಕಾರಿಯ ವರ್ತನೆಯ ಕುರಿತಾಗಿ ಹಾಸನ ಜಿಲ್ಲೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಿದೆ .

ಇದು ಮಹಾಪಾಪಿ ಪತ್ರಿಕೆಯ ಸುದ್ದಿ ಜಾಲ
ತಾಲೂಕು ವರದಿಗಾರರು : ಧರಣೇಂದ್ರ
ಯೋಗೇಶ ಬಿ.ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು
ಹಾಸನ ಜಿಲ್ಲೆ

Comments
Post a Comment