ಎಲ್ಲೋಯ್ತು ಸಾಮಾಜಿಕ ಅಂತರ ? ಬ್ಯಾಂಕಿನಲ್ಲಿ ಹಣ ಪಡೆಯಲು ಮುಗಿಬಿದ್ದ ಜನತೆ
ಆಲೂರು : ಕೊರೊನ ಎಂಬ ಮಹಾಮಾರಿಯನ್ನು ದೇಶದಿಂದ ಒಡೆದೋಡಿಸಲು ಇಂದು ನಮ್ಮ ಘನ ಸರ್ಕಾರ ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು ಯಾರು ಕೊಡ ಮನೆಯಿಂದ ಹೊರಗಡೆ ಬರದಂತೆ 21ದಿನಗಳ ಕಾಲ ದಿಗ್ಬಂದನ ಹಾಕಿದ್ದರು, ಆದ್ರೂ ಕೊಡ ಮಹಾಮಾರಿ ದಿನೇದಿನೇ ಹೆಚ್ಚುತ್ತಲೇ ಇದೆ, ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸಾರಿ ಸಾರಿ ಹೇಳುತ್ತಿದ್ದರು ಮೊಂಡು ಬಿದ್ದಿರುವ ಈ ಜನರಿಗೆ ಈ ಕಾಯಿಲೆಯ ಭೀಕರತೆ ಅರ್ಥವಾಗುತ್ತಿಲ್ಲ, ಇದನ್ನು ಅರಿತ ಪ್ರಧಾನಿಯವರು ಲಾಕ್ ಡೌನ್ ನನ್ನ ಮೇ 3 ರರ ವೆರೆಗೆ ವಿಸ್ತರಿಸಿದ್ದಾರೆ . ಇಂದಿಗೆ ನಮ್ಮ ರಾಜ್ಯದಲ್ಲಿ 13 ಮಂದಿಯನ್ನು ಬಲಿ ಪಡೆದಿರುವ ಈ ಕಾಯಿಲೆಯ ಕ್ರೂರತೆಯನ್ನು ನೋಡಿದರೆ ಎಂತಹವರಿಗೂ ಬೆಚ್ಚಿಬೀಳಿಸುತ್ತದೆ .ಆದರೆ ಇದನ್ನು ಅರ್ಥಮಾಡಿಕೊಳ್ಳದ ಕೆಲವು ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಮರೆತೇ ಬಿಟ್ಟಿದ್ದಾರೆ ಈ ಕೊರೊನ ಎಂಬುದು ನಮಗಲ್ಲ ಎಂಬ ರೀತಿ ನೆಡೆದುಕೊಳ್ಳುತ್ತಿದ್ದರೆ ಇದಕ್ಕೆ ಉದಾಹರಣೆ ಎಂಬಂತೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯದಲ್ಲಿರುವ ಅಲಹಾಬಾದ್ ಬ್ಯಾಂಕಿನಲ್ಲಿ ಜನರು ವಹಿವಾಟು ನೆಡೆಸಲು ಬ್ಯಾಂಕಿನ ಮುಂದೆ ಮುಗಿ ಬಿದ್ದಿದ್ದ ಘಟನೆ ನೆನ್ನೆ ನೆಡೆದಿದೆ ಸಾಮಾಜಿಕ ಅಂತರದ ಅರಿವೇ ಇಲ್ಲದೆ ನಾ ಮುಂದು ತಾ ಮುಂದು ಎಂಬಂತೆ ಸಾಲುಗಟ್ಟಿ ನಿಂತಿದ್ದರು. ಸರ್ಕಾರವು ರೈತರಿಗೆ ಹಾಕಿರುವ ಹಣವನ್ನು ಪಡೆಯಲು ಮುಂದಾಗಿದ್ದ ಜನರು ಸ್ವತಃ ಬ್ಯಾಂಕಿನ ವ್ಯವಸ್ಥಾಪಕರೇ ಬಂದು ಹೇಳಿದರು ಕೇಳುವ ಪರಿಸ್ಥತಿಯಲ್ಲಿ ಇರಲಿಲ್ಲ. ಇದು ಕೇವಲ ಒಂದು ಬ್ಯಾಂಕಿನ ಸಮಸ್ಯೆ ಅಲ್ಲ ಆದ್ದರಿಂದ ಈ ಕುರಿತಾಗಿ ತಾಲ್ಲೂಕು ಆಡಳಿತ ಗಮನ ಹರಿಸಬೇಕಾಗಿ ಪತ್ರಿಕೆ ಕೇಳಿಕೊಳ್ಳುತ್ತದೆ.
ಇದು ಮಹಾಪಾಪಿ ಪತ್ರಿಕೆಯ ಸುದ್ದಿಜಾಲ
ತಾಲ್ಲೂಕು ವರದಿಗಾರರರು : ಧರಣೇಂದ್ರ
ಯೋಗೇಶ ಬಿ.ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು
ಹಾಸನ ಜಿಲ್ಲೆ

Comments
Post a Comment