ಆಲೂರ್ ಪೊಲೀಸರಿಂದ ಮತ್ತೊಂದು ಬೇಟೆ, ಸ್ಯಾಂಡ್ ಮಾಫಿಯಾ ಭೇದಿಸಿದ ಪೊಲೀಸರು, ಉಸುಗು ಕಳ್ಳರ ರೈಡ್ ಹ್ಯಾಂಡ್ ಅಂದರ್
ಆಲೂರು ಪೊಲೀಸರಿಂದ ಮತ್ತೊಂದು ಬೇಟೆ, ಸ್ಯಾಂಡ್ ಮಾಫಿಯಾ ಭೇದಿಸಿದ ಪೊಲೀಸರು, ಉಸುಗು ಕಳ್ಳರು ರೆಡ್ ಹ್ಯಾಂಡ್ ಅಂದರ್
ಆಲೂರು : ಹಾಸನ ಜಿಲ್ಲೆ ಆಲೂರ್ ಪೊಲೀಸರು ಮತ್ತೊಂದು ಮೆಚ್ಚುಗೆಯ ಕೆಲಸ ಮಾಡಿದ್ದಾರೆ ಅದೇನಾಪ್ಪ ಅಂದ್ರೆ ಉಸುಗು ಕಳ್ಳರನ್ನು ಅಂದರ್ ಮಾಡಿದ್ದು. ರಾಜ್ಯವೇ ಲಾಕ್ಡೌನ್ ಇದೆ ಪ್ರತಿಯೊಬ್ಬರೂ ಪ್ರಾಣಭಯದಿಂದ ತತ್ತರಿಸುತ್ತಿದ್ದಾರೆ ಆದರೂ ಕಳ್ಳರು ತಮ್ಮ ಕಳ್ಳತನವನ್ನು ಮುಂದುವರೆಸಿದ್ದಾರೆ.
ಕಳ್ಳರಲ್ಲಿ ಮಹಾಕಳ್ಳರೆಂದರೆ ಉಸುಗು ಕಳ್ಳರು, ಇದರಲ್ಲಿ ಇರೋರೆಲ್ಲ ಸಣ್ಣ ಕಳ್ಳರಲ್ಲ. ಸೇರಿಕೊಂಡಿದ್ದು ಮಹಾಕಳ್ಳರು ಈ ಕಳ್ಳರ ಸಾಲಿನಲ್ಲಿ ಸರಕಾರೀ ಕಳ್ಳರೂ ಸೇರಿಕೊಂಡಿರುವುದು ನಾಚಿಕೆಗೇಡು ಸರಕಾರಿ ಕಳ್ಳರು ರಾಜ್ಯದ ಇಂತಹ ಉಸುಗು ಕಳ್ಳತನದಲ್ಲಿ ಶಾಮೀಲಾಗಿದ್ದಾರೆ ಅನ್ನೋಕೆ ಈ ಹಿಂದೆ ಗದಗ ಭೂ ವಿಜ್ಞಾನಿ ಉಸುಗು ಕಳ್ಳ ಸಾಗಾಣಿಕೆ ಮಾಡಿದ್ದು ಮಹಾಸುದ್ದಿ ಸಾಕ್ಷಿಸಮೇತ ಬಯಲು ಮಾಡಿತು.ಆದರೆ ಹಾಸನ ಜಿಲ್ಲೆಯ ಪೊಲೀಸರು ಇಂದು ಉಸುಗು ಕಳ್ಳರನ್ನು ಭಂದಿಸಿ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಇದು ನಿಜವಾಗಿಯೂ ಪೋಲಿಯರಿಗೆ ಮಹಾಸುದ್ದಿ ಧನ್ಯವಾದಗಳನ್ನು ಸಲ್ಲಿಸುತ್ತದೆ.ದಿನಾಂಕ ೨೩/೦೪/೨೦೨೦ ಹಾಸನ ಜಿಲ್ಲೆಯ ಆಲೂರಿನ ಪಿ. ಎಸ್. ಐ ಶ್ರೀ ಆರ್ ಸತ್ಯನಾರಾಯಣ ಹಾಗೂ ಸಿಬ್ಬಂದಿಗಳಾದ ಚಾಲಕ ಶ್ರೀ ಮಂಜುನಾಥ್, ಪಿ ಸಿ ಶ್ರೀ ಮಧು, ಶ್ರೀ ಸುರೇಶ, ಇವರೊಂದಿಗೆ ಕೋವಿಡ್ -19 ಪ್ರಯುಕ್ತ ರೌಂಡ್ಸ್ ನಲ್ಲಿರುವಾಗ ಬೆಳಮೆ ಗ್ರಾಮದ ಪಾಪಣ್ಣ ರವರ ಹೊಲದಲ್ಲಿ ಟ್ರ್ಯಾಕ್ಟರ್ ಮತ್ತು ಟ್ರೆಲ್ಲೆರ್ ನಲ್ಲಿ ಉಸುಗು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ. ರೈಡ್ ಮಾಡಿದಾಗ ಕಳ್ಳರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆದರೆ ಟ್ರ್ಯಾಕ್ಟರ್ ಚಾಲಕ ತಪ್ಪಿಸಿಕೊಂಡು ಓಡಿ ಹೋಗಿದ್ದು ಪೊಲೀಸರು ಟ್ರ್ಯಾಕ್ಟರ್ ಕೆ ಈ ೪೬ ಟಿ ೫೯೩೭ ಮತ್ತು ಟ್ರಲ್ಲೆರ್ ಕೆ .ಈ ೪೬ ಟಿ ೫೯೩೮ ಅನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ಧಾಖಲಿಸಿದ್ದಾರೆ. ತಪ್ಪಿಸಿಕೊಂಡು ಓಡಿಹೋಗಿದ್ದ ಚಾಲಕನನ್ನು ಪೊಲೀಸರು ಹುಡುಕುತ್ತಿದ್ದು ಚಾಲಕನ ವಿವರ ಹೆಸರು ಜಗದೀಶ್ ಬಿನ್ ಭೈರಯ್ಯ, ವಯಸ್ಸು ೫೭, ಪ ಜಾ, ಬೇಲಮೆ ಗ್ರಾಮ, ಪಾಳ್ಯ ಹೋಬಳಿ, ಆಲೂರು ತಾಲ್ಲೂಕು ಎಂದು ಗೊತ್ತಾಗಿದ್ದುಇವರ ಮಾಹಿತಿ ಸಿಕ್ಕರೆ ಹತ್ತಿರದ ಪೋಲಿಸ್ ಠಾಣೆಗೆ ಇಳಿಸಲು ಸಾರ್ವಜನಿಕರಿಗೆ ಮಹಾಸುದ್ದಿ ಪ್ರಕಟಿಸಿದೆ.
ಇದು ಮಹಾ ಸುದ್ದಿಯ ಸುದ್ದಿಜಾಲ
ತಾಲೂಕು ವರದಿಗಾರರು : ಧರಣೇಂದ್ರ
ಯೋಗೇಶ ಬಿ ಜೆ
ರಾಜ್ಯ ಮುಖ್ಯ ಕಾರ್ಯ ನಿರ್ವಾಹಕರು. ಮಹಾ ಪಾಪಿ ಪತ್ರಿಕೆ
ಮತ್ತು
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು. ಮಹಾ ಪಾಪಿ ಪತ್ರಿಕೆ
ಹಾಸನ ಜಿಲ್ಲೆ


Comments
Post a Comment