ಹೊಳೆನರಸೀಪುರ ತಾಲೂಕು ಆಡಳಿತದಿಂದ ಅನಧೀಕೃತವಾಗಿ ಖನಿಜ ಸಾಗಾಣಿಕೆ/ಗಣಿಗಾರಿಕೆ ಮಾಡುತ್ತಿದ್ದ ವಾಹನಗಳ ವಿರುದ್ಧ ಬಾರಿ ದಂಡ
ಹೊಳೆನರಸೀಪುರ ತಾಲೂಕು ಆಡಳಿತದಿಂದ ಅನಧೀಕೃತವಾಗಿ ಖನಿಜ ಸಾಗಾಣಿಕೆ/ಗಣಿಗಾರಿಕೆ ಮಾಡುತ್ತಿದ್ದ ವಾಹನಗಳ ವಿರುದ್ಧ ಬಾರಿ ದಂಡ
ಹೊಳೆನರಸೀಪುರ: ಹೋಗಿದ್ದು ಹೋಯ್ತು ನಮ್ಮ ಶಾನಭೋಗನಿಗೇನು? ಎಂಬಂತೆ ಆಯ್ತು ಇವರ ಕೆಲಸ ಇಂದು ದೇಶವೇ ಕೊರೊನ ಭೀತಿಯಲ್ಲಿ ನಡುಗುತ್ತಿರುವಾಗ ಜನರು ಮನೆಯಲ್ಲಿ ಇರಲು ಲಾಕ್ ಡೌನ್ ಮಾಡಿ 144 ಸೆಕ್ಷನ್ ಜಾರಿ ಮಾಡಿದ್ದು ಕಳೆದ ತಿಂಗಳಿನಿಂದ ಜನರು ಜೀವನ ನೆಡೆಸಲು ಕಷ್ಟ ಪಡುತ್ತಿದ್ದು ಸದ್ಯ ಜೀವ ಉಳಿದರೆ ಸಾಕು ಎಂಬಂತಾಗಿದೆ, ಆದರೆ ಇಲ್ಲಿ ನೋಡಿ ಈ ಸಮಯವನ್ನೇ ಉಪಯೋಗಿಸಿಕೊಂಡ ಕೆಲವು ದಂದೆ ಕೋರರು ಹಣ ಮಾಡುವ ಆಸೆಯಿಂದ ಮಾಡಬಾರದ್ದ ಕೆಲಸ ಮಾಡುತ್ತಿದ್ದಾರೆ, ಅದರಲ್ಲಿ ಅನಧೀಕೃತವಾಗಿ ಖನಿಜ ಸಾಗಾಣಿಕೆ/ಗಣಿಗಾರಿಕೆಮಾಡುತ್ತಿದ್ದಾರೆ . ಇಂತಹ ಘಟನೆ ಕಳೆದ 20/04/2020 ರಂದು ನೆಡೆದಿದೆ , ಅಂದರೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಸಬಾ ಹೋಬಳಿ ಮೂಡಲಹಿಪ್ಪೆ ಗ್ರಾಮದ ಹೇಮಾವತಿ ನದಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದ 1ಜೆ ಸಿ ಬಿ ಮತ್ತು 2 ಟ್ರಾಕ್ಟರ್ ಗಳನ್ನು ಹೊಳೆನರಸೀಪುರ ತಾಲ್ಲೂಕು ತಹಸೀಲ್ದಾರ್ ಕೆ ಆರ್ ಶ್ರೀನಿವಾಸ್ ನೇತೃತ್ವದ ತಂಡ ಸೆರೆಹಿಡಿದಿದೆ
ಘಟನೆಯ ವಿವರ : ಕಳೆದ ತಾರೀಕು 20ರಂದು ಖಚಿತವಾಗಿ ಮಾಹಿತಿ ಪಡೆದ ತಹಸೀಲ್ದಾರ್ ಕೆ. ಆರ್ ಶ್ರೀನಿವಾಸ್ ನೇತೃತ್ವದ ತಂಡ ನದಿಯಲ್ಲಿ ಅಕ್ರಮವಾಗಿ ಮರಳುತೆಗೆಯುತ್ತಿದ್ದ 1 ಜೆ ಸಿ ಬಿ ಹಾಗೂ ಹಾಗೂ 2ಟ್ರಾಕ್ಟರ್ ಗಳನ್ನು, ಹಳೇಕೋಟೆ ಹೋಬಳಿ ಗುಳಿಸತೇನಹಳ್ಳಿ ಗ್ರಾಮದಲ್ಲಿ ಮರಳುತೆಗೆಯುತ್ತಿದ್ದ 2 ಜೆ ಸಿ ಬಿ 4 ಟ್ರಾಕ್ಟರ್ ಗಳನ್ನು ವಶಪಡಿಸಿಕೊಂಡಿದ್ದು ದಿನಾಂಕ 23/04/2020 ರಂದು 6 ಟ್ರಾಕ್ಟರ್ ಗಳಿಗೆ ತಲಾ 20,೦೦೦ ಸಾವಿರ ರೂಗಳಂತೆ ಮತ್ತು ಗೆ ಸಿ ಬಿ ಗಳಿಗೆ ತಲಾ 6೦,೦೦೦ ಸಾವಿರಗಳಂತೆ ದಂಡ ವಿಧಿಸಲಾಗಿದೆ.
ಈ ಕುರಿತಾಗಿ ತಾಲೂಕಿನಲ್ಲಿ ಯಾರಾದರೋ ಅಕ್ರಮ ಮರಳು ಸಾಗಾಣಿಕೆ ಮಾಡಿದರೆ ಗಣಿ ಭೂ ವಿಜ್ಞಾನ ಇಲಾಖೆಯ ನಿಯಮದಂತೆ ದಾವೆ ಹೊಡಿ ಜೈಲಿಗೆ ಹಳಿಸಿವಂತಹ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ ಕೆ ಆರ್ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ ಇದನ್ನು ದಂದೆ ಕೋರರು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ ,
ಇದು ಮಹಾಪಾಪಿಯ ಸುದ್ದಿಜಾಲ
ತಾಲೂಕು ವರದಿಗಾರರು : ಮೋಹನ್ ಕುಮಾರ್
ಯೋಗೇಶ ಬಿ ಜೆ
ಯೋಗೇಶ ಬಿ ಜೆ
ರಾಜ್ಯ ಮುಖ್ಯ ಕಾರ್ಯ ನಿರ್ವಾಹಕರು. ಮಹಾ ಪಾಪಿ ಪತ್ರಿಕೆ
ಮತ್ತು
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು. ಮಹಾ ಪಾಪಿ ಪತ್ರಿಕೆ
ಹಾಸನ ಜಿಲ್ಲೆ



Comments
Post a Comment