ಹಾಸನ ಅಬಕಾರಿ ಅಧಿಕಾರಿಗಳಿಂದ ಕ್ಷಿಪ್ರ ಕಾರ್ಯಾಚರಣೆ 22 ಬಾರ್ ಗಳ ಲೆಸೆನ್ಸ್ ಸಸ್ಪೆನ್ಡ್


ಕೊರೊನ ಮಹಾಮಾರಿಯ ಅಬ್ಬರದಿಂದ ದೇಶವೇ ನಡುಗಿಹೋಗಿದ್ದು ಕಳೆದ ಒಂದು ತಿಂಗಳಿನಿಂದ ಇಡೀ ದೇಶವೇ ಲಾಕ್ ಡೌನ್   ಆಗಿದೆ . ಈ ಮಧ್ಯದಲ್ಲಿ ಬಾರ್ ಗಳನ್ನೂ ಸಹ ತೆರೆಯದಂತೆ ತಾಕೀತು ಮಾಡಿದ್ದರು ಸಹ ಹಣ ಮಾಡುವ ದುರಾಸೆಯಿಂದ ಬಾರ್ ಮಾಲೀಕರು ಕದ್ದು  ಮದ್ಯ ಮಾರಾಟ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ , ಈಗಾಗಲೇ ಬೆಂಗಳೂರಿನಲ್ಲಿ ಟೀ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಘಟನೆಗಳು  ಜರುಗಿವೆ, ಇವುಗಳಿಗೆ ದಾಸ್ತಾನುಗಳು ಎಲ್ಲಿಂದ ಸಿಗುತ್ತಿವೆ ಎಂಬ ಮಾಹಿತಿ ಕಲೆಹಾಕುತ್ತ ಹೋದಾಗ ಬೆಳಕಿಗೆ ಬಂದಿದ್ದು ಈ ಬಾರ್  ಗಳು ಇವರಿಂದ ಖರೀದಿ ಮಾಡುವ ಮಧ್ಯವರ್ತಿಗಳು ಅದನ್ನು ಒಂದಕ್ಕೆ ಎರಡು ಪಟ್ಟು  ಮಾರಾಟ ಮಾಡುತ್ತಿದ್ದಾರೆ , ಇದಕ್ಕೆ ಹಾಸನ ಜಿಲ್ಲೆಯು ಸೇರಿಕೊಂಡಿದೆ ಈ ಹಿಂದೆ ನಮ್ಮ ಪತ್ರಿಕೆಯಲ್ಲಿ ಈ ಕುರಿತಾಗಿ ಕೊರೊನ ಮದ್ಯೆ ಕೌಟರ್ ದಂದೆ ಎಂಬ ಶೀರ್ಷಿಕೆಯ ಅಡಿಯಲ್ಲಿ ಸುದ್ದಿ ಪ್ರಸಾರ ಮಾಡಿದ್ದೆವು , ಇದರ ಪರಿಣಾಮ ಹಾಸನ ಜಿಲ್ಲೆಯ ಅಬಕಾರಿ ಉಪಯುಕ್ತರಾದ ಶ್ರೀಯುತ ಗೋಪಾಲ ಕೃಷ್ಣ ರವರ ನೇತೃತ್ವದ ತಂಡ ಜಿಲ್ಲಾದ್ಯಂತ 22 ಬಾರ್ ಗಳ  ಮೇಲೆ ದಾಳಿ ನೆಡೆಸಿ ಅದ್ರ ಲೆಸೆನ್ಸ್ ಸಸ್ಪೆನ್ಡ್ ಮಾಡಿದ್ದಾರೆ.  ಇಂತಹ ಒಂದು ಸಮಯದಲ್ಲಿ ಸಂಕಷ್ಟದಲ್ಲಿರುವ ಸಂಸಾರಗಳು ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಈ ಕುಡಿತದ ಚಟ ಇರುವ ಜನ ಜೀವನ ಇನ್ನೋಷ್ಟು ಕಷ್ಟದಾಯಕ ವಾಗುತ್ತದೆ . ಇದನ್ನು ಆರಿತಿರುವ ಅಧಿಕಾರಿಗಳ ಕಾರ್ಯ ದಕ್ಷತೆಗೆ ಪತ್ರಿಕೆಯ ಕಡೆಯಿಂದ ಅಭಿನಂದನೆ ಸಲ್ಲಿಸುತ್ತದೆ ಹಾಗೂ ಇಂತಹ ಕಾರ್ಯ ತಮ್ಮ ತಂಡದಿಂದ ಮುಂದುವರಿಯಲಿ ಎಂಬುದೇ ಪತ್ರಿಕೆಯ ಆಶಯ ಜಿಲ್ಲಾವರು ಲೆಸೆನ್ಸ್ ಸಸ್ಪೆನ್ಡ್ ಆಗಿರುವ  ಬಾರ್ ವಿವರ 



ಇದು ಮಹಾಪಾಯಿಯ ಸುದ್ದಿಜಾಲ 

ವರದಿಗಾರರು : ಗಿರೀಶ 














ಯೋಗೇಶ ಬಿ. ಜೆ 
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು 
ಹಾಸನ ಜಿಲ್ಲೆ 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ