ಕುಡುಕರ ಪರಿತಾಪ ಬಾರ್ ಗೆ ಬಿತ್ತು ಕನ್ನ

ಕೊರೊನ ದಿಂದಾಗಿ ಇಂದು ಇಡೀ ದೇಶವೇ ಲಾಕ್ ಡೌನ್  ಆಗಿದೆ ಕಳೆದ  ಒಂದು  ತಿಂಗಳಿನಿಂದ ಮಧ್ಯ ಮಾರಾಟವನ್ನು  ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಕುಡಿತದ ಚಟಕ್ಕೆ ಬಲಿಯಾದವರ ಗೋಳು ಹೇಳತೀರದಾಗಿದೆ ದಿನ ಪೂರ್ತಿ ದುಡಿದು ಬಂದ ಹಣವನ್ನು  ಸಾರಾಯಿ ಅಂಗಡಿಗೆ ಕಟ್ಟಿ ಹೋಗುತಿದ್ದ  ಜನ ಇಂದು  ಎಣ್ಣೆ ಇಲ್ಲದೆ ಪರದಾಡುತ್ತಿದ್ದಾರೆ , ಇಷ್ಟು ದಿನ ತಮ್ಮ  ಕೈ ಯಲ್ಲಿ ಇದ್ದ ಹಣದಿಂದ ಒಂದಕ್ಕೆ ಎರಡಷ್ಟು  ಹಣನೀಡಿ ಎಣ್ಣೆ ಖರೀದಿಸಿ ಆಗಿತ್ತು ಈಗ ಅವರ ತಾಪ  ಕಡಿಮೆಯಾಗಿಲ್ಲ , ಒಂದು ಬಾಟಲಿ  ಖರೀದಿಗೆ ಯೋಚಿಸುತ್ತಿದ್ದ ಕುಡುಕರು ಈಗ ಬಾರ್ ಗೆ ಕನ್ನ ಹಾಕುವ ದಾರಿ ಕಂಡುಕೊಂಡಿದ್ದಾರೆ ,  ಇದರ ಫಲವೇ ಇಂದು ಹೆಚ್ಚುತ್ತಿರುವ ಬಾರ್ ಕಳ್ಳತನ ಪ್ರಕರಣ ,ಕಳ್ಳಬಟ್ಟಿ ಪ್ರಕರಣಗಳು,ಇಲ್ಲಿ ನೋಡಿ ಇದ್ಕಕೆ ನಿದರ್ಶನ ಎಂಬಂತೆ ಹಾಸನದ ಹೊರವಲಯದಲ್ಲಿರುವ ಬೋವನಹಳ್ಳಿಯಲ್ಲಿರುವ ಶ್ರೀಮತಿ ಸುಕನ್ಯಾ ರವರಿಗೆ ಸೇರಿರುವ ಧನಲಕ್ಷ್ಮಿ ವೈನ್ಸ್   ರೋಲಿಂಗ್ ಸೇಟರ್ ಮುರುದು ಕಳ್ಳತನ ಮಾಡಿದ್ದಾರೆ  , ಕದಿಯಲು ಬಂದ ಕುಡುಕರು ಎಣ್ಣೆ ಸಿಕ್ಕ ಖುಷಿಯಲ್ಲಿ ತಾವು ಮುರಿದ ರೋಲಿಂಗ್ ಸೇಟರ್ ಬಗ್ಗೆಯು ತಲೆಕೆಡಿಕೊಳ್ಳದೆ ಹೋಡಿಹೋಗಿದ್ದರೆ , ಘಟನೆ ನೆಡೆದ ಸ್ಥಳಕ್ಕೆ ಬಡಾವಣೆಯ ಪೋಲೀಸರು ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನೆಡೆಸಿದ್ದಾರೆ,

                                       ಜಾಹೀರಾತು 





ಇದು ಮಹಾಪಾಪಿಯ ಸುದ್ದಿಜಾಲ 

ವರದಿಗಾರರು : ಎಂ. ಆರ್  ಲೋಕೇಶ್ , (ಹಾಸನ ಜಿಲ್ಲಾ ವರದಿಗಾರರು )

ಯೋಗೇಶ ಬಿ. ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು 
ಹಾಸನ ಜಿಲ್ಲೆ  

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ