ಬಯೋ ಮೆಂಟೆನೆಸ್ ಗೊತ್ತಿಲ್ವಾ ವೈದ್ಯರಿಗೆ

                         ಏನಿದು ರಹಸ್ಯ ಆರೋಗ್ಯ ಮಂತ್ರಿಗಳೇ ಸ್ವಲ್ಪ ವಿಚಾರಿಸಿ



ಅರಕಲಗೂಡು : ಇಂದು ದೇಶ ಸಂಕಟದಲ್ಲಿ ನರಳುತ್ತಿರುವಾಗ ಕೊರೊನದಿಂದ ನರಳುತ್ತಿರುವ ರೋಗಿಗಳಿಗೆ ಔಷದೋಪಚಾರ ಮಾಡಲು ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡುತ್ತಿದೆ, ಸರ್ಕಾರಿ ಆಸ್ಪತ್ರೆಗಳಿಗೆ  ಔಷದಿಗಳನ್ನು ಸರಿಯಾದ ಸಮಯದಲ್ಲಿ ತಲುಪಿಸಲು   ಪರದಾಡುತ್ತಿದೆ , ಇಂತಹ ಸಮಯದಲ್ಲಿ ಒಂದು ಗ್ಲೋಕೋಸ್ ಬಾಟಲ್ ಕೊಡ ಒಬ್ಬ ವ್ಯಕ್ತಿಯ ಜೀವ ಉಳಿಸುವ ಸಂಜಿವೀನಿ ಆಗಿದೆ, ಆದ್ರೆ ಕೆಲವು ಆಸ್ಪತ್ರೆ ವ್ಯೆದ್ಯರ & ಸಿಬ್ಬಂದಿಗಳ ನಿರ್ಲಕ್ಷದಿಂದಾಗಿ ಇಂತಹ ವಸ್ತುಗಳು ನಾಶವಾಗಿವೆ. ಇಂತಹ ಒಂದು ಘಟನೆ  ಹಾಸನ ಜಿಲ್ಲೆಯ ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ನೆಡೆದಿದೆ.ಗ್ಲೋಕೋಸ್ ನಾಶಮಾಡಿರುವ ಫೋಟೋಗಳು ಸಾಮಾಜಿಕ  ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಕುರಿತಾಗಿ ವಿಚಾರಿಸಲು ನಮ್ಮ ತಂಡ ಆಸ್ಪತ್ರೆಗೆ ಭೇಟಿ ನೀಡಿದಾಗ  ಸಿಬ್ಬಂದಿ ಸರಿಯಾದ ಪ್ರತಿಕ್ರಿಯೆ ನೀಡಿರುವುದಿಲ್ಲ, ಗ್ಲೋಕೋಸ್ ಬಾಟಲಿಗಳನ್ನು ನಾಶಮಾಡಿರುವ ಆ ಕೊಠಡಿಯನ್ನು ತೋರಿಸುವಂತೆ ಕೇಳಿದರು ಯಾರುಕೊಡ ಕೊಠಡಿ ತೋರಿಸುವ ಕೆಲಸ ಮಾಡಿಲ್ಲ ,ಈ ಕುರಿತಾಗಿ ಅರಕಲಗೂಡು ತಾಲೂಕು ವೈದ್ಯಾಧಿಕಾರಿಗಳನ್ನು ವಿಚಾರಿಸಿದರೆ ಇದು ನನ್ನ ಮಿತಿಯಲ್ಲಿ ಬರುವುದಿಲ್ಲ ಹಾಗಾಗಿ ಆಸ್ಪತ್ರೆಯ ಆಡಳಿತಾಧಿಕಾರಿಗಳನ್ನು ವಿಚಾರಿಸುವಂತೆ ಹೇಳಿದ್ದಾರೆ ,ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಗಳು ಇಲ್ಲದ ಕಾರಣ ಸಹ  ಆಡಳಿತ ಅಧಿಕಾರಿಗಳನ್ನು ವಿಚಾರಿಸಿದರೆ ಇದು ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ , ಮತ್ತು ಆ ಆಸ್ಪತ್ರೆ ಇಂದಲ್ಲೇ ಹಾಸನ ಜಿಲ್ಲಾ ಆರೋಗ್ಯಧಿಕಾರಿಗಳಿಗೆ ನಮ್ಮ ತಂಡ ದೊರವಾಣಿ ಕರೆಮಾಡಿ ವಿಷಯ ತಿಳಿಸಲು  ಆಡಳಿತ ಸಹ ಅಧಿಕಾರಿಗಳು ನಾವು  ತೋರಿಸಲು ನಮಗೆ ಸೂಚನೆ ನೀಡಿಲ್ಲ ಎಂದು ತಿಳಿಸಿರುತ್ತಾರೆ , ಅಲ್ಲಿಗೆ ಇವರ ನಿರ್ಲಕ್ಷ ಮತ್ತು ಇದರ ಒಳ ಮರ್ಮ ಏನೆಂದು ತಿಳಿಯಬೇಕಾಗಿದೆ . ಹಾಗಾಗಿ ಇಲಾಖೆಯ ಮೇಲಾಧಿಕಾರಿಗಳು ಈ ಅಧಿಕಾರಿಗಳ ವಿರುದ್ಧ ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ತೆಗೆದುಕೊಳ್ಳಬೇಕೆಂದು ಪತ್ರಿಕೆ ಈ ಮೂಲಕ ಒತ್ತಾಯಿಸುತ್ತದೆ ಹಾಗೂ  ಈ ಕುರಿತಾಗಿ ತನಿಖೆ ನೆಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಮ್ಮ ತಂಡ ಹಾಸನ ಜಿಲ್ಲಾ ಆರೋಗ್ಯಧಿಕಾರಿಗಳಿಗೂ ಮತ್ತು ಜಿಲ್ಲಾದಿಕಾರಿಗಳಿಗೂ ಪತ್ರ ಬರೆಯಲಿದೆ .


ಇದು ಮಹಾಪಾಪಿ ಪತ್ರಿಕೆ ಸುದ್ದಿ ಜಾಲ 

ತಾಲ್ಲೂಕು ವರದಿಗಾರರು :ಅಕ್ಮಲ್  ಪಾಷ 

ಯೋಗೇಶ ಬಿ ಜೆ 
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು 
ಹಾಸನ ಜಿಲ್ಲೆ 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ