ಕೊರೊನ ಭೀತಿಯಲ್ಲೂ ಕಾಳಸಂತೆಯಲ್ಲಿ ಕೋಳಿ ಮಾರಾಟ ದಂದೆ
ಕೊರೊನ ಎಂಬ ಮಹಾಮಾರಿಯ ಭೀತಿಯಲ್ಲಿ ದೇಶವೇ ನರಳುತ್ತಿರುವಾಗ ಜನರು ಮನೆಯಿಂದಲ್ಲೇ ಹೊರಗಡೆ ಬರಕೊಡದು ಎಂದು ಮಾಧ್ಯಮಗಳಲ್ಲಿ ತಿಳುವಳಿಕೆ ನೀಡುತ್ತಿದ್ದು. ಈ ಮಾರಿ ಯಾವ ರೂಪದಲ್ಲಿ ಹೇಗೆ ಬರುತ್ತಿದೆ ಎಂದು ಕಂಡು ಹಿಡಿಯಲು ದೇಶವೇ ತಲೆಕೆಡೆಸಿಕೊಂಡಿರುವಾಗ, ಯಾರಿಗೆ ಏನಾದರೆ ನನಗೇನು , ಎಂಬಂತೆ ಕಾಳಸಂತೆ ಕೋರರು ತಮ್ಮ ಕೈ ಚಳಕವನ್ನು ತೋರಿಸುತ್ತಿದ್ದಾರೆ
ಇದಕ್ಕೆ ನಾವೇನು ಕಡಿಮೆ ಇಲ್ಲವೆಂಬಂತೆ ಕೋಳಿಫಾರಂ ಗಳು ಮುಗಿಬಿದ್ದಿವೆ, ಹಾಸನ ಜಿಲ್ಲೆಯಲ್ಲಿ ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಕೋಳಿ ಅಂಗಡಿಗಳನ್ನು ತೆರೆಯಲು ಅವಕಾಶ ಇಲ್ಲದಿರುವುದನ್ನು ಮನಗೊಂಡ ಕೆಲವು ಕೋಳಿಫಾರಂ ಮಾಲೀಕರು ಕಾಳಸಂತೆಯಲ್ಲಿ ತಮಗೆ ಇಷ್ಟ ಬಂದ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ , ಹಾಸನದ ಬೇಲೂರು ರಸ್ತೆಯಲ್ಲಿರುವ ಹೂಲಳ್ಳಿ ಕಾವಲು ನಲ್ಲಿರುವ ಕೋಳಿ ಫಾರಂನಲ್ಲಿ ಒಂದು ಕೋಳಿಗೆ 500 ರೂ ಗಳನ್ನು ತೆಗೆದುಕೊಂಡು ಮಾರಾಟ ಮಾಡುತ್ತಿದ್ದ ದೃಶ ನೆನ್ನೆ ಕಂಡುಬಂದಿದೆ, ಯಾವುದೇ ತೊಕ ಮಾಡದೆ ಹೀಗೆ ಮಾರಾಟ ಮಾಡುವುದು ಜನರನ್ನು ಸುಲಿಗೆ ಮಾಡುತ್ತಿರುವುದಕ್ಕೆ ಸಾಕ್ಷಿ ಆಗಿದೆ . ಈ ಕುರಿತಾಗಿ ಹಾಸನ ಜಿಲ್ಲಾಡಳಿತ ಕೊಡಲೇ ಈ ಫಾರಂ ನ ಮಾಲೀಕರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಂಡು ಇಂಥ ಉಳಿದ ಬೇರೆ ಕೋಳಿಫಾರಂ ಮಾಲೀಕರು ಈ ರೀತಿ ಕಾಳಸಂತೆ ಮಾರಾಟಮಾಡುವುದನ್ನು ತಡೆಯಬೇಕು ಎಂದು ಪತ್ರಿಕೆ ಒತ್ತಾಯಿಸುತ್ತದೆ . ಪತ್ರಿಕೆ ಈ ಕುರಿತಾಗೆ ಹಾಸನ ಜಿಲ್ಲಾದಿಕಾರಿಗಳ ಗಮನಕ್ಕೂ ತರಲಿದೆ.
ಇದು ಮಹಾಸುದ್ದಿಯ ಸುದ್ದಿ ಜಾಲ
ಯೋಗೇಶ ಬಿ ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕ
ಹಾಸನ ಜಿಲ್ಲೆ
Comments
Post a Comment