Posts

ನೇಣಿಗೆ ಶರಣಾದ ಶ್ರೀ ಶಂಬುಲಿಂಗ ಶಿವಾಚಾರ್ಯ ಸ್ವಾಮಿಗಳು

Image
  ಆಲೂರು : ಬಾಳೆಹೊನ್ನೂರು ರಂಭಾಪುರಿ ಶಾಖಾಮಠದ ಸ್ವಾಮೀಜಿಯೋರ್ವರ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ                    ತಾಲೂಕಿನ ಕಾರ್ಜುವಳ್ಳಿ ಮಠದ ಶ್ರೀ  ಶಂಬುಲಿಂಗ ಶಿವಾಚಾರ್ಯ  ಸ್ವಾಮಿ(50) ಮೃತಪಟ್ಟಿರುವವರು. ಕಳೆದ ಮಂಗಳವಾರ ರಾತ್ರಿ ಮಠದ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ . ಬುದುವಾರ ಬೆಳಗ್ಗೆ ಕೋಣೆಯತ್ತ ತೆರಳಿದ ವ್ಯಕ್ತಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ  ವಿಷಯ ತಿಳಿದ ಆಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ತನಿಖೆ ಕೈ ಗೊಂಡಿದ್ದಾರೆ ಶ್ರೀ ಗಳ ನಿಧನದಿಂದ ಸುತ್ತಲಿನ ಗ್ರಾಮದ ಭಕ್ತರಿಗೆ ತುಂಬಲಾದರ ನಷ್ಟವಾಗಿದೆ .  ಇದು ಮಹಾಪಾಪಿಯ ಸುದ್ದಿ ಜಾಲ 

ಭಾವ ಪೂರ್ಣ ಶ್ರದ್ಧಾ೦ಜಲಿ

Image
           

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ

ಹೊಳೆನರಸೀಪುರ: ದೇಶಕ್ಕೆ ಪ್ರಣಾರ್ಪಣೆ ಮಾಡಿ ಹುತಾತ್ಮರಾದ ಕಾರ್ಗಿಲ್ ವೀರ ಯೋಧರ ಸವಿ ನೆನಪಿಗಾಗಿ ಆಚರಿಸಿದ ಕಾರ್ಗಿಲ್ ವಿಜಯೋತ್ಸವಕ್ಕೆ ಹೊಳೆನರಸೀಪುರದ ಸುಭಾಷ್ ಚೌಕ ಇಂದು ಸಾಕ್ಷಿಯಾಯಿತು, ಪಟ್ಟಣದ ನಿವೃತ್ತ ಯೋಧರು, ದೇಶಾಭಿಮಾನಿಗಳು, ದೇಶ ಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದ ಈ ಸರಳ ಸಮಾರಂಭದಲ್ಲಿ ವೀರ ಯೋಧರ ಭಾವ ಚಿತ್ರಕ್ಕೆ ನಿವೃತ್ತ ಯೋಧರುಗಳಾದ ಮಂಜುನಾಥ್,ಮಂಜೇ ಗೌಡ,ಈಶ್ವರ,ವಸಂತ್ ಕುಮಾರ್ ಅಶೋಕ್,ಶಿವಣ್ಣ ರವರು ಜ್ಯೋತಿಯನ್ನು ಬೆಳಗುವುದರ ಮೂಲಕ ಚಲನೆಯನ್ನು ನೀಡಿದರು. ನಂತರ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ವೀರ ಯೋಧರ ತ್ಯಾಗ ಬಲಿದಾನವನ್ನು ಮುಕ್ತ ಕಂಠದಿಂದ ಶ್ಲಾಘಿಸಲಾಯಿತು, ಇದೇ ಸಂದರ್ಭದಲ್ಲಿ ಪಟ್ಟಣದ ನಾಗಲಾಪುರ ಗ್ರಾಮದ ಜನಾಪದ ಕಲಾವಿದ  ಪಟ್ಟ ರಾಜೇ ಗೌಡರು " ಭಾರತಾಂಬೆಯ ಹೆಮ್ಮೆಯ ಮಕ್ಕಳು ನಾವು ನೀವು ಅವರೆಲ್ಲರೂ " ಎಂಬ ದೇಶಭಕ್ತಿ ಗೀತೆಯನ್ನು ಹಾಡಿದರು. ಇದೇ ಸಂದರ್ಭದಲ್ಲಿ ತಮ್ಮಯ್ಯ ಮತ್ತು ವಸಂತ್ ಮಾತನಾಡಿ ಸ್ವದೇಶಿ ವಸ್ತುಗಳನ್ನು ಬಳಸಿ ಎಂದು ಕರೆನೀಡಿ, ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ನಮ್ಮ ವೀರ ಯೋಧರಿಗೆ ಬೆನ್ನೆಲುಬಾಗಿ ಸಹಾಯ ಹಸ್ತವನ್ನು ನೀಡಬೇಕು ಜವಾಬ್ದಾರಿಯುತ ಪ್ರಜೆಗಳಾಗಿ ದೇಶವು ಇಂದು ಕೊರೋನ ಮಹಾ ಮಾರಿಯ ಕಪಿ ಮುಷ್ಠಿಯಲ್ಲಿರಲು ಕೊರೋನ ವಾರಿಯರ್ಸ್ ಗಳಾಗಿ ಹೋರಾಡ ಬೇಕೆಂದು ಮನವಿ ಮಾಡಿದರು,                                                      

ಸಿಂಹ ಗರ್ಜನೆ ಮಾಡುತ್ತಿರುವ ಡಿ ವೈ ಎಸ್ ಪಿ ಶ್ರೀಯುತ ಗೋಪಿಯವರ ತಂಡ ಸಕಲೇಶಪುರ ಪೋಲೀಸರಿಂದ ಭರ್ಜರಿ ಭೇಟೆ

ಸಿಂಹ ಗರ್ಜನೆ ಮಾಡುತ್ತಿರುವ ಡಿ ವೈ ಎಸ್ ಪಿ  ಶ್ರೀಯುತ ಗೋಪಿಯವರ ತಂಡ ಸಕಲೇಶಪುರ ಪೋಲೀಸರಿಂದ ಭರ್ಜರಿ ಭೇಟೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಉಪ ಅಧೀಕ್ಷಕರ ಕಚೇರಿಯಲ್ಲಿ ಇಂದು ಹಾಸನ ASP ಯವರಾದ  ಶ್ರೀಮತಿ ನಂದಿನಿ ಅವರು ಪತ್ರಿಕಾ ಸಭೆಯನ್ನು  ನಡೆಸಿದರು, ಅವರು ಮಾತನಾಡುತ್ತಾ ಈಗಾಗಲೇ ಸಕಲೇಶಪುರ ಉಪ ಅಧೀಕ್ಷಕರಾದ  ಶ್ರೀಯುತ ಗೋಪಿಯವರ ನೇತೃತ್ವದಲ್ಲಿ  ವೃತ್ತ ನಿರೀಕ್ಷಕರಾದ ಶ್ರೀಯುತ ಗಿರೀಶ್ , ಪಿ ಎಸ್ ಐ  ಚಂದ್ರಶೇಖರ್ , ಹಾಗೂ ಸಿಬ್ಬಂದಿಗಳ   ತಂಡವು ಕಳ್ಳತನದಲ್ಲಿ ಮದ್ಯ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು ಅವರ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು ಆರೋಪಿಗಳು ಆಲೂರು ತಾಲ್ಲೂಕು ಹುಣಸೆ ಗ್ರಾಮದವರಾಗಿದ್ದು ಮೋಹನ್ ಬಿನ್ ಶಿವಣ್ಣ 31 ವರ್ಷ , ಮತ್ತು ಚಂದ್ರು ಬಿನ್ ಚಿಕ್ಕೇಗೌಡ 42 ವರ್ಷ  ಲಾಕ್ ಡೌನ್ ಸಮಯದಲ್ಲಿ ಮದ್ಯವನ್ನು  ಕಳ್ಳತನ ಮಾಡಿ ಲಕ್ಡೌನ್ ನಂತರ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವ ಹುನ್ನಾರದಿಂದ ಮದ್ಯವನ್ನು ಸಾಗಿಸುತ್ತಿದ್ದರು ಎಂದು ತಿಳಿಸಿದರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ನಮ್ಮ ಪೊಲೀಸರು ಸುಮಾರು ಆರು ಲಕ್ಷ ಅರವತ್ತು ಸಾವಿರ ಬೆಲೆ ಬಾಳುವ ಮದ್ಯವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು,  ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ತಿ

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

Image
                         ವೈಯಕ್ತಿಕ ದ್ವೇಷ ಹಾಡಹಗಲೇ  ಯುವಕನ ಬರ್ಬರ ಹತ್ಯೆ ಹಾಸನ ಜಿಲ್ಲೆ ಆಲೂರು ತಾಲೂಕು ಸೊಪ್ಪಿನಹಳ್ಳಿ ಗ್ರಾಮದಲ್ಲಿ ವೈಯಕ್ತಿಕ ದ್ವೇಷದಿಂದಾಗಿ ಯುವಕನೋರ್ವನ ಬರ್ಬರ ಹತ್ಯೆಯನ್ನು ಹಾಡಹಗಲೇ ಮಾಡಲಾಗಿದೆ ಸುಮಾರು ಇಪ್ಪತ್ತೈದು ವರ್ಷ ವಯಸ್ಸಿನ ಮಧು ಎಂಬ ಯುವಕ  ಮತ್ತು ಸೊಪ್ಪಿನಹಳ್ಳಿ ಗ್ರಾಮದ ಶಿವೇಗೌಡರ ಮಗ ರೂಪೇಶ ಎಂಬವರಿಗೆ ವೈಯಕ್ತಿಕ ದ್ವೇಷವಿದ್ದು ದ್ವೇಷದ ಹಿನ್ನೆಲೆಯಲ್ಲಿ ಇಂದು ಭೈರಾಪುರದಿಂದ ಸೊಪ್ಪಿನಹಳ್ಳಿ ಗೆ  ಹೋಗುವ ರಸ್ತೆಯಲ್ಲಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ಹಾಡು ಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಸ್ಥಳಕ್ಕೆ ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾದಿಕಾರಿ  ಶ್ರೀನಿವಾಸ್ ಗೌಡ ಮತ್ತು ಸಕಲೇಶಪುರ  ಅಧೀಕ್ಷಕರಾದ ಗೋಪಿ ಆಲೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಿಕರಾದ  ರೇವಣ್ಣ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಆರೋಪಿಯು ತಲೆಮರೆಸಿಕೊಂಡಿದ್ದು ಹುಡುಕಾಟಕ್ಕೆ ಈಗಾಗಲೇ ತಂಡವನ್ನು ರಚಿಸಲಾಗಿದ್ದು ಶೀಘ್ರದಲ್ಲೇ ಆರೋಪಿಯನ್ನು ಹಿಡಿಯಲಾಗುವುದು ಎಂದು ತಿಳಿಸಿದರು  ಹತ್ಯೆಯ ಹಿನ್ನೆಲೆ : ಸೊಪ್ಪಿನಹಳ್ಳಿ  ಗ್ರಾಮದ ರಮೇಶ್ ಎಂಬುವರ ಮಗಳನ್ನು ಮಧು ಎಂಬಾತನು ಅಪಹರಿಸಿಕೊಂಡು ಹೋಗಿದ್ದು ಈ ಕುರಿತಾಗಿ ಕೇಸು ಕೂಡ ದಾಖಲಾಗಿದ್ದು ಜೈಲಿಗೆ ಕೂಡ ಹೋಗಿ ಬಂದಿರುತ್ತಾನೆ ಈ   ದ್ವೇಷವನ್ನು  ಇಟ್ಟುಕೊಂಡಂತಹ ರಮೇಶ್ ಅವರ ತಮ್ಮ ರೂಪೇಶ್

ಸರ್ಕಾರಕ್ಕೆ ಕಾಣದ ಬಡವರ ಗೋಳು ! ಮನೆಯ ಮಾಲೀಕರಿಗೆ ಚೆಲ್ಲಾಟ ಬಾಡಿಗೆದಾರರಿಗೆ ಪ್ರಾಣ ಸಂಕಟ

Image
ಕೊರೊನ ಮಹಾಮಾರಿಯ ದಾಳಿಯಿಂದ ಇಂದು ಜನತೆ ತ್ತತ್ತರಿಸಿ  ಹೋಗಿದೆ , ಈ ಮಾರಿ  ಯಾವಾಗ, ಯಾರಿಂದ, ಹೇಗೆ ಬಂದು  ಹೊಕ್ಕರಿಸುತ್ತದೆ ಎಂಬುದೇ ತಿಳಿಯುತ್ತಿಲ್ಲ. ಇದನ್ನು ತಪ್ಪಿಸಲು ನಮ್ಮ ಘನ ಸರ್ಕಾರ ಈಗಾಗಲೇ ಇಡೀ ದೇಶವನ್ನೇ ಸರಿ ಸುಮಾರು 40 ದಿನಗಳ ಕಾಲ ಲಾಕ್ ಡೌನ್ ಮಾಡಿತ್ತು , ಹಾಗೂ ಎಲ್ಲರು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿತ್ತು ಇದರ ಪರಿಣಾಮ ದುಡಿಮೆಯಿಲ್ಲದ ಜನರ ಜೀವನ ವ್ಯವಸ್ಥೆ ಸಂಪೂರ್ಣವಾಗಿ ಏರುಪೇರಾಗಿ ಹೋಗಿತ್ತು. ಇಲ್ಲಿ ಹಣ ವಿದ್ದವನು ಹೇಗೂ ಈ ಸಮಸ್ಯೆಯಿಂದ ಪಾರಾಗಿದ್ದಾನೆ ಆದರೆ ಇಲ್ಲಿ ನಾವು ಯೋಚಿಸಬೇಕಾಗಿರುವುದು ಮಧ್ಯಮವರ್ಗದ ಮತ್ತು ಕೊಲಿ ಮಾಡಿ ಬದುಕಬೇಕಾಗಿರುವ ವರ್ಗದ ಬಗ್ಗೆ. ಇದರಲ್ಲಿ ಸರಿ ಸುಮಾರು 50ರಿಂದ 60 ರಷ್ಟು ಜನ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ, ತಮ್ಮ ಪುಟ್ಟ ಬದುಕನ್ನು ಕಟ್ಟಕೊಳ್ಳುವ ಕನಸು ಕಂಡಿರುವ ಇವರು ಈ ಕೊರೊನ ಮಹಾಮಾರಿಯ ದಾಳಿಯಿಂದ ಇಂದು ನಲುಗಿ ಹೋಗಿದ್ದಾರೆ ತಮ್ಮ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಇವರಿಗೆ ತಾವು ಖರೀದಿಸಿದ ಯಾವುದೊ ಒಂದು ಗೃಹ ಬಳೆಕೆಯ ವಸ್ತುವಿನ EMI ಕಟ್ಟಲು ಮನೆ ಬಾಡಿಗೆ ಕಟ್ಟಲು ಪರದಾಡುತ್ತಿದ್ದಾರೆ, ಇದನ್ನು ಅರಿತ ನಮ್ಮ ಸರ್ಕಾರ ಮೂರು ತಿಂಗಳು EMI ಕಟ್ಟಲು ಮತ್ತು ಮನೆ ಬಾಡಿಗೆ ಕಟ್ಟಲು ವಿನಾಯತಿ ಕೊಟ್ಟಿದೆ ಆದರೆ ಇದು ಯಾವುದೇ  ಲಿಖಿತ ಸುತ್ತೋಲೆ ಇಲ್ಲ. ಇದನ್ನೇ ಮುಂದಿಟ್ಟುಕೊಂಡಿರುವ ಮನೆ ಮಾಲೀಕರು ಈ ನಿಯಮ ಬೆಂಗಳೂರಿಗೆ ಮಾತ್ರ ಸಂಬಂಧ ಪಟ್ಟ ವಿ

ತಪ್ಪಾಯ್ತಾ ಲಾಕ್ ಡೌನ್ ಸಡಿಲಿಕೆ ? ಮಿತಿಮೀರುತ್ತಿರುವ ಕೊರೊನ ಮಹಾಮಾರಿಯ ಅಟ್ಟಹಾಸ

Image
ತಪ್ಪಾಯ್ತಾ ಲಾಕ್ ಡೌನ್ ಸಡಿಲಿಕೆ ?  ಮಿತಿಮೀರುತ್ತಿರುವ                    ಕೊರೊನ ಮಹಾಮಾರಿಯ ಅಟ್ಟಹಾಸ  ಇಂದು ದೇಶ ಕೊರೊನ ಮಹಾಮಾರಿಯ ಕೈಯಿಂದ ತಪ್ಪಿಸಿಕೊಳಲು ಹರಸಾಹಸ ಪಡುತ್ತಿರುವಾಗ ವೈದ್ಯರು ದಾದಿಯರು ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ , ಪೋಲೀಸ್ ಇಲಾಖೆ ಬೀದಿಯನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡು ಜನರ ಜೀವ ಉಳಿಸಲು ಹೆಣಗಾಡುತ್ತಿದೆ ಇವೆಲ್ಲದರ ನಡುವೆ ಇಡೀ ದೇಶವನ್ನೇ  ಲಾಕ್ ಡೌನ್ ಮಾಡಿ ಕೊರೊನ ವಿರುದ್ಧ ಹೋರಾಡಿದ ನಮ್ಮ ಸರ್ಕಾರ ದಿನೇದಿನೇ ಆರ್ಥಿಕವಾಗಿ ಹಿಂದೆ ಸರಿಯುತ್ತ ಹೋಯಿತು, ಹಿಂದೆಂದೂ ಕಾಣದ ಮಟ್ಟಿಗೆ ಆರ್ಥಿಕ ಮುಗ್ಗಟ್ಟು ದೇಶದಲ್ಲಿ  ಪ್ರಾರಂಭ ವಾಗುವ ಮುನ್ಸೂಚನೆಗಳು ಕಾಣತೊಡಗಿದವು ಇದರಿಂದ ಚೇತರಿಸಿಕೊಳ್ಳುವ  ಉದ್ದೇಶದಿಂದ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವಾಗ ಕೊರೊನದ  ಕರಾಳತೆ ಕಡಿಮೆಯಾಗುತ್ತ ಬರತೊಡಗಿತು , ಹಾಗೂ ದಿನೇದಿನೇ ಜನರ ಜೀವನ ಸ್ಥಿತಿಯು ಅದಗೆಡುತ್ತಾ ಬರತೊಡಗಿತು  ಇದರಿಂದ ಸರ್ಕಾರ ಕೊರೊನ ತೀವ್ರತೆಯನ್ನು ಅಳೆಯಲು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಲಾಕ್ ಡೌನ್ ನನ್ನ  ನಿದಾನವಾಗಿ ಸಡಿಲಮಾಡುತ್ತಾ ಬಂದಿತು, ಇದರಿಂದ  ಮನೆಯಲ್ಲೇ  ಇದ್ದ ಜನರು  ಕೊರೊನ ಕರಾಳೆತೆಯನ್ನು ಮರೆತು ಸಾಮಾಜಿಕ ಅಂತರವನ್ನು ಮರೆತು ಓಡಾಲು ಪ್ರಾರಂಭಿಸಿದರು ,ಹಾಗಾದರೆ ಸರ್ಕಾರ ಲಾಕ್ ಡೌನ್ ಸಡಿಲ ಮಾಡಿದ್ದು ತಪ್ಪಾಯಿತಾ ? ಜನರ ಹಿತದೃಷ್ಟಿಯಿಂದ ಸಡಿಲವಾದ ಲಾಕ್ ಡೌನ್ನಿಂದಾಗಿ ಇಂದು ಕೊರೊನ