ಸೇವಿಂಗ್ ಸಲೂನ್ ಗಳಿಗೆ ಇಲ್ಲವೇ ಕರೋನಾ ಭೀತಿ,
ಇಡೀ ದೇಶವೇ ಇಂದು ಕೊರೊನ ಭೀತಿಯಿಂದ ಬಳಲುತ್ತಿರುವಾಗ ನಮ್ಮ ಹೆಮ್ಮೆಯ ಪ್ರದಾನ ಮಂತ್ರಿಯವರು ಈ ಮಹಾಮಾರಿಯನ್ನು ಹೊಡೆದೋಡಿಸುವ ಸಲುವಾಗಿ ಇಂದು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿಸಿದ್ದಾರೆ ಇದು ಕೇವಲ ಅವರೊಬ್ಬರಿಗಲ್ಲ, ತನ್ನ ದೇಶದ ಹಿತವನ್ನು ಕಾಯುವ ಪ್ರಧಾನಿಯವರು ಸಾಮಾಜಿಕ ಕಳಕಳಿಯಿಂದ ಈ ಆದೇಶವನ್ನು ಹೊರಡಿಸಿದ್ದಾರೆ,ಆದ್ರೆ ಇದನ್ನ ಕೆಲವು ಜನರು ಮರೆತು ಇದು ನಮಗಲ್ಲ ಎಂಬಂತೆ ತಿರುಗಾಡುತ್ತಿದ್ದಾರೆ . ಇನ್ನು ಹಾಸನ ನಗರದಲ್ಲಿ ಕೆಲವೊಂದು ಸೇವಿಂಗ್ ಸಲೂನ್ ಗಳು ಹಣವೇ ಮುಖ್ಯ ವೆಂಬಂತೆ ಅಂಗಡಿ ಬಾಗಿಲು ತೆರೆದುಕೊಂಡು ದಿನನಿತ್ಯದ ಕೆಲಸ ಮಾಡುತ್ತಿದ್ದಾರೆ ,ಯಾರಾದರೂ ಇವರನ್ನು ಪ್ರಶ್ನಿಸಿದರೆ ಇಲ್ಲ ನಾವು ೧೦ ಗಂಟೆಯ ವರೆಗೂ ತೆರೆಯಬಹುದು ಎಂಬ ಉತ್ತರ ನೀಡುತ್ತಾರೆ, ಇದಕ್ಕೊ ಹೆಚ್ಚಾಗಿ ಹೇಳಲು ಹೋದರೆ ನಮ್ಮ ಸಂಸಾರದ ಜವಾಬ್ದಾರಿಯನ್ನ ನೀವು ತಗೋತಿರ ? ಎಂದು ಕೇಳುತ್ತಾರೆ, ಹಾಗಾದರೆ ದೇಶದಲ್ಲಿ ಇವರಿಗೆ ಮಾತ್ರ ತೊಂದರೆ ಆಗಿದೆಯಾ ? ಅಥವಾ ಕೊರೋನ ಏನು ನಾನು ಬೆಳಗ್ಗೆ ೧೦ ಗಂಟೆ ತನಕ ಬರೋದಿಲ್ಲ ಎಂದು ಇವರಿಗೆ ಹೇಳಿದೆಯಾ ?ಎಂದು ಇವರನ್ನು ಕೇಳಲೇ ಬೇಕಾಗಿದೆ, ಅದು ಅಲ್ಲದೆ ಈ ರುತ್ತಿ ಬಹಳ ಸೂಕ್ಷ್ಮ ವಾದುದ್ದು ಇದು ವ್ಯಕ್ತಿಯನ್ನು ತುಂಬಾ ಹತ್ತಿರದಿಂದ ಸಂಪರ್ಕಿಸುವ ಕೆಲಸವಾಗಿದೆ
ಈ ಕುರಿತಾಗಿ ಹಾಸನ ಜಿಲ್ಲೆಯ ಸವಿತಾ ಸಮಾಜದ ಜಿಲಾಧ್ಯಕ್ಷರಾದ ರವಿಕುಮಾರ್ ರವರನ್ನು ನಮ್ಮ ತಂಡ ಭೇಟಿ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗದೇ ದೊರವಾಣಿ ಕರೆ ಮಾಡಿ ವಿಚಾರಿಸಲು ನಾವು ನಮ್ಮ ಕೆಡೆಯಿಂದ ಎಲ್ಲರಿಗೂ ಈ ಮೊದಲೇ ತಿಳಿಸಿದ್ದೇವೆ, ನಮ್ಮ ಸಂದೇಶಕ್ಕೆ ಯಾರೂ ಕಿವಿಕೊಡುತ್ತಿಲ್ಲ ಆದ್ದರಿಂದ ಅಧಿಕಾರಿಗಳು ಕಾನೂನಿನ ಪ್ರಕಾರ ಕ್ರಮ ಕೈ ಗೊಳ್ಳಬಹುದು ಎಂದು ತಿಳಿಸಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಹಾಸನ ನಗರ ಅಧ್ಯಕ್ಷರಾದ ವೆಂಕಟೇಶ್ ರವರನ್ನು ಕರೆ ಮಾಡಿ ಮಾತನಾಡಿಸಿದ್ದು ನಾಜೂಕಾಗಿ ಮಾತನಾಡಿ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಂಡಿದ್ದಾರೆ ಹಾಗೂ ಜಿಲ್ಲಾ ಪ್ರದಾನ ಕಾರ್ಯದರ್ಶಿಯವರಾದ ಶಿವಣ್ಣ ರವರನ್ನು ಮಾತನಾಡಿಸಿದ್ದು ಅದರ ವೀಡಿಯೊವನ್ನುಈ ಕೆಳಗೆ ಹಾಕಲಾಗಿದೆ, ಹಾಗೂ ಈ ಕುರಿತಾಗಿ ಜಿಲ್ಲಾಡಳಿತ ಈ ಕೂಡಲೇ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರಿಕೆ ಕೇಳಿಕೊಳ್ಳುತ್ತದೆ
,
ಇದು ಮಾಸುದ್ದಿಯ ಸುದ್ದಿಜಾಲ
ಯೋಗೇಶ ಬಿ ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು
ಹಾಸನ ಜಿಲ್ಲೆ

Comments
Post a Comment