Posts

Showing posts from July, 2020

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ

ಹೊಳೆನರಸೀಪುರ: ದೇಶಕ್ಕೆ ಪ್ರಣಾರ್ಪಣೆ ಮಾಡಿ ಹುತಾತ್ಮರಾದ ಕಾರ್ಗಿಲ್ ವೀರ ಯೋಧರ ಸವಿ ನೆನಪಿಗಾಗಿ ಆಚರಿಸಿದ ಕಾರ್ಗಿಲ್ ವಿಜಯೋತ್ಸವಕ್ಕೆ ಹೊಳೆನರಸೀಪುರದ ಸುಭಾಷ್ ಚೌಕ ಇಂದು ಸಾಕ್ಷಿಯಾಯಿತು, ಪಟ್ಟಣದ ನಿವೃತ್ತ ಯೋಧರು, ದೇಶಾಭಿಮಾನಿಗಳು, ದೇಶ ಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದ ಈ ಸರಳ ಸಮಾರಂಭದಲ್ಲಿ ವೀರ ಯೋಧರ ಭಾವ ಚಿತ್ರಕ್ಕೆ ನಿವೃತ್ತ ಯೋಧರುಗಳಾದ ಮಂಜುನಾಥ್,ಮಂಜೇ ಗೌಡ,ಈಶ್ವರ,ವಸಂತ್ ಕುಮಾರ್ ಅಶೋಕ್,ಶಿವಣ್ಣ ರವರು ಜ್ಯೋತಿಯನ್ನು ಬೆಳಗುವುದರ ಮೂಲಕ ಚಲನೆಯನ್ನು ನೀಡಿದರು. ನಂತರ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ವೀರ ಯೋಧರ ತ್ಯಾಗ ಬಲಿದಾನವನ್ನು ಮುಕ್ತ ಕಂಠದಿಂದ ಶ್ಲಾಘಿಸಲಾಯಿತು, ಇದೇ ಸಂದರ್ಭದಲ್ಲಿ ಪಟ್ಟಣದ ನಾಗಲಾಪುರ ಗ್ರಾಮದ ಜನಾಪದ ಕಲಾವಿದ  ಪಟ್ಟ ರಾಜೇ ಗೌಡರು " ಭಾರತಾಂಬೆಯ ಹೆಮ್ಮೆಯ ಮಕ್ಕಳು ನಾವು ನೀವು ಅವರೆಲ್ಲರೂ " ಎಂಬ ದೇಶಭಕ್ತಿ ಗೀತೆಯನ್ನು ಹಾಡಿದರು. ಇದೇ ಸಂದರ್ಭದಲ್ಲಿ ತಮ್ಮಯ್ಯ ಮತ್ತು ವಸಂತ್ ಮಾತನಾಡಿ ಸ್ವದೇಶಿ ವಸ್ತುಗಳನ್ನು ಬಳಸಿ ಎಂದು ಕರೆನೀಡಿ, ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ನಮ್ಮ ವೀರ ಯೋಧರಿಗೆ ಬೆನ್ನೆಲುಬಾಗಿ ಸಹಾಯ ಹಸ್ತವನ್ನು ನೀಡಬೇಕು ಜವಾಬ್ದಾರಿಯುತ ಪ್ರಜೆಗಳಾಗಿ ದೇಶವು ಇಂದು ಕೊರೋನ ಮಹಾ ಮಾರಿಯ ಕಪಿ ಮುಷ್ಠಿಯಲ್ಲಿರಲು ಕೊರೋನ ವಾರಿಯರ್ಸ್ ಗಳಾಗಿ ಹೋರಾಡ ಬೇಕೆಂದು ಮನವಿ ಮಾಡಿದರು,                                                      

ಸಿಂಹ ಗರ್ಜನೆ ಮಾಡುತ್ತಿರುವ ಡಿ ವೈ ಎಸ್ ಪಿ ಶ್ರೀಯುತ ಗೋಪಿಯವರ ತಂಡ ಸಕಲೇಶಪುರ ಪೋಲೀಸರಿಂದ ಭರ್ಜರಿ ಭೇಟೆ

ಸಿಂಹ ಗರ್ಜನೆ ಮಾಡುತ್ತಿರುವ ಡಿ ವೈ ಎಸ್ ಪಿ  ಶ್ರೀಯುತ ಗೋಪಿಯವರ ತಂಡ ಸಕಲೇಶಪುರ ಪೋಲೀಸರಿಂದ ಭರ್ಜರಿ ಭೇಟೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಉಪ ಅಧೀಕ್ಷಕರ ಕಚೇರಿಯಲ್ಲಿ ಇಂದು ಹಾಸನ ASP ಯವರಾದ  ಶ್ರೀಮತಿ ನಂದಿನಿ ಅವರು ಪತ್ರಿಕಾ ಸಭೆಯನ್ನು  ನಡೆಸಿದರು, ಅವರು ಮಾತನಾಡುತ್ತಾ ಈಗಾಗಲೇ ಸಕಲೇಶಪುರ ಉಪ ಅಧೀಕ್ಷಕರಾದ  ಶ್ರೀಯುತ ಗೋಪಿಯವರ ನೇತೃತ್ವದಲ್ಲಿ  ವೃತ್ತ ನಿರೀಕ್ಷಕರಾದ ಶ್ರೀಯುತ ಗಿರೀಶ್ , ಪಿ ಎಸ್ ಐ  ಚಂದ್ರಶೇಖರ್ , ಹಾಗೂ ಸಿಬ್ಬಂದಿಗಳ   ತಂಡವು ಕಳ್ಳತನದಲ್ಲಿ ಮದ್ಯ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು ಅವರ ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು ಆರೋಪಿಗಳು ಆಲೂರು ತಾಲ್ಲೂಕು ಹುಣಸೆ ಗ್ರಾಮದವರಾಗಿದ್ದು ಮೋಹನ್ ಬಿನ್ ಶಿವಣ್ಣ 31 ವರ್ಷ , ಮತ್ತು ಚಂದ್ರು ಬಿನ್ ಚಿಕ್ಕೇಗೌಡ 42 ವರ್ಷ  ಲಾಕ್ ಡೌನ್ ಸಮಯದಲ್ಲಿ ಮದ್ಯವನ್ನು  ಕಳ್ಳತನ ಮಾಡಿ ಲಕ್ಡೌನ್ ನಂತರ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವ ಹುನ್ನಾರದಿಂದ ಮದ್ಯವನ್ನು ಸಾಗಿಸುತ್ತಿದ್ದರು ಎಂದು ತಿಳಿಸಿದರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ನಮ್ಮ ಪೊಲೀಸರು ಸುಮಾರು ಆರು ಲಕ್ಷ ಅರವತ್ತು ಸಾವಿರ ಬೆಲೆ ಬಾಳುವ ಮದ್ಯವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು,  ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ತಿ

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

Image
                         ವೈಯಕ್ತಿಕ ದ್ವೇಷ ಹಾಡಹಗಲೇ  ಯುವಕನ ಬರ್ಬರ ಹತ್ಯೆ ಹಾಸನ ಜಿಲ್ಲೆ ಆಲೂರು ತಾಲೂಕು ಸೊಪ್ಪಿನಹಳ್ಳಿ ಗ್ರಾಮದಲ್ಲಿ ವೈಯಕ್ತಿಕ ದ್ವೇಷದಿಂದಾಗಿ ಯುವಕನೋರ್ವನ ಬರ್ಬರ ಹತ್ಯೆಯನ್ನು ಹಾಡಹಗಲೇ ಮಾಡಲಾಗಿದೆ ಸುಮಾರು ಇಪ್ಪತ್ತೈದು ವರ್ಷ ವಯಸ್ಸಿನ ಮಧು ಎಂಬ ಯುವಕ  ಮತ್ತು ಸೊಪ್ಪಿನಹಳ್ಳಿ ಗ್ರಾಮದ ಶಿವೇಗೌಡರ ಮಗ ರೂಪೇಶ ಎಂಬವರಿಗೆ ವೈಯಕ್ತಿಕ ದ್ವೇಷವಿದ್ದು ದ್ವೇಷದ ಹಿನ್ನೆಲೆಯಲ್ಲಿ ಇಂದು ಭೈರಾಪುರದಿಂದ ಸೊಪ್ಪಿನಹಳ್ಳಿ ಗೆ  ಹೋಗುವ ರಸ್ತೆಯಲ್ಲಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ಹಾಡು ಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಸ್ಥಳಕ್ಕೆ ಹಾಸನ ಜಿಲ್ಲೆಯ ಪೊಲೀಸ್ ವರಿಷ್ಠಾದಿಕಾರಿ  ಶ್ರೀನಿವಾಸ್ ಗೌಡ ಮತ್ತು ಸಕಲೇಶಪುರ  ಅಧೀಕ್ಷಕರಾದ ಗೋಪಿ ಆಲೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಿಕರಾದ  ರೇವಣ್ಣ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಆರೋಪಿಯು ತಲೆಮರೆಸಿಕೊಂಡಿದ್ದು ಹುಡುಕಾಟಕ್ಕೆ ಈಗಾಗಲೇ ತಂಡವನ್ನು ರಚಿಸಲಾಗಿದ್ದು ಶೀಘ್ರದಲ್ಲೇ ಆರೋಪಿಯನ್ನು ಹಿಡಿಯಲಾಗುವುದು ಎಂದು ತಿಳಿಸಿದರು  ಹತ್ಯೆಯ ಹಿನ್ನೆಲೆ : ಸೊಪ್ಪಿನಹಳ್ಳಿ  ಗ್ರಾಮದ ರಮೇಶ್ ಎಂಬುವರ ಮಗಳನ್ನು ಮಧು ಎಂಬಾತನು ಅಪಹರಿಸಿಕೊಂಡು ಹೋಗಿದ್ದು ಈ ಕುರಿತಾಗಿ ಕೇಸು ಕೂಡ ದಾಖಲಾಗಿದ್ದು ಜೈಲಿಗೆ ಕೂಡ ಹೋಗಿ ಬಂದಿರುತ್ತಾನೆ ಈ   ದ್ವೇಷವನ್ನು  ಇಟ್ಟುಕೊಂಡಂತಹ ರಮೇಶ್ ಅವರ ತಮ್ಮ ರೂಪೇಶ್